Advertisement

ಕೋಟೆ: ಪಶು ಆಸ್ಪತ್ರೆ ಬಳಿಯಲ್ಲಿ ತ್ಯಾಜ್ಯದ ರಾಶಿ

11:42 PM Jan 17, 2021 | Team Udayavani |

ಕಟಪಾಡಿ: ಕೋಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೋಟೆ ಸಂಪರ್ಕದ ಪ್ರಮುಖ ರಸ್ತೆಯ ಪಶು ಆಸ್ಪತ್ರೆಯ ಬಳಿಯಲ್ಲಿ ತ್ಯಾಜ್ಯದ ರಾಶಿಯು ಕಂಡು ಬರುತ್ತಿದ್ದು  ಪ್ರಾಣಿಯ ಕಳೇಬರವು ದುರ್ವಾಸನೆಯನ್ನು ಬೀರುತ್ತಿದ್ದು

Advertisement

ಪರಿಸರವು ಅಸಹ್ಯ ವಾತಾವರಣದಿಂದ ಕೂಡಿದೆ. ಈ ಭಾಗದಲ್ಲಿ ಸಾರ್ವಜನಿಕರು ತಮ್ಮ ಮನೆಯ ತ್ಯಾಜ್ಯದ ಜತೆಗೆ ಕೊಳೆತು ನಾರುವ ಆಹಾರದ ತ್ಯಾಜ್ಯ ಹಾಗೂ ಪ್ಲಾಸ್ಟಿಕ್‌ ಕೂಡಾ ಎಸೆಯುತ್ತಿರುವುದರಿಂದ ಪರಿಸರ ದುರ್ನಾತ ಬೀರುತ್ತಿದೆ. ಕುಡಿದು ಬಿಸಾಡಿದ ಮದ್ಯದ ಬಾಟಲಿಗಳೂ ರಸ್ತೆಯ ಅಂಚಿನಲ್ಲಿಯೇ ಕಂಡು ಬರುತ್ತಿದ್ದು ಪಾದಚಾರಿಗಳಿಗೆ ಸಾಕಷ್ಟು  ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಸ್ಥಳೀಯವಾಗಿ ಸಾಕಷ್ಟು ಮನೆಗಳನ್ನು ಹೊಂದಿರುವ ಕಾಲನಿ ಸಮೀಪದಲ್ಲಿದ್ದು ಯಾವುದೇ ಕ್ಷಣದಲ್ಲಿಯೂ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯು ಹೆಚ್ಚಿದ್ದು ಕತ್ತಲಾಗುತ್ತಿದ್ದಂತೆ ಗಾಳಿಯಿಂದಾಗಿ ಹೆಚ್ಚು ದುರ್ನಾತ ಜತೆಗೆ ವಿಪರೀತ ಸೊಳ್ಳ ಕಾಟವೂ ಇದ್ದು ಮನೆಮಂದಿಯು ಸಮಸ್ಯೆಯನ್ನು ಎದುರಿಸುವಂತಾಗಿದೆ.

ಈ ಭಾಗದಲ್ಲಿ ತ್ಯಾಜ್ಯ ವಿಲೇವಾರಿಗೆ ಸಮರ್ಪಕ ವ್ಯವಸ್ಥೆಯು ಇಲ್ಲದೇ ಇದ್ದು ಸಮಸ್ಯೆ ಸೃಷ್ಟಿಯಾಗಿದೆ. ವಿದ್ಯುತ್‌ ಟ್ರಾನ್ಸ್‌ ಫಾರ¾ರ್‌ ಕೂಡ ಇಲ್ಲಿಯೇ ಇರುವುದರಿಂದ ಒಂದು ಬಾರಿ ಸ್ವತ್ಛಗೊಳಿಸಿ ಇಂಟರ್‌ಲಾಕ್‌ ಅಳವಡಿಸಿ ಸುರಕ್ಷತೆಯನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಸೂಕ್ತ ರೀತಿಯಲ್ಲಿ ಮುನ್ನೆಚ್ಚರಿಕೆಯ ಜತೆಗೆ ಕಸ ಎಸೆಯುವವರ ವಿರುದ್ಧ ಕಾನೂನು ರೀತ್ಯಾ ಕ್ರಮಕ್ಕೆ ಮುಂದಾದಲ್ಲಿ ಇಲ್ಲಿನ ತ್ಯಾಜ್ಯ ಸಮಸ್ಯೆಗೆ ಶಾಶ್ವತವಾಗಿ ಬ್ರೇಕ್‌ ಹಾಕಲು ಸಾಧ್ಯ ಎಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ.

ಈ ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ಎಚ್ಚೆತ್ತು ಈ ಭಾಗದಲ್ಲಿನ ಸ್ವತ್ಛತೆಗೆ ಆದ್ಯತೆಯನ್ನು ನೀಡುವ ಮೂಲಕ ಸ್ವತ್ಛ ಪರಿಸರ ಹಾಗೂ ಆರೋಗ್ಯಪೂರ್ಣ ವಾತಾವರಣವನ್ನು ಕಲ್ಪಿಸುವಂತೆ ಸಾರ್ವಜನಿಕರು, ಪಾದ ಚಾರಿಗಳು ಆಗ್ರಹಿಸುತ್ತಿದ್ದಾರೆ.

Advertisement

ಕಟಪಾಡಿ ಮತ್ತು ಕೋಟೆ ಗ್ರಾ.ಪಂ. ವ್ಯಾಪ್ತಿಯ ಸರಹದ್ದು ಇದಾಗಿದೆ. ಕಟಪಾಡಿ ಗ್ರಾ.ಪಂ. ವ್ಯಾಪ್ತಿಯ ಜನರು ಹೆಚ್ಚಾಗಿ ಕೋಟೆ ವ್ಯಾಪ್ತಿಯ ಭಾಗದಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಈ ಬಗ್ಗೆ ಕಟಪಾಡಿ ಗ್ರಾ.ಪಂ.ಗೆ ಮಾಹಿತಿಯನ್ನೂ ನೀಡಲಾಗಿದೆ. ಪ್ರಸ್ತುತ ಇರುವ ತ್ಯಾಜ್ಯದ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಲಾಗಿದ್ದು, ಕೂಡಲೇ ತೆರವುಗೊಳಿಸಲಾಗುತ್ತದೆ. ಬಳಿಕ ಸಿ.ಸಿ.ಕೆಮರಾ ಕಣ್ಗಾವಲು ಇರಿಸಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.-ಶ್ರುತಿ ಕಾಂಚನ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಕೋಟೆ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next