Advertisement

ಮಹಾನಗರದಲ್ಲಿ ಮನಸೂರೆಗೊಂಡ ಕೋಟಿ ಚೆನ್ನಯ

06:47 PM Mar 06, 2020 | mahesh |

ಮುಂಬಯಿ ಮಹಾನಗರ ಹಾಗೂ ಉಪನಗರಗಳಲ್ಲಿ, ನಾಡಿನ ಸಂಸ್ಕೃತಿ, ಬಾಷೆ ಯನ್ನು ಉಳಿಸಿ ಬೆಳೆಸುವಲ್ಲಿ ಕೇವಲ ಹಿರಿಯರಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಕಿರಿಯರು ಕ್ರೀಯಾಶೀಲರಾಗಿರುವುದಕ್ಕೆ ಫೆ. 16 ರಂದು ಸಂಜೆ ವಸಾಯಿ ಪಶ್ಚಿಮದಲ್ಲಿ ನಡೆದ ಜೀವದಾನಿ ಯಕ್ಷಕಲಾ ವೇದಿಕೆ ವಸಾಯಿ ಇದರ ನಾಲ್ಕನೇ ವಾರ್ಷಿಕ ಸಮಾರಂಭದಲ್ಲಿ ಜರಗಿದ ಯಕ್ಷಸಿರಿ 2020ರ ಕೋಟಿ ಚೆನ್ನಯ ಯಕ್ಷಗಾನವು ಒಂದು ನಿದರ್ಶನವಾಗಿದೆ.

Advertisement

ಮಾತೃಬಾಷೆಯ ಬಗ್ಗೆ ಹೆಚ್ಚಿನ ಅರಿವು ಇಲ್ಲದೆ ಕೋಟಿ ಚೆನ್ನಯರ ಬಗ್ಗೆ ಅಷ್ಟೇನು ತಿಳಿಯದ 7 ರಿಂದ 15 ವರ್ಷಗಳ ಪ್ರಾಯದ ಇಂಗ್ಲೀಷ್‌ ಮಾಧ್ಯಮದಲ್ಲಿ ಕಲಿಯುತ್ತಿರುವ 40 ಮಕ್ಕಳು ಹಾಗೂ ಕೆಲವು ಹಿರಿಯರು ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ನಿರ್ದೇಶನದಲ್ಲಿ ಈ ಯಕ್ಷಗಾನದಲ್ಲಿ ವಿವಿಧ ಪಾತ್ರವನ್ನು ನಿರ್ವಹಿಸಿ ಯಕ್ಷಗಾನದಿಂದ ವ್ಯಕ್ತಿತ್ವ ವಿಕಸನವಾಗುವುದರೊಂದಿಗೆ ಭವಿಷ್ಯವೂ ಇದೆ ಎಂದು ತೋರಿಸಿಕೊಟ್ಟಿದ್ದಾರೆ.

ಭಾಗವತರಾಗಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ದೇವಿ ಪ್ರಸಾದ್‌ ಆಳ್ವ ತಲಪಾಡಿ, ಹರೀಶ್‌ ಶೆಟ್ಟಿ ಕಟೀಲು, ಚೆಂಡೆ ಮದ್ದಳೆಯಲ್ಲಿ ಆನಂದ ಶೆಟ್ಟಿ ಇನ್ನ, ರೋಹಿತ್‌ ಉಚ್ಚಿಲ…, ಹರೀಶ್‌ ಸಾಲ್ಯಾನ್‌, ತೇಜಸ್‌ ಶೆಟ್ಟಿ, ಚಕ್ರತಾಳದಲ್ಲಿ ಆಶೋಕ್‌ ಜೈನ್‌ ಮತ್ತು ಕೂಸ ಪೂಜಾರಿ, ವೇಷಭೂಷಣದಲ್ಲಿ ಘಾಟ್ಕೊಪರಿನ ಶ್ರೀ ಗೀತಾಂಬಿಕ ಯಕ್ಷಗಾನ ಮಂಡಳಿಯವರು ಸಹಕರಿಸಿದ್ದಾರೆ.

ಈಶ್ವರ ಎಂ. ಐಲ್‌

Advertisement

Udayavani is now on Telegram. Click here to join our channel and stay updated with the latest news.

Next