Advertisement
ಕೊಟ್ಟೂರಿನ ಪ್ರವಾಸಿ ಮಂದಿರದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಆಡಳಿತದಿಂದ ಇಲ್ಲಿನ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಆ. 15ರ ಬೆಳಗ್ಗೆ 8:30ಕ್ಕೆ ಧ್ವಜಾರೋಹಣ ನಡೆಯಲಿದೆ. ಶಾಸಕ ಎಸ್. ಭೀಮಾನಾಯ್ಕ ಧ್ವಜಾರೋಹಣ ನೆರವೇರಿಸಲಿದ್ದಾರೆ.
Related Articles
Advertisement
ಜಿಪಂ ಸದಸ್ಯ ಎಂ.ಎಂ. ಜೆ ಹರ್ಷವರ್ಧನ ಮಾತನಾಡಿ, ಕಾರ್ಯಕ್ರಮದ ಯಶಸ್ವಿಗೆ ಹಣಕಾಸಿನ ನೆರವು ಅಗತ್ಯವಿದ್ದು ಅದಕ್ಕಾಗಿ ಸ್ವಂತವಾಗಿ 10 ಸಾವಿರರೂಗಳನ್ನು ತಾಲೂಕು ಆಡಳಿತಕ್ಕೆ ನೀಡಲಾಗುವುದು ಎಂದರು. ಹಗರಿಬೊಮ್ಮನಹಳ್ಳಿ ತಾಪಂ ಉಪಾಧ್ಯಕ್ಷ ಕೊಚಾಲಿ ಸುಶೀಲಮ್ಮ ಮಂಜುನಾಥ ಮಾತನಾಡಿ, ಸಮಾರಂಭದಲ್ಲಿ ಮಾಜಿ ಯೋಧರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಮತ್ತು ಇತರ ಗಣ್ಯರನ್ನು ಸನ್ಮಾನಿಸುವ ವೆಚ್ಚವನ್ನು ತಾವು ಭರಿಸುವುದಾಗಿ ಹೇಳಿದರು.
ತಾಪಂ ಸದಸ್ಯರಾದ ಬೋರವೆಲ್ ತಿಪ್ಪೇಸ್ವಾಮಿ, ಭರಮಣ್ಣ, ಸಿದ್ದಯ್ಯ, ವಿನಯ್, ವೀಣಾ ವಿವೇಕಾನಂದಗೌಡ, ತೋಟದ ರಾಮಣ್ಣ, ಕೆಂಗರಾಜ್, ರಾಜೇಶ ಮಾತನಾಡಿ, ಸಮಾರಂಭದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸುವ ವೆಚ್ಚವನ್ನು ಭರಿಸುವುದಾಗಿ ಪ್ರಕಟಿಸಿದರು.
ಪಪಂ ಮುಖ್ಯಾಧಿಕಾರಿ ಎಚ್.ಎಫ್. ಬಿದರಿ, ಖಜಾನೆ ಅಧಿಕಾರಿ ಶಕುಂತಲಮ್ಮ, ಎಸ್‌ಎಸ್‌ಐ ಗುರುಸ್ವಾಮಿ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಸಿ.ಅಜ್ಜಪ್ಪ, ಕೊಟ್ರೇಶ, ತಾಪಂ ಸದಸ್ಯ ಗುರುಮೂರ್ತಿ ಶ್ಯಾನುಬೋಗರ್, ಎಪಿಎಂಸಿ ಅಧ್ಯಕ್ಷ ಬೂದಿ ಶಿವಕುಮಾರ, ಪಿ. ಸುಧಾಕರಗೌಡ ಇದ್ದರು. ಕಂದಾಯ ಇಲಾಖೆಯ ಎಸ್.ವಿ. ಬಸವರಾಜ ವಂದಿಸಿದರು.