Advertisement

ಕೊಟ್ಟೂರೇಶ್ವರ ತೇರುಗಡ್ಡೆಗೆ ವಿಶೇಷ ಪೂಜೆ

08:11 AM Feb 10, 2019 | |

ಕೊಟ್ಟೂರು: ನಾಡಿನ ಸುಪ್ರಸಿದ್ಧ ಶ್ರೀಗುರು ಕೊಟ್ಟೂರೇಶ್ವರಸ್ವಾಮಿ ರಥೋತ್ಸವ ಫೆ.28ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ತೇರುಗಡ್ಡೆಯನ್ನು ಹೊರಗೆಳೆಯುವ ಧಾರ್ಮಿಕ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.

Advertisement

ಬೆಳಗ್ಗೆ ತೇರುಮನೆಯಿಂದ ತೇರುಗಡ್ಡೆಯನ್ನು ಎಳೆದ್ಯೊಯುವ ಹಿನ್ನೆಲೆಯಲ್ಲಿ ಕ್ರಿಯಾ ಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರು, ಧರ್ಮಕರ್ತ ಸಿ.ಎಚ್.ಎಂ.ಗಂಗಾಧರ, ಕಾರ್ಯನಿರ್ವಾಹಣಾಧಿಕಾರಿ ಎಂ.ಎಚ್. ಪ್ರಕಾಶ್‌ರಾವ್‌, ಕೊಟ್ಟೂರು ಕಟ್ಟೆಮನಿ ದೈವಸ್ಥರು ಹಾಗೂ ಭಕ್ತರು ಪೂಜೆ ಸಲ್ಲಿಸಿದರು.

ನಂತರ ರಥಗಡ್ಡೆಯ ಆಸನದ ಮೇಲೆ ಕ್ರಿಯಾಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರು, ಹಿರೇಮಠದ ಪೂಜಾ ಬಳಗದವರು ಆಸೀನರಾಗುತ್ತಿದ್ದಂತೆ ಸಂಜೆ 4.30ರ ವೇಳೆಗೆ ಸಾವಿರಾರು ಭಕ್ತರು ಶ್ರೀಗುರು ಕೊಟ್ಟೂರೇಶ್ವರಸ್ವಾಮಿ ಜಯಕಾರದ ಘೋಷ ಕೂಗುತ್ತಾ ತೇರುಗಡ್ಡೆ ಎಳೆದರು. ತೇರುಗಡ್ಡೆ ಉತ್ಸವ ಬೀದಿಗುಂಟ ಸಾಗಿ ತೇರುಬಯಲಿನಲ್ಲಿ ನಿಗದಿಗೊಳಿಸಿದ ಸ್ಥಳದಲ್ಲಿ ಸಂಜೆ 5ಗಂಟೆ ಸುಮಾರಿಗೆ ನಿಲುಗಡೆಗೊಂಡಿತು. ತೇರುಗಡ್ಡೆಯನ್ನು ಅಮೃತ ಅಮಾವಾಸ್ಯೆಯಾದ 5 ದಿನಗಳ ನಂತರ ಹೊರಗೆಳೆಯುವ ವಿಧಿ ವಿಧಾನಗಳ ಪ್ರಕಾರ ಈ ಧಾರ್ಮಿಕ ಕಾರ್ಯ ಶನಿವಾರ ನೆರವೇರಿತು. ದೇವಸ್ಥಾನದ ಧರ್ಮಕರ್ತ ಅಯಗಾರ ಬಳಗದ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next