Advertisement

ಕೂಲಿಗಾಗಿ ಆಗ್ರಹಿಸಿ ಕೋಟೆಕಲ್ಲ ಗ್ರಾಪಂಗೆ ಬೀಗ; ಪ್ರತಿಭಟನೆ

02:56 PM Jan 08, 2020 | Team Udayavani |

ಗುಳೇದಗುಡ್ಡ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿಕಾರರಿಗೆ ಸಮರ್ಪಕವಾಗಿ ಕೂಲಿ ಕೆಲಸ ನೀಡಿಲ್ಲ. ಕೆಲಸ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ತೋಗುಣಸಿ ಗ್ರಾಮದ ಕೂಲಿಕಾರರು ಆಕ್ರೋಶ ವ್ಯಕ್ತಪಡಿಸಿ ಕೋಟೆಕಲ್ಲ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

Advertisement

150 ಕೂಲಿಕಾರರ ಪೈಕಿ ಈಗ 40 ಜನರಿಗೆ ಕೆಲಸ ಕೊಟ್ಟಿದ್ದಾರೆ. ಉಳಿದ 110 ಕೂಲಿಕಾರರಿಗೆ ಕೆಲಸ ಕೊಟ್ಟಿಲ್ಲ. ಈ ಮಾರ್ಚ್‌ ಅಂತ್ಯದೊಳಗೆ ಉಳಿದ 110 ಕೂಲಿಕಾರರಿಗೆ ಕೆಲಸ ಕೊಡಬೇಕು. ಎನ್‌.ಎಂ.ಆರ್‌.ಕೊಡುವವರೆಗೆ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಂಚಾಯತಿ ಅ ಧಿಕಾರಿಗಳು ಪ್ರತಿ ಜಾಬ್‌ ಕಾರ್ಡ್‌ಗೆ ಸುಮಾರು 150 ಕೂಲಿ ಕೆಲಸ ನೀಡಬೇಕು. ಅದರಲ್ಲಿ ಸುಮಾರು 40 ದಿನದ ಕೂಲಿ ಕೆಲಸ ಕೊಟ್ಟಿದ್ದಾರೆ. ಉಳಿದ ದಿನದ ಕೆಲಸ ಕೊಡಿ ಎಂದು ಕಳೆದ ನವೆಂಬರ್‌ನಲ್ಲಿ ಬೇಡಿಕೆ ಕೊಟ್ಟಿದ್ದೇವೆ. ಆದರೆ ಅ ಧಿಕಾರಿಗಳು ಸ್ಪಂದಿಸುತ್ತಿಲ್ಲ. ದುಡಿದ ಕೆಲಸಕ್ಕೂ ಕೂಲಿ ಹಣ ಜಮಾ ಮಾಡುತ್ತಿಲ್ಲ. ಬೇರೆ ಬೇರೆ ಗ್ರಾಮಗಳಿಗೆ ಕೆಲಸ ನೀಡಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ. ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ಅಧಿಕಾರಿಗಳು ಕೂಲಿಕಾರರನ್ನು ನಿತ್ಯ ಅಲೆದಾಡಿಸುತ್ತಾರೆ. ಎರಡು ಗುಂಪಿನವರಿಗೆ ಕಳೆದ ಏಳು ತಿಂಗಳಿಂದ ಕೂಲಿ ಕೊಟ್ಟಿಲ್ಲ. ಅದಕ್ಕೆ ಬಾಕಿ ಕೂಲಿ ಜತೆಗೆ ನಷ್ಟ ಪರಿಹಾರ ಕೊಡಬೇಕು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಾಕಷ್ಟು ಕೂಲಿಕಾರರಿಗೆ ಅನ್ಯಾಯವಾಗಿದೆ. ಕೂಡಲೇ ಕೂಲಿ ಕೆಲಸ ನೀಡಬೇಕು. ಹಣ ಜಮಾ ಮಾಡಬೇಕೆಂದು ತೋಗುಣಸಿ ಗ್ರಾಮದ ಯಮನವ್ವ ಪೂಜಾರಿ, ವೀರಭದ್ರಪ್ಪ ಉಳ್ಳಾಗಡ್ಡಿ, ಗಂಗವ್ವ ಗಾಣಿಗೇರ, ಶಾಂತವ್ವ ವಿಭೂತಿ, ಶೋಭಾ ಬೇವಿನಮಟ್ಟಿ, ರೇಣುಕಾ ಹೊಸಮನಿ, ರೇಣುಕಾ ಕರಮ ಪೂಜಾರಿ, ಮಹಾಂತವ್ವ ಬೇವಿನಮಟ್ಟಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next