ಚಿತ್ರದುರ್ಗದ ಕೋತಿರಾಮ ಎಂದೇ ಖ್ಯಾತಿಯ ಜ್ಯೋತಿರಾಜ್, ಅಂತಹ ಇನ್ನೊಂದು ಸಾಹಸದಲ್ಲಿ ಮಂಗಳವಾರ ತೊಡಗಿದವರು
ಸಂಜೆಯವರೆಗೂ ಮೇಲೆ ಬಾರದಿರುವ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. 3 ದಿನಗಳ ಹಿಂದೆ ಬೆಂಗಳೂರಿನ
ಮಂಜುನಾಥ್ ಎಂಬಾತ ಜೋಗಕ್ಕೆ ಬಂದವನು ಡೆತ್‌ನೋಟ್ ಬರೆದು ಸಿದಾಟಛಿಪುರ ಭಾಗದಿಂದ ಜೋಗ ಜಲಪಾತಕ್ಕೆ ಹಾರಿದ್ದಾನೆ ಎಂದು ಶಂಕಿಸಲಾಗಿತ್ತು. ಆತನ ದೇಹಕ್ಕಾಗಿ ಹುಡುಕಾಟ ನಡೆಸಲು ಕೋತಿರಾಮ ತನ್ನ ಇಂಡಿಯನ್ ಅಡ್ವೆಂಚರ್ ಮಂಕಿ ಕ್ಲಬ್‌ನ ಐದಾರು ಟ್ರೈನಿಂಗ್ ಹುಡುಗರ ಜೊತೆಗೆ ಸೋಮವಾರ ಸಂಜೆ ಇಲ್ಲಿಗೆ ಬಂದಿಳಿದಿದ್ದ. ಮಂಗಳವಾರ ಬೆಳಗಿನಿಂದಲೇ ಹುಡುಕಾಟ ನಡೆಸಿದ್ದರೂ ಯಾವುದೇ ಶವ ಪತ್ತೆಯಾಗಿರಲಿಲ್ಲ. ಈ ನಡುವೆ ಕಡೆಯ ಬಾರಿಗೆ ಕೋತಿರಾಮ ಮಧ್ಯಾಹ್ನ ಎರಡೂವರೆ ಸುಮಾರಿಗೆ ಜಲಪಾತದ ಮೇಲ್ಗಡೆ ಬಂದಿದ್ದ. ಆ ನಂತರ ಮೂರೂವರೆ ಸಮಯದಲ್ಲಿ ಮತ್ತೂಮ್ಮೆ ಕೆಳಗಿಳಿದವನು ಮತ್ತೆ ಮರಳಿಲ್ಲ. ಸಿಗ್ನಲ್
ಸಿಗುವುದಿಲ್ಲ ಎಂಬ ಕಾರಣಕ್ಕೆ ತನ್ನ ಜೊತೆ ಮೊಬೈಲ್ ತೆಗೆದುಕೊಂಡು ಹೋಗಿಲ್ಲ. ಅಲ್ಲದೆ ಆತ ಯಾವುದೇ ರೋಪ್ ಬಳಸದೆ ಜಲಪಾತದ ಕೆಳಗೆ ಇಳಿದಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಜ್ಯೋತಿರಾಜ್ ತಂಡದ ಹುಡುಗರು ಹುಡುಕಾಟ ನಡೆಸಿದ್ದರೂ ಸುಳಿವು ಸಿಕ್ಕಿಲ್ಲ. ಸಿದಾಟಛಿಪುರ, ಸಾಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕತ್ತಲೆಯಾದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
Advertisement