Advertisement

Darling Krishna ನಟನೆಯ ‘ಕೌಸಲ್ಯಾ ಸುಪ್ರಜಾ ರಾಮ’ ಜುಲೈ 28 ಕ್ಕೆ ಬಿಡುಗಡೆ

08:57 PM Jul 01, 2023 | Team Udayavani |

ಬೆಂಗಳೂರು: ಡಾರ್ಲಿಂಗ್ ಕೃಷ್ಣ ಅವರು ನಟಿಸಿರುವ ಟೈಟಲ್ ಮೂಲಕ ಗಮನ ಸೆಳೆದಿರುವ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರ ಜುಲೈ 28 ಕ್ಕೆ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

Advertisement

ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಕೃಷ್ಣ ಅವರಿಗೆ ಜೋಡಿಯಾಗಿ ಬೃಂದಾ ಆಚಾರ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಪೋಸ್ಟರ್‌ನಲ್ಲಿ ‘ಟೇಲ್‌ ಆಫ್‌ ಎ ರಿಯಲ್‌ ಮ್ಯಾನ್‌’ ಅನ್ನುವ ಬರಹ ಈಗಾಗಲೇ ಗಮನ ಸೆಳೆದಿದೆ. ಹೆಣ್ಣಿನ ದೃಷ್ಟಿಕೋನಲ್ಲಿ ನಿಜವಾದ ಗಂಡು ಯಾರು? ಆತ ಹೇಗಿರಬೇಕು ಅನ್ನುವ ಕಥೆ ಚಿತ್ರದ್ದು ಎಂದು ನಿರ್ದೇಶಕ ಶಶಾಂಕ್‌ ಹೇಳುತ್ತಾರೆ.

ಚಿತ್ರವನ್ನು ಬಿ.ಸಿ. ಪಾಟೀಲ್‌ ಅವರ ಕೌರವ ಪ್ರೊಡಕ್ಷನ್‌ ಮತ್ತು ಶಶಾಂಕ್‌ ಸಿನಿಮಾವು ಜಂಟಿಯಾಗಿ ನಿರ್ಮಾಣ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next