ಕೋಟೇಶ್ವರ: ಕೋಟೇಶ್ವರದಲ್ಲಿ ನಿರ್ಮಾಣಗೊಂಡಿರುವ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥವನ್ನು ಸೋಮವಾರ ಇಲ್ಲಿನ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಿಂದ ಅಲಂಕೃತ ವಾಹನದಲ್ಲಿ ಕುಕ್ಕೆಯತ್ತ ಪಯಣ ಬೆಳೆಸಿತು.
ರಥ ಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ರಾಜಗೋಪಾಲ ಆಚಾರ್ಯ ಅವರು ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ರಥ ನಿರ್ಮಾಣಕ್ಕೆ 2.50 ಕೋಟಿ ರೂ. ದೇಣಿಗೆ ನೀಡಿದ ಉದ್ಯಮಿ ಹಾಗೂ ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಅವರ ಪತ್ನಿ ಅನುರಾಧಾ ಮುತ್ತಪ್ಪ ರೈ, ಅಜಿತ್ ಶೆಟ್ಟಿ ಕಡಬ ಅವರಿಗೆ ನೂತನ ರಥವನ್ನು ಶಾಸ್ತ್ರೋಕ್ತವಾಗಿ ಹಸ್ತಾಂತರಿಸಿದರು.
ಪುರೋಹಿತ ರೋಹಿತಾಕ್ಷ ಆಚಾರ್ಯ ನೇತೃತ್ವದಲ್ಲಿ ವೈದಿಕ ವಿಧಿಗಳು ನಡೆದವು. ಸುಬ್ರಹ್ಮಣ್ಯ ದೇಗುಲದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ, ಚಂದ್ರಹಾಸ ಶೆಟ್ಟಿ, ಕರುಣಾಕರ ರೈ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಬಳ್ಳೇರಿ, ರಾಜೀವಿ ಆರ್. ರೈ, ಮಾಧವ ಡಿ., ಮಹೇಶ್ ಕುಮಾರ್ ಕೆ.ಎಸ್., ಸ್ವಪ್ನಾ ಅಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ ಅವರ ಸಮ್ಮುಖದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ವ್ಯವಸ್ಥಾಪನ ಸಮಿತಿ ಆಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಕೋಟಿಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಆಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ, ಉದ್ಯಮಿಗಳಾದ ಮಡಾಮಕ್ಕಿ ಶಶಿಧರ ಶೆಟ್ಟಿ, ಸುಧಿಧೀರ್ ಕುಮಾರ್ ಶೆಟ್ಟಿ, ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ಶಾಂತಾ ಗೋಪಾಲಕೃಷ್ಣ, ತೆಕ್ಕಟ್ಟೆ ಗ್ರಾ.ಪಂ. ಮಾಜಿ ಆಧ್ಯಕ್ಷ ಶಿವರಾಮ ಶೆಟ್ಟಿ ಪಾಲ್ಗೊಂಡರು.
ಮಾಜಿ ಸಚಿವ ನಾಗರಾಜ ಶೆಟ್ಟಿ ರಥ ರವಾನೆಗೆ ಉಚಿತವಾಗಿ ವಾಹನ
ನೀಡಿದ್ದಾರೆ. ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ. ಸುಕುಮಾರ್ ಶೆಟ್ಟಿ ಕಾರ್ಯ ನಿಮಿತ್ತ ಬೇರೆಡೆ ತೆರಳಿದ್ದ ಕಾರಣ ಶುಭ ಹಾರೈಸಿದರು.
ಪುರ ಮೆರವಣಿಗೆ
ಚೆಂಡೆ – ವಾದ್ಯ ಸಹಿತ ಭಕ್ತರ ಕಾಲ್ನಡಿಗೆ ಹಾಗೂ ವಾಹನ ಜಾಥಾ ಮೂಲಕ ಪುರ ಮೆರವಣಿಗೆಯಲ್ಲಿ ಕೋಟಿಲಿಂಗೇಶ್ವರ ಹಾಗೂ ಶ್ರೀ ಪಟ್ಟಾಭಿರಾಮ ಚಂದ್ರ ದೇಗುಲ ಮಾರ್ಗವಾಗಿ ರಾ.ಹೆ. ಮೂಲಕ ರಥ ಪ್ರಯಾಣ ಬೆಳೆಸಿತು.