ಪುಣೆ: ಪುಣೆಯ ಕೋಟಿ ಚೆನ್ನಯ ಗ್ರೂಪ್ಸ್ ಇದರ ವತಿಯಿಂದ ಎರಡನೇ ವರ್ಷದ ಕೋಟಿ -ಚೆನ್ನಯ ಟ್ರೋಫಿ ಕ್ರಿಕೆಟ್ ಪಂದ್ಯಾಟವು ಪಾಷಣ್‌ನಲ್ಲಿರುವ ಎನ್‌ಸಿಎಲ್ ಗ್ರೌಂಡ್‌ನಲ್ಲಿ ಮಾ. 9ರಂದು ಬೆಳಗ್ಗೆ 7.30 ರಿಂದ ಜರಗಲಿದೆ. ಈ ಬಾರಿಯ ಕ್ರಿಕೆಟ್ ಪಂದ್ಯಾಟವನ್ನು ಮುಕ್ತವಾಗಿ ಕರ್ನಾಟಕ ರಾಜ್ಯದ ತುಳು ಕನ್ನಡಿಗರಿಗಾಗಿ ಆಯೋಜಿಸಲಾಗಿದ್ದು, ಆಸಕ್ತ ತಂಡಗಳು ತಂಡದ ನೋಂದಾವಣಿ ಶುಲ್ಕವನ್ನು ಪಾವತಿಸಿ ಮಾ. 3ರೊಳಗೆ ಹೆಸರು ನೋದಾಯಿಸಿಕೊಳ್ಳಬಹುದು. ಆನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಈ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ತಂಡದ ಪ್ರತಿಯೊಬ್ಬ ಸದಸ್ಯನು ಕರ್ನಾಟಕ ರಾಜ್ಯಕ್ಕೆ ಸಂಬಂಧ ಪಟ್ಟವನಾಗಿರಬೇಕು. ಹಾಗೂ ತುಳು ಅಥವಾ ಕನ್ನಡ ಮಾತನಾಡಲು ಬರತಕ್ಕದ್ದು. ಪಂದ್ಯಾಟದ ದಿನದಂದು ಕಡ್ಡಾಯವಾಗಿ ಅರ್ಹತಾ ಗುರುತು ಪತ್ರವಾದ ಆಧಾರ್‌ಕಾರ್ಡ್ ಅಥವಾ ವೋಟರ್ ಕಾರ್ಡ್‌ನ ಮೂಲ ಪ್ರತಿಯೊಂದಿಗೆ ಹಾಜರಿರತಕ್ಕದ್ದು. ಬೇರೆ ಯಾವುದೇ ಪರಿಚಯ ಪತ್ರ ಪರಿಗಣಿಸಲಾಗುವುದಿಲ್ಲ. ಪ್ರತಿಯೊಂದು ತಂಡದ ಮುಖ್ಯಸ್ಥರು ಈ ಬಗ್ಗೆ ಗಮನ ಹರಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.
ಆಯೋಜಕರಾದ ಕೋಟಿ ಚೆನ್ನಯ ಗ್ರೂಪ್‌ನವರ ನಿಯಮಗಳಂತೆ ಪಂದ್ಯಾಟವು ನಡೆಯಲಿದ್ದು, ತೀರ್ಪುಗಾರರ ತೀರ್ಪು ಅಂತಿಮವಾಗಿರುತ್ತದೆ. ವಿಜೇತ ಪ್ರಥಮ ತಂಡಕ್ಕೆ ನಗದು 22222 ರೂ. ಹಾಗೂ ಕೋಟಿ ಚೆನ್ನಯ ಟ್ರೋಫಿ, ದ್ವಿತೀಯ ತಂಡಕ್ಕೆ ನಗದು 11111 ರೂ. ಹಾಗೂ ಟ್ರೋಫಿಯನ್ನು ಪ್ರದಾನಿಸಲಾಗುವುದು. ತೃತೀಯ ಸ್ಥಾನಿ ತಂಡಕ್ಕೆ ಟ್ರೋಫಿಯನ್ನಿತ್ತು ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೋಟಿ ಚೆನ್ನಯ ಗ್ರೂಪ್‌ನ ಸಂಘಟಕರಾದ ಕಿಶೋರ್ ಕೋಥ್ರೊಡ್ (7773900041), ಪ್ರದೀಪ್ ವಾಘೋಲಿ (9623332323) ಮತ್ತು ಸುದೀಪ್ ಪೂಜಾರಿ ಮುನಿಯಾಲ್ (7972654058) ಇವರನ್ನು ಸಂಪರ್ಕಿಸಬಹುದು.
ಕೋಟಿ-ಚೆನ್ನಯ ಗ್ರೂಪ್‌ನಿಂದ ಸಮಾಜ ಸೇವೆ
ಪುಣೆಯಲ್ಲಿ 2017 ಸಾಲಿನಿಂದ ಕೋಟಿ-ಚೆನ್ನಯ ಮಿತ್ರವರ್ಗವು ತಮ್ಮ ಪ್ರಥಮ ವರ್ಷದ ಪಾದಾರ್ಪಣೆಯೊಂದಿಗೆ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿ ಯಶಸ್ವಿಗೊಳಿಸಿದೆ. ವರ್ಷದ ತಮ್ಮ ಕಾರ್ಯಕ್ರಮಗಳಲ್ಲಿ ಜಮೆಯಾದ ಹಣದಲ್ಲಿ ಖರ್ಚನ್ನು ತೆಗೆದು ಉಳಿದ ಮೊತ್ತವನ್ನು ಯಾವುದೇ ರೀತಿಯಿಂದ ತುಳು ಕನ್ನಡಿಗರಿಗೆ ಸಹಾಯವಾಗುವಂತಹ ಸೇವಾ ಕಾರ್ಯಗಳನ್ನು ಮಾಡುವ ಉದ್ದೇಶ ಈ ಗ್ರೂಪ್‌ನವರದ್ದಾಗಿದೆ. ಈ ನಿಟ್ಟಿನಲ್ಲಿ ಕಳೆದ ವರ್ಷದಲ್ಲಿ ಉಳಿದ ಆದಾಯವನ್ನು ಈ ಮಿತ್ರವರ್ಗದವರು ಇತ್ತೀಚೆಗೆ ಕೋಟಿ-ಚೆನ್ನಯರ ಜನ್ಮ ಪಡೆದ ಪದುಮಲೆ ಗೆಜ್ಜೆಗಿರಿ ನಂದನವನ ಜೀರ್ಣೋದ್ಧಾರಕ್ಕಾಗಿ ಸುಮಾರು 35 ಸಾವಿರ ರೂ. ಗಳ ದೇಣಿಗೆಯನ್ನು ಅಲ್ಲಿನ ಟ್ರಸ್ಟ್‌ಗೆ ಹಸ್ತಾಂತರಿಸಿದ್ದಾರೆ. ಈ ಬಾರಿಯೂ ಇಂತಹ ಬೇರೆ ಸಮಾಜ ಸೇವಾ ಯೋಜನೆಯೊಂದಿಗೆ ಕಾರ್ಯಪ್ರವೃತ್ತರಾಗಿ ಈ ಪಂದ್ಯಾಟವನ್ನು ಅಯೋಜಿಸುತ್ತಿದ್ದಾ ರೆ.