Advertisement
ಪಂಜದಲ್ಲಿ ಸ್ವಜಾತಿ ಬಾಂಧವನಾದ ಮಂತ್ರಿ ಚಂದುಗಿಡಿಯ ಮೋಸದ ಬಂಧನದಿಂದ ತಪ್ಪಿಸಿಕೊಂಡು ಎಣ್ಮೂರು ಬೀಡಲ್ಲಿ ಸುಭದ್ರ ನೆಲೆಯನ್ನು ಕಂಡುಕೊಳ್ಳುತ್ತಾರೆ.ಎಣ್ಮೂರು ಬೀಡಿನ ದೇವ ಬಲ್ಲಾಳರು ಕೋಟಿ ಚೆನ್ನಯರ ಆಗಮನದ ನಂತರ ಸುದೃಢ ಸೈನ್ಯ ಕಟ್ಟಿ ನೆಮ್ಮದಿಯಿಂದ ಇರುವ ಹೊತ್ತಲ್ಲಿ ಕೊಲೆ ಅಪರಾಧಿಗಳಾದ ಕೋಟಿ ಚೆನ್ನಯರಿಗೆ ಆಶ್ರಯ ಕೊಟ್ಟ ಆರೋಪ ಹೊರಿಸಿ ಪೆರುಮಳ ಬಲ್ಲಾಳರು ಪಂಜದ ಕೇಮರ ಬಲ್ಲಾಳರ ಜೊತೆಗೂಡಿ ಎಣ್ಮೂರು ಬೀಡಿನ ಮೇಲೆ ಯುದ್ಧ ಸಾರಿದರು.
Related Articles
Advertisement
ಬುದ್ಧಿವಂತನ ಮಕ್ಕಳಾಗಿ ಮಿಜಾರು ತಿಮ್ಮಪ್ಪ, ಪೂರ್ಣೇಶ್ ಆಚಾರ್ಯ ಜೊತೆಗೆ ತುಳು ನಾಟಕ ಹಾಗೂ ಸಿನೆಮಾರಂಗದ ಬಹು ಬೇಡಿಕೆಯ ನಟರಾದ ಅರವಿಂದ ಬೋಳಾರ್‌ರವರು ನಟಿಸಿದ್ದು, ನಗೆಗಡಲಲ್ಲಿ ತೇಲಿಸಿ ಯಕ್ಷಗಾನ ರಂಗಕ್ಕೂ ಸೈ ಅನಿಸಿಕೊಂಡರು.ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು ಇವರ ಕಿನ್ನಿದಾರು ಪಾತ್ರಾಭಿನಯ ಅನುಪಮವಾಗಿತ್ತು.
ಪ್ರಸಂಗದ ಬಹುರಂಜಿತ ಹಾಸ್ಯ ಭೂಮಿಕೆ ಗಳಾದ ಸಾಯನ,ಪಯ್ಯಬೈದ್ಯ ಪಾತ್ರವನ್ನು ಬಂಟ್ವಾಳ ಜಯರಾಮ ಆಚಾರ್ಯರು ಸೊಗಸಾಗಿಸಿದರು. ಕೋಟಿ ಚೆನ್ನಯ ಪಾತ್ರಗಳು ನಾಲ್ಕು ಸೆಟ್‌ಗಳಲ್ಲಿದ್ದು, ಆರಂಭದಲ್ಲಿ ಸಣ್ಣ ಮಕ್ಕಳು ಕೋಟಿ ಚೆನ್ನಯರಾಗಿ ಯುಕ್ತಿ ಕೋಟ್ಯಾನ್- ಚಿರಾಗ್‌ರವರು ರಂಗದ ಅಳುಕಿಲ್ಲದೆ ಅಭಿನಯಿಸಿದರು. ಎರಡನೇ ಸೆಟ್‌ನಲ್ಲಿ ಬಾಲ ಕೋಟಿ ಚೆನ್ನಯರಾಗಿ ರವಿ ಮುಂಡಾಜೆ ಹಾಗೂ ಗಿರಿಕಿ ವೀರರೆನಿಸಿದ ಲೋಕೇಶ್ ಮುಚ್ಚಾರು ಇವರ ಪ್ರವೇಶದಿಂದ ರಂಗದಲ್ಲಿ ಸಂಚಲನ ಮೂಡಿತು. ಮೂರನೇ ಸೆಟ್‌ನಲ್ಲಿ ಯುವಕ ಕೋಟಿ ಚೆನ್ನಯರಾಗಿ ಲಕ್ಷ್ಮಣ ಮರಕಡ-ಸದಾಶಿವ ಕುಲಾಲ್ ರವರು ರಂಜಿಸಿದ್ದು, ಸದಾಶಿವ ಕುಲಾಲರಿಗೆ ಈ ವೇಷವನ್ನು