Advertisement

Kottigehara: ಅಕ್ರಮ ಭೂ ಕಬಳಿಕೆ ತೆರವುಗೊಳಿಸದ ಕಂದಾಯ ಇಲಾಖೆ ವಿರುದ್ದ ಪ್ರತಿಭಟನೆ

03:45 PM Sep 22, 2023 | Team Udayavani |

ಕೊಟ್ಟಿಗೆಹಾರ: ಬಾಳೂರು ಗ್ರಾ.ಪಂ.ವ್ಯಾಪ್ತಿಯ ದರ್ಬಾರ್ ಪೇಟೆಯಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು 22 ಗುಂಟೆ ಜಾಗ ಮಂಜೂರಾಗಿದ್ದರೂ ಖಾಸಗಿ ವ್ಯಕ್ತಿಯೋರ್ವರು ಈ  ಜಾಗವನ್ನು ಆಕ್ರಮಿಸಿರುವುದರಿಂದ ಅಂಗನವಾಡಿ ಕಟ್ಟಡ ಕಟ್ಟಲು ಬೇಲಿ ಹಾಕಿರುವ ಹಿನ್ನಲೆ ಸಾಧ್ಯವಾಗುತ್ತಿಲ್ಲ. ಕಂದಾಯ ಅಧಿಕಾರಿಗಳು ಈ ಅಕ್ರಮ ಜಾಗವನ್ನು ತೆರವುಗೊಳಿಸಿಲ್ಲ ಎಂದು ವಿರೋಧಿಸಿ ಬಾಳೂರಿನಲ್ಲಿ ಗ್ರಾಮಸ್ಥರು ಅನಿರ್ದಿಷ್ಟ ಅವದಿ ಪ್ರತಿಭಟನೆ ನಡೆಸಿದ್ದಾರೆ.

Advertisement

ಈ ಬಗ್ಗೆ ಸುದ್ದಿಗಾರರೊಂದಿಗೆ ಬಾಳೂರು ಗ್ರಾ.ಪಂ.ಅಧ್ಯಕ್ಷ ಬಿ.ಬಿ.ಮಂಜುನಾಥ್ ಮಾತನಾಡಿ, ಅಂಗನವಾಡಿ ಕಟ್ಟಡ ಕಟ್ಟಲು ಹಣ ಮಂಜೂರಾಗಿದೆ. ಆದರೆ ಈ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಒತ್ತುವರಿ ಮಾಡಿದ್ದು, ಅದನ್ನು ಬಿಡಿಸಿ ಕೊಡಲು ತಾಲೂಕು ಆಡಳಿತ ಮೀನಾ ಮೇಷ ಎಣಿಸುತ್ತಿದೆ. ಜಾಗ ಸಿಗುವವರೆಗೂ ನಿರಂತರ ಪ್ರತಿಭಟನೆ ಮಾಡುತ್ತೇವೆ. ಗ್ರಾಮಸ್ಥರೊಂದಿಗೆ ಗ್ರಾ.ಪಂ. ಸದಸ್ಯರು ಕೂಡಾ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಕಂದಾಯ ಅಧಿಕಾರಿಗಳು ಶೀಘ್ರವೇ ಜಾಗ ತೆರವುಗೊಳಿಸಿ ಅಂಗನವಾಡಿ ಕಟ್ಟಡ ಕಟ್ಟಲು ಸ್ಪಂದಿಸಬೇಕು.ಇಲ್ಲವಾದರೆ ಬೇಡಿಕೆ ಈಡೆರುವವರೆಗೂ ನಿರಂತರ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಮನೋಜ್, ಜಯಶ್ರೀ, ಪ್ರಕಾಶ್, ಗ್ರಾಮಸ್ಥರಾದ ರಘುಪತಿ, ಜಗದೀಶ್, ಪ್ರಭಾಕರ್, ಸಂದೀಪ್, ಮದನ್, ರಮೇಶ್ ,ಅವಿನಾಶ್, ಕೇಶವ, ವೆಂಕಟೇಶ್, ಪ್ರಮೀಳಾ, ಜ್ಯೋತಿ, ನಳಿನಿ ಹಾಗೂ ಊರಿನ ಎಲ್ಲ ಪ್ರಮುಖರು, ಮಹಿಳಾ ಸಂಘದ ಎಲ್ಲಾ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next