ಕೊಟ್ಟಿಗೆಹಾರ: ಬಣಕಲ್ ಪೊಲೀಸ್ ಠಾಣೆಯ ಪೊಲೀಸರು ಬೀದಿ ನಾಯಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಬಣಕಲ್‌ನ ಪೊಲೀಸ್ ಠಾಣೆಯಲ್ಲಿ ರಿಕ್ಕಿ ಮತ್ತು ಮಂಜುಳಾ ಎಂಬ ಹೆಸರಿನ ನಾಯಿಗಳಿದ್ದು, ಠಾಣೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮೆಚ್ಚಿನ ಜೀವಗಳಾಗಿವೆ. ಠಾಣೆಯಲ್ಲಿ ಕೆಲವು ವರ್ಷಗಳಿಂದ ಈ ನಾಯಿಗಳಿದ್ದು, ಠಾಣೆಯ ಯಾರೇ ಅಧಿಕಾರಿಗಳು ಅಥವಾ ಸಿಬ್ಬಂದಿ ವರ್ಗಾವಣೆಯಾದರೂ ಅಥವಾ ಠಾಣೆಗೂ ಬಂದರೂ, ಎಲ್ಲರ ನೆಚ್ಚಿನ ಭಂಟನಾಗಿ ಈ ನಾಯಿಗಳಿವೆ.
ಆರಂಭದಲ್ಲಿ ಪೊಲೀಸರು ಠಾಣೆಯ ಬಳಿ ಕಂಡ ಈ ನಾಯಿಗಳಿಗೆ ಬಿಸ್ಕೆಟ್, ಬನ್ ಮುಂತಾದ ತಿನಿಸು ನೀಡುತ್ತ, ಸಾಕತೊಡಗಿದರು. ಬಣಕಲ್ ಠಾಣೆಯಲ್ಲಿ ಸೇವೆ ಸಲ್ಲಿಸಿ ಬೇರೆ ಠಾಣೆಗೆ ವರ್ಗವಾದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬಣಕಲ್ ಮಾರ್ಗವಾಗಿ ಧರ್ಮಸ್ಥಳ ಹೊರನಾಡಿಗೆ ಪ್ರವಾಸ ಬಂದಾಗ ಠಾಣೆಗೆ ಬೇಟಿ ನೀಡಿ ನಾಯಿ ಮುದ್ದಿಸಿ ಹೋಗುತ್ತಾರೆ.
ನಾನೀಗ ಬಣಕಲ್ ಠಾಣೆಯಿಂದ ವರ್ಗಾವಣೆಯಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಕೋರ್ಟ್‌ಗೆ ಸಂಬಂಧಿಸಿದ ಕಾರ್ಯಗಳಿಗೆ ಮೂಡಿಗೆರೆಗೆ ಬಂದಾಗ ಬಣಕಲ್ ಠಾಣೆಗೆ ಭೇಟಿ ನೀಡಿ ನಾಯಿಗಳ ಮುದ್ದಿಸಿ ಬರುತ್ತೇನೆ. ಅವುಗಳ ನಿಸ್ವಾರ್ಥ ಪ್ರೇಮ ಮರೆಯುವಂತಿಲ್ಲ.
ಜಗದೀಶ್, ವೃತ ನಿರೀಕ್ಷಕ.
ಮುಖ್ಯಮಂತ್ರಿಗಳ ಭದ್ರತಾ ವಿಭಾಗ.
ಬೆಂಗಳೂರು