Advertisement

ಶಿವರಾತ್ರಿಗೆ ಕಿಚ್ಚನ ಭರ್ಜರಿ ಗಿಫ್ಟ್; ಧೂಳೆಬ್ಬಿಸಿದ ಕೋಟಿಗೊಬ್ಬ – 3 ಟೀಸರ್

10:10 AM Feb 22, 2020 | Suhan S |

ಬೆಂಗಳೂರು:ಮೋಷನ್ ಪಿಚ್ಚರ್ ಹಾಗೂ ಪೋಸ್ಟರ್ ಗಳಿಂದ ಕುತೂಹಲ ಹುಟ್ಟಿಸಿದ್ದ  ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ, ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ – 3 ಚಿತ್ರದ ಟೀಸರ್ ಬಿಡುಗಡೆಯಾಗಿದೆ.

Advertisement

ರವಿಶಂಕರ್ ಧ್ವನಿಯ ಖದರ್ ನಲ್ಲಿ ಮೂಡಿ ಬಂದಿರುವ ಟೀಸರ್ ನಲ್ಲಿ ಸುದೀಪ್ ಆ್ಯಕ್ಷನ್ ಝಲಕ್ ಪ್ರೇಕ್ಷಕರನ್ನು ಮೋಡಿ ಮಾಡುವಂತೆ ಇದೆ. ಟೀಸರ್ ನಲ್ಲಿ ಗಮನ ಸೆಳೆಯುವುದು ದುಬಾರಿ ಲೋಕೇಶನ್ ಗಳು ಹಾಗೂ ಮ್ಯಾಜಿಕ್ ಮಾಡುವ ಕಿಚ್ಚ ಸುದೀಪ್ ಲುಕ್ಸ್ . ಕತೆಯ ಎಳೆಯನ್ನು ಬಿಟ್ಟು ಕೊಡದೆ ಟೀಸರ್ ಅನ್ನು ಎರಡು ಶೆಡ್ ನಲ್ಲಿ ತೋರಿಸಲಾಗಿದೆ. ಒಂದು ಲೋಕಲ್ ಹುಡುಗನಾಗಿ ಸೆಣೆಸಾಟ ನಡೆಸುವುದು ಇನ್ನೊಂದು ಸ್ಟೈಲಿಸ್ಟ್ ಆಗಿ ಹೊಡೆದಾಡುವುದು. ಈ ಎರಡು ಅಂಶಗಳು ಟೀಸರ್ ನಲ್ಲಿ ಮೋಡಿ ಮಾಡಿವೆ.

ಅಂದ ಹಾಗೆ ಬಿಡುಗಡೆಯಾದ ಒಂದೇ ಗಂಟೆಯಲ್ಲಿ ಕೋಟಿಗೊಬ್ಬ -3 ಚಿತ್ರದ ಟೀಸರ್  4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ಮುನ್ನುಗುತ್ತಿದೆ. ಶಿವ ಕಾರ್ತಿಕ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವವ ಕೋಟಿಗೊಬ್ಬ -3 ಚಿತ್ರದಲ್ಲಿ ಕಿಚ್ಚ ಸುದೀಪ್, ಮೆಲಯಾಳಂ ಬೆಡಗಿ ಮಡೋನಾ ಸಬಾಸ್ಟಿನ್ ಮೊದಲ ಬಾರಿ ಕನ್ನಡದಲ್ಲಿ ಬಣ್ಣ ಹಂಚಿದ್ದಾರೆ. ಅರ್ಜುನ್ ಜನ್ಯ ಸಂಗೀತ, ರವಿಶಂಕರ್ ರಾಗಡ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next