Advertisement
7ನೇ ಶತಮಾನದ್ದು! ಬಾರಕೂರು ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ 7 ಶತಮಾನದಲ್ಲಿ ನಿರ್ಮಾಣಗೊಂಡಿದೆ ಎಂದು ಇತಿಹಾಸ ಹೇಳುತ್ತದೆ. ಅದೇ ಸಂದರ್ಭ ಕೋಟೆಕೆರೆಯೂ ರಚನೆ ಯಾಗಿತ್ತು ಎನ್ನಲಾಗಿದೆ.
ರಾಜರ ಆಳ್ವಿಕೆ
ರಾಜರ ಆಳ್ವಿಕೆಯಲ್ಲಿ ವೈಭವದ ದಿನಗಳನ್ನು ಕಂಡ ನಗರಿ ಬಾರಕೂರು. ಆಳುಪರು, ಪಾಂಡ್ಯರು, ಜೈನರು, ವಿಜಯನಗರ, ಸಾಮಂತ ರಾಜರು ಬಾರಕೂರನ್ನು ಆಳಿದ್ದರು. ಪ್ರತಿ ನಿತ್ಯ ಉತ್ಸವ ನಡೆಯಲಿ ಎನ್ನುವ ಉದ್ದೇಶದಿಂದ 365 ದೇವಸ್ಥಾನಗಳನ್ನು ನಿರ್ಮಿಸಲಾಗಿತ್ತು. ಕೃಷಿ, ನೀರಾವರಿ ಮತ್ತಿತರ ಉದ್ದೇಶದಿಂದ ಸಾಕಷ್ಟು ಕೆರೆಗಳನ್ನೂ ನಿರ್ಮಿಸಲಾಗಿತ್ತು. ಬಾರಕೂರಿನಲ್ಲಿ ಕೋಟೆ ಕೆರೆ ಜತೆಗೆ ಮೂಡುಕೇರಿ, ಚೌಳಿಕೇರಿಗಳಲ್ಲಿ ಬೃಹತ್ ಕೆರೆಗಳಿವೆ.
ಕೋಟೆಕೆರೆಯಲ್ಲಿ ಮೊದಲು ಸಮೃದ್ಧ ನೀರಿತ್ತು. ನೂರಾರು ಎಕ್ರೆ ಕೃಷಿ ಭೂಮಿಗೆ ಆಸರೆಯಾಗಿತ್ತು. ದೇವಸ್ಥಾನದ ಕೆರೆ ದೀಪೋತ್ಸವವೂ ವಿಜೃಂಭಣೆಯಿಂದ ನಡೆಯುತ್ತಿತ್ತು. ಬೃಹತ್ ಶಿಲಾ ಕಲ್ಲು ಗಳಿಂದ, ಕೆಂಪು ಕಲ್ಲಿನಿಂದ ಕಟ್ಟಿದ ಸುಂದರ ಕೆರೆ ಇದಾಗಿದೆ. ನೋಡಲೂ ರಮಣೀಯವಾಗಿದ್ದು, ಸುಮಾರು 15 ವರ್ಷಗಳ ಹಿಂದೆ ಸ್ವಲ್ಪ ಪ್ರಮಾಣದ ಮಣ್ಣು ತೆಗೆಯಲಾಗಿತ್ತು. ಸಂಪೂರ್ಣ ನಿರ್ಲಕ್ಷ್ಯ
ಇತ್ತೀಚಿನ ವರ್ಷಗಳಲ್ಲಿ ಕರೆ ಸಂಪೂರ್ಣ ನಿರ್ಲಕ್ಷéಕ್ಕೊಳಗಾಗಿದೆ. ಗಿಡಗಂಟಿ ಆವರಿಸಿದ್ದು, ಆವರಣ ಕುಸಿಯ ತೊಡಗಿದೆ. ಹೂಳು ತುಂಬಿ ನೀರಿನ ಸಂಗ್ರಹ ಸಾಮರ್ಥ್ಯ ತೀವ್ರ ಇಳಿಕೆಯಾಗಿದೆ. ಕಸ, ತ್ಯಾಜ್ಯ ಎಸೆಯುವ ಕೊಂಪೆಯಾಗಿ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿದೆ.
