Advertisement

ಕೊಟ್ಟಿಗೆಹಾರ: ಪ್ರಕೃತಿ ಹೆಸರಲ್ಲಿ ದಂಧೆಗೆ ಇಳಿದರಾ ಅರಣ್ಯ ಇಲಾಖೆ ಅಧಿಕಾರಿಗಳು…?

01:06 PM Sep 30, 2022 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಅರಣ್ಯ ಅಧಿಕಾರಿಗಳು ಪ್ರಕೃತಿ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುವ ದಂಧೆಗೆ ಇಳಿದರಾ ಎಂಬ ಅನುಮಾನ ವ್ಯಕ್ತವಾಗಿದ್ದು, ಜನ ಅರಣ್ಯ ಇಲಾಖೆ ವಿರುದ್ಧ ಬೀದಿಗಿಳಿಯಲು ಸಜ್ಜಾಗಿದ್ದಾರೆ.

Advertisement

ಮೂಡಿಗೆರೆ ತಾಲೂಕಿನ ಬಲ್ಲಾಳ ರಾಯನ ದುರ್ಗದ ಸುತ್ತಮುತ್ತಲಿನ ಪ್ರದೇಶದ ಸೌಂದರ್ಯವನ್ನ ಕಂಡು ಪ್ರಕೃತಿಯೇ ನಾಚಿ ನೀರಾಗುತ್ತಿದೆ. ಅಂತಹಾ ಅತ್ಯದ್ಭುತ ಸೌಂದರ್ಯದ ಕಣಿ ಬಲ್ಲಾಳರಾಯನದುರ್ಗ.

ವರ್ಷದ 365 ದಿನವೂ ನೂರಾರು ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನ ಸವಿದು ಪ್ರಕೃತಿಗೊಂದು ಸಲಾಂ ಹೊಡೆದು, ನಿನ್ನನ್ನ ಪಡೆದ ನಾವೇ ಧನ್ಯರು ಅಂತ ಖುಷಿಯಿಂದ ವಾಪಸ್ ಹೋಗುತ್ತಾರೆ.

ಆದರೆ, ಅಂತಹಾ ಬಲ್ಲಾಳರಾಯನದುರ್ಗದಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಂದರ್ಯ ಇಲ್ಲ ಅನ್ನೋದು ಅಷ್ಟೆ ಕಟುಸತ್ಯ. ಹಾಗಾಗಿ, ಸರ್ಕಾರ ಕಳೆದ ಮೂರು ವರ್ಷಗಳಿಂದಲೂ “ಎಕೋ ಟೂರಿಸಂ” ಹೆಸರಲ್ಲಿ ಪ್ರವಾಸಿಗರಿಗೆ ಶುಲ್ಕ ವಿಧಿಸುತ್ತಿದೆ.

ಆದರೆ, ಆ ಹಣ ಸರ್ಕಾರದ ಖಜಾನೆ ಸೇರುತ್ತಿದೆಯೋ ವಿನಃ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯವನ್ನ ನೀಡುತ್ತಿಲ್ಲ. ಗ್ರಾಮಸ್ಥರು ಕಳೆದ ಮೂರು ವರ್ಷಗಳಿಂದಲೂ ಅರಣ್ಯ ಇಲಾಖೆಯ ಅಡಿ ಗ್ರಾಮ ಪಂಚಾಯತ್‌, ಗ್ರಾಮ ಅರಣ್ಯ ಸಮಿತಿಯ ಮುಖಾಂತರ ಶುಲ್ಕ ವಿಧಿಸಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸುವ ಜವಾಬ್ದಾರಿ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.

Advertisement

ಆದರೆ, ಅರಣ್ಯ ಇಲಾಖೆ ಯಾವುದಕ್ಕೂ ಖ್ಯಾರೇ ಅನ್ನದೆ ಹಣ ಸಂಗ್ರಹ ಮಾಡುತ್ತಿದೆ. ಮೂಲಭೂತ ಸೌಲಭ್ಯ ನೀಡುತ್ತಿಲ್ಲ. ಹಾಗಾಗಿ, ಸ್ಥಳಿಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿ ರಸ್ತೆಗಿಳಿದು ಹೋರಾಡಲು ಮುಂದಾಗಿದ್ದಾರೆ.

ಅಕ್ಟೋಬರ್ 1ರ ಶನಿವಾರದಂದು ಸುಂಕಸಾಲೆ ವೃತ್ತ ಹಾಗೂ ರಾಣಿಝರಿ ಸಮೀಪದ ಕಾಲಭೈರವೇಶ್ವರ ದೇವಸ್ಥಾನದ ಬಳಿ ಅರಣ್ಯ ಇಲಾಖೆ ಬಲ್ಲಾಳ ರಾಯ ದುರ್ನ ವ್ಯಾಪ್ತಿಯ ಪ್ರವಾಸಿ ತಾಣದಲ್ಲಿ ಶುಲ್ಕ ವಿಧಿಸಲು ಗ್ರಾಮ ಅರಣ್ಯ ಸಮಿತಿ ರಚನೆ ಮಾಡುವವರೆಗೂ ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಈ ಹೋರಾಟಕ್ಕೆ ಗ್ರಾಮಸ್ಥರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸಂಪೂರ್ಣ ಸಾಥ್ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next