Advertisement

ಕೋವಿಡ್‌-19 ಕಾಲ : ಮೆಡಿಕಲ್‌ ವಸಾಹತು ಶಾಹಿ ಮತ್ತು ಆಫ್ರಿಕಾ

06:38 PM Apr 10, 2020 | mahesh |

ಮಣಿಪಾಲ: ಬಡ ರಾಷ್ಟ್ರ ಎಂದರೇ ಹಲವರಿಗೆ ತಾತ್ಸಾರದ ಜತೆಗೆ ಪುಟ್ಟ ತೋರ್ಪಡಿಕೆಯ ಕನಿಕರ. ಮತ್ತೂ ಕೆಲವರಿಗೆ ಅದು ಪ್ರಯೋಗ ಮಾಡುವ ಕೇಂದ್ರ. ಆಫ್ರಿಕಾ ದೇಶವೀಗ ಎಲ್ಲರ ಪ್ರಯೋಗ ಪಶುವಿನಂತಾಗಿದೆ.  ಈ ಹಿಂದಿನಿಂದಲೂ ಮಾರಣಾಂತಿಕ ಕಾಯಿಲೆಗಳು ಅಪ್ಪಳಿಸಿದಾಗ ವೈದ್ಯರು, ವೈದ್ಯಕೀಯ ವಿಜ್ಞಾನಿಗಳಿಗೆ ಆಫ್ರಿಕಾ ಪ್ರಯೋಗ ಶಾಲೆಯಂತೆ ಕಂಡಿತ್ತು. ಈ ಕೋವಿಡ್‌ 19 ಸಂದರ್ಭದಲ್ಲೂ ಅದೇ ಆಗಿದೆ.

Advertisement

ಬುಧವಾರ ಫ್ರೆಂಚ್‌ ವೈದ್ಯರೊಬ್ಬರು COVID-19 ಸಾಂಕ್ರಾಮಿಕಕ್ಕೆ ಲಸಿಕೆಗಳನ್ನು ಆಫ್ರಿಕನ್ನರ ಮೇಲೆ ಪ್ರಯೋಗಿಸಬೇಕು ಎಂದಿದ್ದರು. ಬಳಿಕ ಈ ಪ್ರಸ್ತಾವ ವಿವಾದಗಳಿಗೆ ಆಹಾರವಾಗಿತ್ತು. ಆಫ್ರಿಕಾದಲ್ಲಿ ಕೊರತೆ ಇರುವ ಮಾಸ್ಕ್ ಮತ್ತು ಇತರ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಪೂರೈಸುವ ಬದಲು ಪ್ರಯೋಗಕ್ಕೆ ಮುಂದಾದದ್ದು ಟೀಕೆಗೆ ಗುರಿಯಾಯಿತು. ಆಫ್ರಿಕಾದ ಮೇಲೆ ಜನರ ಅಮಾನವೀಯತೆ, ಗುಲಾಮರ ವ್ಯಾಪಾರ ಮತ್ತು ವಸಾಹತುಶಾಹಿಯ ಆಕ್ರ ಮಣ ಹಿಂದಿನಿಂದಲೂ ನಡೆದು ಬಂದಿತ್ತು. ಎರ ಡನೇ ದರ್ಜೆಯ ಮಾನವೀಯತೆಯನ್ನು ಈ ದೇಶಗಳ ಮೇಲೆ ತೋರಿಸುತ್ತಿರುವುದು ಇಂದಿಗೂ ತಪ್ಪಿಲ್ಲ.

ಕಪ್ಪು ಮತ್ತು ಬಿಳಿ ದೇಹ ರಚನೆಯ ಕತೆ
ಸಾರ್ಟ್‌ಜಿ ಬಾಟ್ಮ್ಯಾನ್‌ ಅಥವಾ ಸಾರಾ ಬಾಟ್ಮ್ಯಾನ್‌ ಎಂದು ಕರೆಯಲ್ಪಡುವ, ಖೋಖೋಯಿ ಮಹಿಳೆ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದವರು. 1810 ರಲ್ಲಿ, ಅವಳನ್ನು ಅಪಹರಿಸಿ ಯುರೋಪಿಗೆ ಕರೆದೊಯ್ಯ ಲಾಗಿತ್ತು. ಅವಳ ದೇಹ ರಚನೆ ದೊಡ್ಡದಿದ್ದ ಕಾರಣಕ್ಕೆ ಯುರೋ ಪಿಯನ್‌ ಜನರಿಗೆ ಪ್ರದರ್ಶನದ ವಸ್ತು ವಾಗಿದ್ದರು. ಅವಳು ಮನುಷ್ಯಳಲ್ಲ ಎಂದು ಭಾವಿಸಿದ್ದರಿಂದ ಅನೇಕರು ಅವಳನ್ನು ನೋಡಲು ಬಂದರು. ಅವಳು ತೀರಿಕೊಂಡಾಗ, ಫ್ರೆಂಚ್‌ ಶಸ್ತ್ರಚಿಕಿತ್ಸ ಕ ನೊಬ್ಬ ಅವಳ ದೇಹವನ್ನು ನೋಡಿ ಅವಳಿಗೆ ಕೋತಿ ಯಂತಹ ಲಕ್ಷಣಗಳಿವೆ ಎಂದಿದ್ದ.

