ಕೋಟೇಶ್ವರ: ಪರಸ್ಪರ ಅರಿತು ಜೀವಿಸುವುದರೊಡನೆ ಸಮರ್ಥ, ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ ಅವರ ವೃತ್ತಿ ಗೌರವಕ್ಕೆ ತಕ್ಕದಾದ ಸ್ಥಾನಮಾನಗಳೊಡನೆ ಗೌರವಿಸುವ ಪ್ರವೃತ್ತಿ ಬೆಳೆಸಬೇಕು. ಸಮಾಜದ ಆಗುಹೋಗುಗಳನ್ನು ವಿಮರ್ಶಿಸಿ ಅವಲೋಕಿಸಿ ಸಮಾಜಮುಖೀಯಾಗಿ ಕಾರ್ಯ ನಿರ್ವಹಿಸುವ ರೋಟರಿಯಂತಹ ಸಂಸ್ಥೆಯು ಜನಾನುರಾಗಿಯಾಗಿರುವುದು ಜನಪರ ಕಾಳಜಿಯಿಂದಾಗಿದೆ. ಸಂಸ್ಕಾರಯುತ ಜೀವನಕ್ರಮದಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಎಂದು ಮುಕ್ತ ವಾಹಿನಿಯ ಕಾರ್ಯಕ್ರಮ ನಿರ್ವಾಹಕ ಎನ್. ಆರ್. ದಾಮೋದರ್ ಶರ್ಮಾ ಬಾಕೂìರು ಹೇಳಿದರು.
ಕೋಟೇಶ್ವರದ ಮೆಜೆಸ್ಟಿಕ್ ಸಭಾಭವನದಲ್ಲಿ ಶನಿವಾರದಂದು ನಡೆದ ರೋಟರಿ ಕ್ಲಬ್ ಕೊಟೇಶ್ವರ ಇದರ 2017-18ರ ಸಾಲಿನ ನೂತನ ಪದಾದಿಕಾರಿಗಳ ಪದಪ್ರಧಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ವಲಯ 2 ರ ಅಸಿಸ್ಟಂಟ್ ಗವರ್ನರ್ ರತ್ನಾಕರ ಗುಂಡ್ಮಿ ಅವರು 2017-18 ಸಾಲಿನ ನೂತನ ಅಧ್ಯಕ್ಷ ಎನ್. ಪ್ರಕಾಶ ಆಚಾರ್ ಮತ್ತು ಕಾರ್ಯದರ್ಶಿ ಸತೀಶ್ ಆಚಾರ್ ಅವರನ್ನು ಗುರುತಿಸಿ ಅವರಿಗೆ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಪದವಿಯ ಪಿನ್ ತೋಡಿಸುವುದರೊಡನೆ ಸ್ವಾಗತಿಸಿದರು.
ನಿಕಟಪೂರ್ವ ಕೋಟೇಶ್ವರ ರೋಟರಿ ಅಧ್ಯಕ್ಷ ಶಂಕರ್ ನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿಕಟಪೂರ್ವ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಸುಧಾ ರಾಜಗೋಪಾಲ ಉಪಸ್ಥಿತರಿದ್ದರು.
ಉಪನ್ಯಾಸಕ ಕೃಷ್ಣಮೂರ್ತಿ ಪಿ.ಕೆ. ಇವರ ಸಂಪಾದಕತ್ವದಲ್ಲಿ ಮೂಡಿಬಂದ ಸಂಗಮ ಮಾಸಪತ್ರಿಕೆಯನ್ನು ವಲಯ 2ರ ವಲಯ ಸೇನಾನಿ ಶ್ಯಾಮ್‌ಸುಂದರ್ ನಾ„ರಿ ಬಿಡುಗಡೆಗೊಳಿಸಿದರು. ರೋಟರಿ ಕ್ಲಬ್ ಸದಸ್ಯರ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಶಂಕರ್ ನಾಯ್ಕ ಸ್ವಾಗತಿಸಿದರು. ಗಣೇಶ್ ಆಚಾರ್ ಟಿ., ವಿಜಯಕುಮಾರ್ ಶೆಟ್ಟಿ, ಸುಧೀರ್ ಶೆಟ್ಟಿ ನೂಜಿ, ಉದಯಕುಮಾರ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪ್ರಭಾಕರ ಬಿ. ಕುಂಭಾಶಿ ಕಾರ್ಯಕ್ರಮ ನಿರ್ವಹಿಸಿ ದರು. ಸತೀಶ್ ಆಚಾರ್ ವಂದಿಸಿದರು.