ಕೊಟ್ಟೂರು: ಸಮೀಪದ ಚಿರಿಬಿ ಗ್ರಾಮದಲ್ಲಿ ಸರ್ಕಾರಿ ಶಾಲೆ ಇದೆ. ಆದರೆ ಶಿಕ್ಷಕರ ಕೊರತೆಯಿದ್ದು, ಅವ್ಯವಸ್ಥೆಯಿಂದ ಮುಳುಗಿದೆ.
Advertisement
ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಇಂತಹ ಡಿಜಿಟಲ್ ಯುಗದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಶಿಕ್ಷಕರೇ ಇಲ್ಲದಿರುವುದು ದುಸ್ತರವಾಗಿದೆ. ಇಲ್ಲಿನ ಚಿರಿಬಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ 86 ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದು, ಶಿಕ್ಷಕರೇ ಇಲ್ಲದೆ ವಿದ್ಯಾಭ್ಯಾಸ ಮಾಡಬೇಕಾಗಿದೆ. ಏಕೆಂದರೆ ಇದೇ ಶಾಲೆಯ ಪ್ರಾಥಮಿಕ ಶಾಲೆಯಲ್ಲಿರುವ ಶಿಕ್ಷಕರೇ ಬಿಡುವಿನ ಸಮಯದಲ್ಲಿ ಪ್ರೌಢ ಶಾಲೆಗೆ ಹೋಗಿ ಪಾಠ ಬೋಧನೆ ಮಾಡುತ್ತಾರೆ. ಈಗಾಗಲೇ ಈ ಶಾಲೆ 8-10 ವರ್ಷಗಳ ಕಾಲದಿಂದಲೂ ಹೀಗೆ ಮುಂದುವರಿದಿದೆ. 10ನೇ ತರಗತಿಯು ಪ್ರತಿಯೊಬ್ಬ ವಿದ್ಯಾರ್ಥಿಗೂ ಮುಖ್ಯ ಘಟ್ಟವಾಗಿದ್ದು, ಇಂತಹ ಘಟ್ಟವನ್ನು ಉತ್ತೀರ್ಣವಾಗಲೂ ಶಿಕ್ಷಕರ ಅಗತ್ಯ ಬಹಳ ಇದೆ. ಆದರೆ ಶಾಲೆಯಲ್ಲಿ ಗುರುಗಳೇ ಇಲ್ಲದೇ ಪಾಠ ಬೋಧನೆಯಿಂದ ವಿದ್ಯಾರ್ಥಿಗಳು ಕಲಿಯುವುದು ಹೇಗೆ?.
Related Articles
Advertisement
ಶಾಲೆ ಬಗ್ಗೆ ಗಮನಹರಿಸಿ ಶಿಕ್ಷಕರನ್ನು ನೇಮಿಸುತ್ತೇನೆ. ಯಾವುದೇ ಅವಶ್ಯಕ ವ್ಯವಸ್ಥೆಗಳನ್ನು ಮಾಡುತ್ತೇನೆ. ಈಗಾಗಲೇ ಹೊಸ ಶಿಕ್ಷಕರನ್ನು ನೇಮಿಸಿದ್ದೇವೆ. ಹೊಸ ಕಟ್ಟಡಕ್ಕೂ ಅನುಮೋದನೆ ನೀಡಲಾಗಿದೆ. ಕೂಡಲೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ.•ಉಮಾದೇವಿ,
ಕ್ಷೇತ್ರ ಶಿಕ್ಷಣಾಧಿಕಾರಿ, ಕೂಡ್ಲಿಗಿ.