2002ರಲ್ಲಿ ದಕ್ಷಿಣ ಆಫ್ರಿಕಾದ ಸರಕಾರವು ಪ್ಯಾರಿಸ್‌ನ ಫ್ರೆಂಚ್‌ ನ್ಯಾಷನಲ್‌ ಮ್ಯೂಸಿಯಂನಿಂದ ಆಕೆಯ ದೇಹವನ್ನು ಹಿಂಪಡೆಯಲು ಯಶಸ್ವಿಯಾಯಿತು. ಅಲ್ಲಿ ಅವರ ಅವಶೇಷಗಳು 150 ವರ್ಷಗಳಿಗೂ ಹೆಚ್ಚು ಕಾಲ ಪ್ರದರ್ಶನದಲ್ಲಿತ್ತು. ಬಿಳಿ ಮತ್ತು ಕಪ್ಪು ಜನರ ನಡುವೆ ಜೈವಿಕ ಮತ್ತು ವೈಜ್ಞಾನಿಕ ವ್ಯತ್ಯಾಸಗಳನ್ನು ತಿಳಿಯಲು ಪ್ರಯತ್ನಿಸಿದ ವೈದ್ಯ ಲೋಕ ಫ್ರೆಂಚ್‌ ನದು. ಈ ಅನ್ವೇಷಣೆಯಲ್ಲಿ ಬಾಟ್ಮ್ಯಾನ್‌ ಅವರು ಸಾವನ್ನಪ್ಪಬೇಕಾಯಿತು.

ವೈದ್ಯಕೀಯ ಪರೀಕ್ಷೆಗಳ ಇತಿಹಾಸ
1994 ರಲ್ಲಿ ಜಿಂಬಾಬ್ವೆಯ ಜನರ ಮೇಲೆ ಪ್ರಯೋಗಗಳು ಮತ್ತು ಪರೀಕ್ಷೆಗಳನ್ನು ನಡೆಸಲಾಗಿತ್ತು. ಯುಎಸ್‌ ಮೂಲದ ಸಿಡಿಸಿ ಮತ್ತು ಎನ್‌ಐಎಚ್‌ ರೋಗಿಗಳಿಗೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡಿದ್ದವು. 1900 ರ ದಶಕದ ಆರಂಭದಲ್ಲಿ ನಮೀಬಿಯಾದಲ್ಲಿ, ಜರ್ಮನಿಯ ವೈದ್ಯರು ಹೆರೆರೊ ಮಹಿಳೆಯರ ಮೇಲೆ ಕ್ರಿಮಿನಾಶಕ ಪರೀಕ್ಷೆಗಳನ್ನು ನಡೆಸಿದ್ದರು. 2014ರಲ್ಲಿ ಎಬೋಲ ಸೋಂಕಿನ ಕಾರಣಕ್ಕೆ ಪಶ್ಚಿಮ ಆಫ್ರಿಕಾದಿಂದ 250,000 ಕ್ಕಿಂತ ಹೆಚ್ಚು ರಕ್ತದ ಮಾದರಿಗಳನ್ನು ಫ್ರಾನ್ಸ್‌, ಯುಕೆ ಮತ್ತು ಯುಎಸ್‌ ನಲ್ಲಿನ ಪ್ರಯೋಗಾಲಯಗಳು ರೋಗಿಗಳಿಂದ ಸಂಗ್ರಹಿಸಿವೆ. ಯಾವುದೇ ತಿಳುವಳಿಕೆಯಿಲ್ಲದೇ, ಒಪ್ಪಿಗೆಯಿಲ್ಲದೆ ಬಲವಂತವಾಗಿ ರೋಗಿಗಳು ಎಬೋಲಾ ಪರೀಕ್ಷೆ ಮತ್ತು ಚಿಕಿತ್ಸೆಗೆ ಒಳಗಾಗಿದ್ದರು.

Advertisement

ಆಫ್ರಿಕಾದಲ್ಲಿ ಪ್ರತಿ ವರ್ಷ ಟಿಬಿ, ಮಲೇರಿಯಾ ಮತ್ತು ಹೆಪಟೈಟಿಸ್‌ನಂತಹ ರೋಗಗಳು ಲಕ್ಷಾಂತರ ಜನರನ್ನು ಕೊಲ್ಲುತ್ತಿವೆ. ಅವುಗಳನ್ನು ನಿರ್ಮೂಲನೆ ಮಾಡಲು ಅಂತಾರಾಷ್ಟ್ರೀಯವಾಗಿ ಪ್ರಯತ್ನಗಳು ಹೇಳಿಕೊಳ್ಳುವ ಮಟ್ಟಿಗೆ ಸಾಗುತ್ತಿಲ್ಲ. ಹಾಗಾಗಿ ಇಂದಿಗೂ ವಿಶ್ವಕ್ಕೆ ಅಫ್ರಿಕಾ ಒಂದು ಪ್ರಯೋಗಾಲಯ.

ಮರು ಪ್ರಶ್ನೆಗೆ ವೈದ್ಯರ ಉತ್ತರ ಇಲ್ಲ
ಆಫ್ರಿಕನ್ನರ ಮೇಲೆ ಯಾಕೆ ಈ ಲಸಿಕೆಗಳನ್ನು ಪ್ರಯೋಗ ಮಾಡುತ್ತೀರಿ ಎಂಬ ಪ್ರಶ್ನೆಗಳಿಗೆ ವೈರಸ್‌ಗೆ ಈ ಸ್ಥಳೀಯ ಮತ್ತು ಕಪ್ಪು ಮೈಬಣ್ಣದ ಜನರ ರೋಗ ನಿರೋಧಕ ಶಕ್ತಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಎಂದಿದ್ದಾರೆ. ಆದರೆ ಎಲ್ಲಾ ಮಾನವರ ಜೈವಿಕ ಸಿದ್ಧತೆಯು ಒಂದೇ ರೀತಿಯದ್ದು ಎಂಬ ಮರು ಪ್ರಶ್ನೆಗೆ ವೈದ್ಯರ ಉತ್ತರ ಇಲ್ಲ.

ಕಾರ್ತಿಕ್‌ ಆಮೈ

Advertisement

Udayavani is now on Telegram. Click here to join our channel and stay updated with the latest news.

Next