ಹಿಂದೆ ನಿರ್ವಹಿಸಿದ ಸಾಕಷ್ಟು ಅನುಭವವಿದ್ದು, ಈರ್ವರೂ ವಾಚಿಕದಲ್ಲಿ ಅನುಭವದ ನಡೆಯಿಂದ ಗಮನ ಸೆಳೆದದ್ದು ವಿಶೇಷ. ನಾಲ್ಕನೇ ಸೆಟ್‌ನಲ್ಲಿ ಪ್ರಾಯ ಪ್ರಬುದ್ಧರಾದ ಕೋಟಿ ಚೆನ್ನಯರಾಗಿ ಅರುವ ಕೊರಗಪ್ಪ ಶೆಟ್ಟಿ -ಪೆರ್ಲ ಜಗನ್ನಾಥ ಶೆಟ್ಟಿಯವರ ವೇಷಗಳು ಅತ್ಯುತ್ತಮ ಜೋಡಿಯಾಗಿ ಮೂಡಿಬಂತು.ಅರುವದವರು 75ರ ಹರೆಯದಲ್ಲೂ ಕೊನೆಯ ಕೋಟಿಯಾಗಿ ಮಿಂಚಿ ತನ್ನ ಅನುಭವನ್ನು ಸಾಬೀತುಪಡಿಸಿದರು. ಪೆರ್ಲದವರ ಠೇಂಕಾರದ ಚೆನ್ನಯನ ಪಾತ್ರ ನಿರ್ವಹಣೆ ಅನನ್ಯವಾಗಿತ್ತು.
ಸರಪಾಡಿದ ಸರ್ಪ ಖ್ಯಾತಿಯ ಅಶೋಕ್ ಶೆಟ್ಟಿಯವರು, ಮತ್ಸರಿ ಕುಯುಕ್ತಿಯುಕ್ತ ಚಂದುಗಿಡಿಯ ಪಾತ್ರದಲ್ಲಿ ಮುಂಚಿನ ಠೀವಿ ತೋರಿಸಿದರು.ರಾಧಾಕೃಷ್ಣ ನಾವಡ ಕೇಮರ ಬಲ್ಲಾಳರಾಗಿ ಗತ್ತುಗಾರಿಕೆಯಲ್ಲಿ ರಂಜಿಸಿದರು. ದೇವಣ್ಣ ಬಲ್ಲಾಳ ಪಾತ್ರಾಭಿನಯದಲ್ಲಿ ವಾದಿರಾಜ ಕಲ್ಲೂರಾಯರು ಹೊಸ ಪ್ರಸಂಗಕ್ಕೂ ಸೈ ಎನಿಸಿಕೊಂಡರು.ದೀಪಕ್ ರಾವ್ ಪೇಜಾವರವರ ಮಂಜು ಪೆರ್ಗಡೆಯ ವೇಷಕ್ಕೆ ಅವಕಾಶ ಸಣ್ಣದಾದರೂ ಅಭಿನಯ ಹಿರಿದಾಗಿತ್ತು.
ಭಾಗವತರಾಗಿ ದಿನೇಶ್ ಅಮ್ಮಣ್ಣಾಯ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ಕಕ್ಕೆಪದವು, ಸತೀಶ್ ಶೆಟ್ಟಿ ಬೋಂದೆಲ್, ಚೆಂಡೆ ಮದ್ದಳೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್,ದಯಾನಂದ ಶೆಟ್ಟಿಗಾರ ಮಿಜಾರು, ಕೃಷ್ಣಪ್ರಕಾಶ್ ಉಳಿತ್ತಾಯ, ಲೋಕೇಶ್ ಕಟೀಲು, ಚಕ್ರತಾಳದಲ್ಲಿ ಕಿರಣ್ ಆಚಾರ್ಯರು ಪ್ರಸಂಗ ಯಶಸ್ವಿಗೆ ಕಾರಣರಾದರು.
ತೆಂಕುತಿಟ್ಟಿನ ಪುಂಡು ವೇಷಗಳ ದಗಲೆಗಳಿಗೆ ನೆರಿಯಿಂದ ಕೂಡಿದ ಕೈ ಜೋಡಣೆಯು ವೇಷಗಳ ಮುಖವೇ ಕಾಣದಷ್ಟು ಅತಿಯಾಗಿದ್ದು ಈ ಬಗ್ಗೆ ವೇಷ ಭೂಷಣ ತಯಾರಕರು ಹಾಗೂ ಕಲಾವಿದರೂ ಗಮನಿಸಬೇಕಾದ ಅಗತ್ಯ ಇದೆ.
ಸುರೇಂದ್ರ ಪಣಿಯೂರು