Advertisement
ಇಲ್ಲಿನ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿನ ಸರ್ವಿಸ್ ರಸ್ತೆಯು ಬೆ„ಪಾಸ್ ಜಂಕ್ಷನ್‌ನಲ್ಲಿ ಸಂದಿಸುತ್ತದೆ. ಈ ಒಂದು ಜಂಕ್ಷನ್ ಸದಾ ವಾಹನಗಳ ಒತ್ತಡದಿಂದ ಕೂಡಿದ್ದು ಹಾಲಾಡಿ-ಕೋಟೇಶ್ವರ ಪೇಟೆ-ಕುಂಭಾಶಿ- ಕುಂದಾಪುರ ಸಹಿತ ಸಾಗುವ ಪ್ರಯಾಣಿಕರಿಗೆ ಸಂಪರ್ಕ ಕೊಂಡಿಯಾಗಿದೆ.
ಇಲ್ಲಿ ಸಾಗುವ ವಾಹನಗಳಿಗೆ ಯಾವುದೇ ರೀತಿಯ ಟ್ರಾಫಿಕ್ ಕಾನೂನು ಅನ್ವಯವಾಗುವುದಿಲ್ಲವೇ ಅನ್ನುವಷ್ಟರ ಮಟ್ಟಿಗೆ ವಿವಿಧ ಕಡೆಗಳಿಂದ ಆಗಮಿಸುವ ಲಘು ಹಾಗೂ ಘನ ವಾಹನಗಳು ಅಮಿತ ವೇಗದಿಂದ ಮನಬಂದಂತೆ ಸಾಗುತ್ತಿರುವುದು ಭಯದ ವಾತಾ ವರಣವನ್ನು ಸೃಷ್ಟಿಸಿದೆ. ಸರಕಾರಿ ಪದವಿ ಕಾಲೇಜು ಸಹಿತ ಕಟ್ಕರೆಯಲ್ಲಿನ ಕೈಗಾರಿಕೋದ್ಯಮಕ್ಕೆ ಸಾಗುವ ಪಾದಚಾರಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ದ್ವಿಚಕ್ರ ವಾಹನಗಳು ಕರ್ಕಶ ಶಬ್ದದೊಡನೆ ಸಾಗುತ್ತಿರುವುದು ಇಲ್ಲಿನ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ. ರಸ್ತೆ ಉಬ್ಬು ನಿರ್ಮಾಣ
ಬೈಪಾಸ್ ಜಂಕ್ಷನ್‌ನ ಅಂಡರ್‌ಪಾಸ್‌ನಲ್ಲಿ ದಿನೇ ದಿನೇ ಗಣನೀಯವಾಗಿ ಹೆಚ್ಚುತ್ತಿರುವ ವಾಹನಗಳ ಒತ್ತಡದಿಂದಾಗಿ ಸಂಭವಿಸಬಹುದಾದ ದುರಂತವನ್ನು ತಪ್ಪಿಸಲು ಲೋಕೋಪಯೋಗಿ ಅಧಿಕಾರಿಗಳೊಡನೆ ಚರ್ಚಿಸಿ ಹಾಲಾಡಿ ರಸ್ತೆಯಲ್ಲಿ ಅಗತ್ಯ ಬಿದ್ದಲ್ಲಿ ರಸ್ತೆ ಉಬ್ಬು ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಆ ಭಾಗದಲ್ಲಿ ಅತೀ ವೇಗದಿಂದ ಸಾಗುವ ವಾಹನಗಳನ್ನು ಗುರುತಿಸಿ ದಂಡಿಸಲಾಗುವುದು.
– ಕುಂದಾಪುರ ಟ್ರಾಫಿಕ್ ಪೊಲೀಸ್
Related Articles
ಬೈಪಾಸ್ ಜಂಕ್ಷನ್‌ಬಳಿ ಮನ ಬಂದಲ್ಲಿ ವಾಹನ ನಿಲುಗಡೆಗೊಳಿಸುತ್ತಿರುವುದರೊಡನೆ ಸರ್ವಿಸ್ ರಸ್ತೆಗಳಲ್ಲಿ ವಾಹನ ನಿಲುಗಡೆಗೊಳಿ ಸುತ್ತಿರುವುದು ನಿತ್ಯ ಪ್ರಯಾಣಿಕರಿಗೆ ಸುಗಮ ವಾಹನ ಸಂಚಾರಕ್ಕೆ ತಡೆವೊಡ್ಡಿದಂತಾಗುತ್ತಿದೆ. ಒಟ್ಟಾರೆ ಕೋಟೇಶ್ವರ ಬೈಪಾಸ್ ಜಂಕ್ಷನ್ ವಾಹನಗಳ ಒತ್ತಡದಿಂದ ಆಕ್ಸಿಡೆಂಟ್ ಝೋನ್ ಆಗಿ ಕಂಡುಬಂದಿದ್ದು ಇಲಾಖೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯ ಇದೆ.
-ಸ್ಥಳೀಯರು
Advertisement