Advertisement

ಕೋಟಿ –ಚೆನ್ನಯ ಟ್ರೋಫಿ ಕ್ರಿಕೆಟ್‌ ಪಂದ್ಯಾಟ

02:22 PM Mar 13, 2018 | |

ಪುಣೆ: ಇಂದಿನ ಯುವ ಜನತೆ ತಮ್ಮ ಆಸಕ್ತಿಯ ಕ್ರೀಡಾ   ಕ್ಷೇತ್ರಗಳಲ್ಲಿ ತಮ್ಮನ್ನು ಬಹು ಬೇಗನೆ ತೊಡಗಿಸಿಕೊಳ್ಳುತ್ತಾರೆ. ಅದ ರಲ್ಲೂ ಭಾರತದಲ್ಲಿ ಹೆಚ್ಚು ಜನ ಪ್ರಿಯವಾಗಿರುವ ಕ್ರಿಕೆಟ್‌ಗೆ ಎಲ್ಲರೂ ಬೇಗನೆ  ಆಕರ್ಷಿತರಾಗುತ್ತಾರೆ. ನಮ್ಮ ಕರ್ನಾಟಕದ ಕರಾವಳಿಯ ಜನರು ತಾಯ್ನಾಡನ್ನು ಬಿಟ್ಟು ಹೊರ ರಾಜ್ಯಗಳಲ್ಲಿ ಉದ್ಯೋಗಕ್ಕಾಗಿ ನೆಲೆಸಿರುವ ತುಳು ಕನ್ನಡಿಗರು ಅಲ್ಲಿಯೂ ಕೂಡ ಕ್ರೀಡಾ ಸಂಸ್ಥೆಗಳನ್ನು ಕಟ್ಟಿಕೊಂಡು ನಮ್ಮವರಿಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಮಾಡಿ ಕೊಡುತ್ತಿ¨ªಾರೆ. ಇಂತಹ ಕ್ರೀಡಾ ಸೇವೆಗೈಯುವ ಸಂಸ್ಥೆಗಳಲ್ಲಿ ಪುಣೆಯ ಕೋಟಿ-ಚೆನ್ನಯ ಗ್ರೂಪ್‌ಕೂಡ ಒಂದಾಗಿದೆ.  ಕೋಟಿ ಚೆನ್ನಯ  ಗ್ರೂಪ್‌ನವರು ಕಳೆದ ಎರಡು ವರ್ಷಗಳಿಂದ  ಪುಣೆಯ ತುಳು ಕನ್ನಡಿಗರಿಗಾಗಿ  ಕ್ರಿಕೆಟ್‌ ಪಂದ್ಯಾಟವನ್ನು ಆಯೋಜಿಸುತ್ತಿದ್ದು, ಉತ್ತಮ ರೀತಿಯಲ್ಲಿ ಶಿಸ್ತುಬದ್ದವಾಗಿ ನಡೆಸಿಕೊಂಡು ಬರುತ್ತಿ¨ªಾರೆ. ಯಾವುದೇ ರೀತಿಯ ಪ್ರಥಮ ದರ್ಜೆಯ ಕೂಟಗಳಿಗೆ ಕಡಿಮೆ ಯಿಲ್ಲದಂತಹ ಇಂದಿನ ಈ ಪಂದ್ಯಾಟವನ್ನು ಆಯೋಜಿಸಿ ಯಶಸ್ವಿಗೊಳಿಸಿ¨ªಾರೆ. ಇನ್ನು ಉತ್ತಮ ರೀತಿಯಲ್ಲಿ  ವರ್ಷದಿಂದ ವರ್ಷಕ್ಕೆ ಇಂತಹ ಪಂದ್ಯಾಟಗಳನ್ನು ಆಯೋಜಿಸಲು ಇವರಿಗೆ ಎÇÉಾ ರೀತಿಯ ಸಹಕಾರ ನೀಡಬೇಕಾದ ಕೆಲಸ ಕ್ರೀಡಾ ಪೋಷಕರಿಂದ  ಅಗಬೇಕು ಎಂದು  ಪುಣೆ ತುಳುಕೂಟದ ಪಿಂಪ್ರಿ-ಚಿಂಚಾÌಡ್‌ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಶ್ಯಾಮ್‌ ಸುವರ್ಣ ಇವರು ಅಭಿಪ್ರಾಯಿಸಿದರು.

