ಎರಡು ಗ್ರಾ.ಪಂ. ಸುಪರ್ದಿಗೆ ಇಲ್ಲಿನ ಪೇಟೆ ಬರುತ್ತದೆ. ಆದರೆ ಪೇಟೆ ಒಳಚರಂಡಿಯ ಹೂಳೆತ್ತದ್ದರಿಂದ ನೀರಿನ ಹರಿವಿಗೆ ತಡೆಯಾಗಿದೆ. ವಿಜಯ ಬ್ಯಾಂಕ್ ಪಕ್ಕ ವರ್ಷಂಪ್ರತಿ ಕೃತಕ ನೆರೆ ಸೃಷ್ಟಿಯಾಗಿ ಪಾದಚಾರಿಗಳು ಸಮಸ್ಯೆ ಅನುಭವಿಸುವಂತಾಗಿದೆ. ಜತೆಗೆ ಮತ್ತೂಂದು ಬದಿ ಚರಂಡಿಯಲ್ಲಿನ ತ್ಯಾಜ್ಯ ತೆಗೆಯದ್ದರಿಂದ ಅವಾಂತರಕ್ಕೆ ಕಾರಣವಾಗಿದೆ.
Advertisement
ದೇಗುಲಕ್ಕೂ ನೀರುಇನ್ನು ರಥಬೀದಿಯಲ್ಲಿನ ಇಕ್ಕೆಲಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಪೇಟೆಯ ನೀರು ರಸ್ತೆಯಲ್ಲಿ ಹರಿದು ಕೋಟಿಲಿಂಗೇಶ್ವರ ದೇಗುಲದ ಒಳಪೌಳಿಗೆ ನೇರವಾಗಿ ನುಗ್ಗುತ್ತಿದೆ. ಇದು ಭಕ್ತರಿಗೆ ಕಿರಿಕಿರಿ ಉಂಟುಮಾಡಿದೆ.
ಕೋಟೇಶ್ವರ ಮುಖ್ಯರಸ್ತೆಯ ಒಳಚರಂಡಿಗಳಲ್ಲಿನ ತ್ಯಾಜ್ಯ ವಿಲೇವಾರಿಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಪೇಟೆಯಲ್ಲಿನ ವ್ಯಾಪಾರ ಹಾಗೂ ವ್ಯವಹಾರಸ್ಥರು ಚರಂಡಿ ನಿರ್ಮಾಣಕ್ಕೆ ಸಹಕರಿಸಬೇಕು. ತ್ಯಾಜ್ಯ ವಿಲೇವಾರಿ ಮಾಡಿದರೂ, ತ್ಯಾಜ್ಯ ಎಸೆವ ಚಾಳಿ ಮುಂದುವರಿದಿದೆ.
– ಜಾನಕಿ ಬಿಲ್ಲವ,
ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷರು ಪಂಚಾಯತ್‌ಗೆ ಮಾಹಿತಿ
ಬೀಜಾಡಿ ವ್ಯಾಪ್ತಿಯ ಕೋಟೇಶ್ವರ ಪೇಟೆಯ ಒಳಚರಂಡಿಯಲ್ಲಿನ ತ್ಯಾಜ್ಯ ವಿಲೇವಾರಿ ಮಾಡಿ ಕೃತಕ ನೆರೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪಂಚಾಯತ್‌ಗೆ ಮಾಹಿತಿ ನೀಡಲಾಗಿದೆ. ಅಧ್ಯಕ್ಷರ ಅನುಮತಿ ಮೇರೆಗೆ ಕಾಮಗಾರಿ ಆರಂಭಿಸಲಾಗುವುದು
– ರವೀಂದ್ರ ದೊಡ್ಮನೆ,
ಬೀಜಾಡಿ ಗ್ರಾಮ ಪಂಚಾಯತ್ ಸದಸ್ಯರು.