Related Articles
ಐತಿಹಾಸಿಕ ಕೋಟೆಕೆರೆ ಜೀರ್ಣೋ ದ್ಧಾರಕ್ಕೆ ವಿಫುಲ ಅವಕಾಶಗಳಿವೆ. ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದು ಪರಿಸರದ ಬಾವಿಗಳು ಬರಡಾಗಿವೆ. ಕೆರೆ ಅಭಿವೃದ್ದಿಗೊಳಿಸಿದರೆ ಕುಡಿಯುವ ನೀರಿಗೆ ಆಸರೆಯಾಗುತ್ತದೆ. ಸ್ವಚ್ಚಗೊಳಿಸಿ ಹೂಳು ತೆಗೆದರೆ ಮತ್ತೂಮ್ಮೆ ಸುಂದರ ಕೋಟೆ ಕೆರೆ ಕಾಣಲು ಸಾಧ್ಯವಿದೆ. ಕೋಟೆಕೆರೆ ಸಹಿತ ಬಾರಕೂರಿನ ಯಾವುದೇ ಕೆರೆ ಅಭಿವೃದ್ಧಿಗೊಳಿಸುವುದಾದರೂ ಶಾಶ್ವತ ಕಾಮಗಾರಿಯ ಅಗತ್ಯವಿದೆ. ಗುಣ ಮಟ್ಟದ ಕಾರ್ಯ ಕೈಗೊಂಡು ಸಮಗ್ರ ಅಭಿವೃದ್ಧಿಯಾಗಬೇಕು, ಬಾಕೂìರಿನ ಕೋಟೆಯಲ್ಲಿ ಇತ್ತೀಚೆಗೆ ಆಳುಪೋತ್ಸವ ವಿಜೃಂಭಣೆಯಿಂದ ಜರಗಿತ್ತು. ಇಂತಹ ಉತ್ಸವಗಳ ಜತೆ ಐತಿಹಾಸಿಕ ಸ್ಥಳ, ಕೆರೆಗಳ ಅಭಿವೃದ್ದಿಯೂ ಆಗಲಿ ಎಂದು ಜತೆಗೆ ಆಶಿಸಿದ್ದಾರೆ.
Advertisement
ರಸ್ತೆಗೆ ಮನವಿಕೆರೆ ಸಮೀಪ ಹಲವು ಮನೆಗಳಿದ್ದು, ಇಲ್ಲಿನ ನಿವಾಸಿಗಳು ಕೆರೆ ದಂಡೆಯ ಕಾಲು ಹಾದಿಯನ್ನೇ ಆಶ್ರಯಿಸಿದ್ದಾರೆ. ಸಂಚಾರಕ್ಕೆ ಅನುಕೂಲವಾಗಿ ಕೆರೆ ಬದಿ ರಸ್ತೆ ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಪ್ರವಾಸಿ ತಾಣ
ಕೋಟೆ ಕೆರೆ ಅಭಿವೃದ್ದಿ ಪಡಿಸಿ ಪ್ರೇಕ್ಷಣೀಯ ಸ್ಥಳವಾಗಿಸಲು ವಿಫುಲ ಅವಕಾಶವಿದೆ. ಕೆರೆ ಸ್ವತ್ಛಗೊಳಿಸುವ ಜತೆಗೆ ಸುತ್ತಲೂ ನಡೆದಾಡಲು ದಾರಿ ಹಾಗೂ ಪಾರ್ಕ್ ನಿರ್ಮಿಸಿದರೆ ಉತ್ತಮ ಪ್ರವಾಸೀ ತಾಣವಾಗಲಿದೆ.
– ಬಿ. ಮಂಜುನಾಥ ರಾವ್, ಆಡಳಿತ ಮೊಕ್ತೇಸರರು,
ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬಾರಕೂರು – ಪ್ರವೀಣ್ ಮುದ್ದೂರು