Advertisement

ಪುಣೆಯ  ಕ್ರೀಡಾ ಸೇವಾ ಸಂಸ್ಥೆ  ಕೋಟಿ -ಚೆನ್ನಯ ಗ್ರೂಪ್‌ ವತಿಯಿಂದ  ದ್ವಿತೀಯ ವರ್ಷದ ಕೋಟಿ -ಚೆನ್ನಯ  ಟ್ರೋಪಿ ಕ್ರಿಕೆಟ್‌ ಪಂದ್ಯಾಟವು ಮಾ. 9ರಂದು   ಪಾಷಣ್‌ನಲ್ಲಿರುವ ಎನ್‌ಸಿಎಲ್‌ ಗ್ರೌಂಡ್‌ನ‌ಲ್ಲಿ ನಡೆದಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ನಮ್ಮ ಹಿರಿಯರ  ಕಾಲದಲ್ಲಿ ಇಂತಹ ಅವಕಾಶಗಳು ಬಹಳ ವಿರಳವಾಗಿತ್ತು. ಅಂದಿನ ದಿನಗಳು ತುಂಬಾ ಕಷ್ಟ ದಿನಗಳಾಗಿದ್ದವು. ಸಣ್ಣ ಪ್ರಾಯದಲ್ಲೇ  ಪರವೂರು ಸೇರಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾ ರ್ಯ ಇತ್ತು. ಆದರೆ ಈಗ ಎಲ್ಲೇ  ಹೋದರು ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ತಂಬಾ ಅವಕಾಶಗಳಿವೆ. ಇದನ್ನು ಇಂದಿನ ಯುವ ಜನತೆ ಉಪಯೋಗಿಸಿಕೊಳ್ಳಬೇಕು ಎಂದು ನುಡಿದು  ಶುಭಹಾರೈಸಿದರು.

ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪಿಂಪ್ರಿ ನೆಹರೂ ನಗರದ ಅಯ್ಯಪ್ಪ ಸೇವಾ  ಮಂಡಲದ ಕಾರ್ಯದರ್ಶಿ ಗಣೇಶ್‌ ಅಂಚನ್‌ ಅವರು ಅತಿಥಿಯಾಗಿ ಉಪಸ್ಥಿತರಿದ್ದು ಬ್ಯಾಟಿಂಗ್‌ ಮಾಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಪ್ರಶಸ್ತಿ ವಿತರಣ ಸಮಾರಂಭದ ವೇದಿಕೆಯಲ್ಲಿ  ಕ್ರೀಡಾ ಪೋಷಕರುಗಳಾದ  ಉದ್ಯಮಿಗಳಾದ   ವಿಶ್ವನಾಥ್‌ ಟಿ. ಪೂಜಾರಿ ಅಂಬಿಕಾ, ಸುಧಾಕರ್‌  ಶೆಟ್ಟಿ  ಸೃಷ್ಟಿ, ನಿತೇಶ್‌ ಹೆಗ್ಡೆ,  ಗಣೇಶ್‌ ಅಂಚನ್‌, ಶಿವಣ್ಣ ಶೆಟ್ಟಿ, ಗಿರೀಶ್‌ ಪೂಜಾರಿ ಪ್ರಾಚಿ, ನೂತನ್‌ ಸುವರ್ಣ ಇವರು ಉಪಸ್ಥಿತರಿದ್ದರು.

