Advertisement

Kotee movie: ನೈಜತೆಯೇ ಕೋಟಿಯ ಜೀವಾಳ

10:19 AM Jun 14, 2024 | Team Udayavani |

ಧನಂಜಯ್‌ ನಟನೆಯ “ಕೋಟಿ’ ಚಿತ್ರ ಇಂದು ತೆರೆಕಾಣುತ್ತಿದೆ. ಈಗಾಗಲೇ ಟ್ರೇಲರ್‌, ಹಾಡುಗಳು ಬಿಡುಗಡೆ ಯಾಗಿವೆ. ಪ್ರೀಮಿಯರ್‌ ಶೋನಲ್ಲೂ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಕಿರುತೆರೆ ಲೋಕದಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಪರಮ್‌ “ಕೋಟಿ’ಯ ಸಾರಥಿ. ಇದು ಅವರ ಚೊಚ್ಚಲ ನಿರ್ದೇಶನ. ಒಂದು ಥ್ರಿಲ್ಲರ್‌ ಡ್ರಾಮಾವನ್ನು ರೆಗ್ಯುಲರ್‌ ಶೈಲಿ ಬಿಟ್ಟು ಹೇಳಿದ ಖುಷಿ ಅವರದು.

Advertisement

ಬಿಡುಗಡೆಯ ಹಂತಕ್ಕೆ ಬಂದಿರುವ “ಕೋಟಿ’ಯ ಬಗ್ಗೆ ಮಾತನಾಡುವ ಅವರು, “ಜನ ಬರುತ್ತಾರಾ, ಜನ ಬರಬಹುದು, ಬಂದರೆ ಯಾವ ಮಟ್ಟದಲ್ಲಿ ಬರಬಹುದು… ಇಂತಹ ಒಂದು ಎಕ್ಸೈಟ್‌ಮೆಂಟ್‌ನಲ್ಲಿ ನಾನಿದ್ದೇನೆ. ಆದರೆ, ನಮ್ಮ “ಕೋಟಿ’ ಚಿತ್ರಮಂದಿರಕ್ಕೆ ಜನರನ್ನು ಕರೆತರುತ್ತಾನೆ ಎಂಬ ವಿಶ್ವಾಸವಿದೆ. ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ ಇದು ಕೋಟಿಯ ಕಥೆ. ಕೋಟಿ ಹಣದ ಕಥೆ, ಕೋಟಿ ಎಂಬ ನಾಯಕನ ಕಥೆ, ಕೋಟಿ ಕನಸು ಕಾಣುತ್ತಿರುವ ನಮ್ಮ- ನಿಮ್ಮೆಲ್ಲರ ಕಥೆ. ಈಗಾಗಲೇ ಟೀಸರ್‌ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನನ್ನಿಂದ ಇಂತಹ ಟೀಸರ್‌ ಬರುತ್ತೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂಬ ಮಾತುಗಳೂ ಬಂದುವು. ಟೀಸರ್‌ ಗೆದ್ದಿದೆ. ಅದೇ ರೀತಿ ಸಿನಿಮಾ ಕೂಡಾ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ನಾನು ಬರೆದುಕೊಂಡ ಕಥೆ ಹಾಗೂ ಮೂಡಿಬಂದಿರುವ ಸಿನಿಮಾವನ್ನು ನೋಡಿದಾಗ ಅಂದುಕೊಂಡಿದ್ದನ್ನು ದೃಶ್ಯರೂಪದಲ್ಲಿ ಸಾಧಿಸಿದ ಖುಷಿ ಇದೆ. ನನಗೊಂದು ಒಳ್ಳೆಯ ತಂಡ ಸಿಕ್ಕಿದೆ. ಧನಂಜಯ್‌ನಂತರ ಅದ್ಭುತ ನಟ ನನ್ನ ಸಿನಿಮಾವನ್ನು ಟ್ರಾವೆಲ್‌ ಮಾಡಿದ್ದಾರೆ. ಇಲ್ಲಿ ಶ್ರಮವಿದೆ. ಜೊತೆಗೆ ಅಪಾರವಾದ ಪ್ರತಿಭೆಗಳ ಸಂಗಮವಿದೆ. ಶ್ರಮ ಮತ್ತು ಪ್ರತಿಭೆ ಜೊತೆಯಾದಾಗ ಅಲ್ಲೊಂದು ಮ್ಯಾಜಿಕ್‌ ನಡೆಯುತ್ತೆ, ಆ ಮ್ಯಾಜಿಕ್‌ ಈ ಸಿನಿಮಾದಲ್ಲಿ ಆಗಿದೆ’ ಎನ್ನುತ್ತಾರೆ.

“ನಾನು ಈ ಹಿಂದೆ ಧಾರಾವಾಹಿ, ರಿಯಾಲಿಟಿ ಶೋ ಏನೇ ಮಾಡಿರಬಹುದು, ಸಿನಿಮಾ ಅನ್ನೋದು ಬೇರೆ ಮಾಧ್ಯಮ. ಸಿನಿಮಾದಲ್ಲಿ ಎಲ್ಲವನ್ನು ತುಂಬಾ ನೈಜವಾಗಿ ಹೇಳುವ ಅನಿವಾರ್ಯತೆ ಇರುವುದರಿಂದ ಅದಕ್ಕೆ ಪೂರಕವಾಗಿ ಕೆಲಸ ಮಾಡಿದ್ದೇನೆ. ನನ್ನ ಈ ಹಿಂದಿನ ಅನುಭವ ಸಿನಿಮಾದ ಸೂತ್ರಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಯಿತು. ಒಳ್ಳೆಯ ಕಥೆಗಳನ್ನು ಹೇಳಬೇಕೆಂಬ ತುಡಿತ ನನಗೆ ಚಿಕ್ಕಂದಿನಿಂದಲೇ ಇತ್ತು. ಆ ನಂತರ ಅದನ್ನು ಪ್ರಿಂಟ್‌, ವೆಬ್‌, ಕಿರುತೆರೆ… ಹೀಗೆ ಬೇರೆ ವಿಭಾಗಗಳಲ್ಲಿ ಹೇಳುತ್ತಾ ಬಂದೆ. ಈಗ ಒಂದೊಳ್ಳೆಯ ಕಥೆಯನ್ನು ಸಿನಿಮಾ ಮಾಧ್ಯಮ ಮೂಲಕ ಹೇಳಿದ್ದೇನೆ. ಒಂದೊಳ್ಳೆಯ ಪ್ರತಿಭಾವಂತ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ’ ಎನ್ನುತ್ತಾರೆ ಪರಮ್‌.

Advertisement

Udayavani is now on Telegram. Click here to join our channel and stay updated with the latest news.

Next