ಅತಿಥಿ-ಗ‌ಣ್ಯರನ್ನು ಕೋಟಿ- ಚೆನ್ನಯ ಗ್ರೂಪ್‌ನ ಪ್ರಮುಖರು ಪುಷ್ಪಗುಚ್ಚ ಮತ್ತು ಸ್ಮರಣಿಕೆಯನ್ನಿತ್ತು ಗೌರವಿಸಿದರು. ಈ ಸಂದರ್ಭದಲ್ಲಿ  ಪುಣೆಯಲ್ಲಿ  ಕ್ರಿಕೆಟ್‌ ವಿಭಾಗದಲ್ಲಿ ಸಾಧನೆ ಮಾಡಿದ ರವಿ ಪೂಜಾರಿ ಇವರನ್ನು ಕೋಟಿ-ಚೆನ್ನಯ ಗ್ರೂಪ್‌ ವತಿಯಿಂದ ಶಾಲು ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ಪುಣೆ ಮತ್ತು ಮುಂಬಯಿಯಲ್ಲಿ ನೆಲೆಸಿರುವ ತುಳು-ಕನ್ನಡಿಗರಿಗಾಗಿ ಪಂದ್ಯಾಟವನ್ನು ಆಯೋಜಿಸ ಲಾಗಿತ್ತು. ಸೀಮಿತ ಓವಗಳ ಪಂದ್ಯಾಟದಲ್ಲಿ  ಸುಮಾರು 11 ತಂಡಗಳು ಭಾಗವಹಿಸಿದ್ದವು. ಲೀಗ್‌  ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ಫೈನಲ್‌ ಪಂದ್ಯದಲ್ಲಿ  ಪುಣೆಯ ಸಾಯಿ ಕ್ರಿಕೆಟರ್ಸ್‌ ಎ  ತಂಡವು ಶಬರಿ ಇಲೆವನ್‌   ತಂಡವನ್ನು ಸೋಲಿಸಿ ದ್ವಿತೀಯ  ಬಾರಿಗೆ    ಕೋಟಿ-ಚೆನ್ನಯ  ಟ್ರೋಪಿ ಮತ್ತು ನಗದು 22,222 ರೂ. ಗಳನ್ನು ಮುಡಿಗೇರಿಸಿಕೊಂಡಿತು. ಶಬರಿ ಇಲೆವನ್‌  ತಂಡವು ಟ್ರೋಪಿ ಮತ್ತು 11,111 ರೂ.   ನಗದನ್ನು ಪಡೆಯಿತು.

ತೃತೀಯ ಸ್ಥಾನಿಯಾದ ಸಾಯಿ  ಕ್ರಿಕೆಟರ್ಸ್‌ ಸಿ ತಂಡಕ್ಕೆ  ಟ್ರೋಪಿ ನೀಡಿ  ಸತ್ಕರಿಸಲಾಯಿತು. ಅತಿಥಿ-ಗಣ್ಯರು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನಿಸಿದರು. ಸಂತೋಷ್‌ ಪೂಜಾರಿ, ದಯಾನಂದ ಪೂಜಾರಿ ಮತ್ತು ಆದರ್ಶ ಪೂಜಾರಿ ಇವರು  ಹಿಂದಿ, ಕನ್ನಡ, ತುಳುವಿನಲ್ಲಿ ವೀಕ್ಷಕ ವಿವರಣೆಯನ್ನು ನೀಡಿದರು. ಅಪಾಯರ್‌ಗಳಾಗಿ ಸ್ವಪ್ನಿಲ್‌ ಚಿಕ್ಲೆ, ಕುಮಾರ್‌ ಠಾಕೂರ್‌, ಸಂಪತ್‌ ಜಾಧವ್‌ ಸಹಕರಿಸಿದರು. ಪಂದ್ಯಾ ಟದ ಯಶಸ್ಸಿಗೆ ಸಹಕರಿಸಿದ ಎಲ್ಲ ರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸ ಲಾಯಿತು. ಪುಣೆಯ   ಕ್ರೀಡಾ ಪೋಷಕರು ಈ ಸಂಧರ್ಭದಲ್ಲಿ  ಆಗಮಿಸಿ ಪ್ರೋತ್ಸಾಹಿಸಿ ಸಹಕರಿಸಿ ದರು. ಆಗಮಿಸಿದ  ಗಣ್ಯರಿಗೆ ಕೋಟಿ- ಚೆನ್ನಯ  ಕ್ರಿಕೆಟರ್ಸ್‌ನ ಪದಾಧಿಕಾರಿಗಳು ಪುಷ್ಪಗುಚ್ಚವನ್ನಿತ್ತು ಅಭಿನಂದಿಸಿದರು. ಕ್ರೀಡಾಳುಗಳಿಗೆ ಊಟ,  ಚಾ-ತಿಂಡಿಯ ವ್ಯವಸ್ಥೆಯನ್ನು ದಾನಿಗಳ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿತ್ತು. ಕೋಟಿ- ಚೆನ್ನಯ ಗ್ರೂಪ್‌ನ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶಂಕರ್‌ ಪೂಜಾರಿ ಬಂಟಕಲ್‌  ನಿರೂಪಿಸಿ ವಂದಿಸಿದರು. 

Advertisement

ವರದಿ:ಹರೀಶ್‌ ಮೂಡಬಿದ್ರಿ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next