Advertisement

ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತಿದೆ ಕೋಟಕ್ ಮಹೀಂದ್ರಾ ಬ್ಯಾಂಕ್..!

01:46 PM Mar 25, 2021 | Team Udayavani |

ನವ ದೆಹಲಿ : ಹಣದುಬ್ಬರ ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸದೊಂದು ಆಫರ್ ನ್ನು ನೀಡುತ್ತಿದ್ದು, ಗ್ರಾಹಕ ಸ್ನೇಹಿ ಆಫರ್ ಎಂದು ಕರೆಸಿಕೊಳ್ಳುತ್ತಿದೆ. ಹೌದು, ಹಣದುಬ್ಬರದ ಈ ಸಂದರ್ಭದಲ್ಲಿ  ತನ್ನ ಗ್ರಾಹಕರಿಗೆ ಸುಲಭವಾಗುವಂತೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲವನ್ನು ನೀಡುತ್ತಿದೆ.

Advertisement

ಹೌದು, ಈ ಆಫರ್ ಅಡಿಯಲ್ಲಿ ಗೃಹ ಸಾಲದ ಆರಂಭಿಕ ಬಡ್ಡಿದರವನ್ನು ಶೇಕಡಾ 6.65ಕ್ಕೆ ಇಳಿಸಲಾಗಿದೆ ಎಂದು ಕೋಟಕ್ ಮಹೀಂದ್ರಾ ಹೇಳಿಕೊಂಡಿದೆ. ಆದರೇ, ಈ ಆಫರ್ ಸೀಮಿತ ಅವಧಿಯ ತನಕ ಮಾತ್ರ ಇರುವುದು. ಈ ಪ್ರಯೋಜನವನ್ನು ಪಡೆಯಲು ಇಚ್ಛಿಸುವವರು ಆದಷ್ಟು ಬೇಗ ಈ ಬಗ್ಗೆ ಗಮನಹರಿಸಬಹುದು.

ಓದಿ :  ಕೋವಿಡ್ ಸೋಂಕು ತಡೆಗೆ ಬೆಂಗಳೂರಿನಲ್ಲಿ ಹೊಸ ನಿಯಮಗಳು: ನೆಗೆಟಿವ್ ವರದಿ ಕಡ್ಡಾಯ, ಕೈಗೆ ಸೀಲ್

ಇನ್ನು,  ಈ ಆಫರ್  ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. ಗೃಹ ಸಾಲ ವಲಯದಲ್ಲಿ ಈಗ ಬೇರೆ ಬ್ಯಾಂಕುಗಳಿಗಿಂತ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಗ್ಗದ ಗೃಹ ಸಾಲವನ್ನು ನೀಡುತ್ತಿರುವುದಾಗಿ ಕೋಟಕ್ ಮಹೀಂದ್ರಾ ಬ್ಯಾಂಕ್ ಹೇಳಿಕೊಂಡಿದೆ.

ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವ ಗ್ರಾಹಕರಿಗೆ ಶೇಕಡಾ 6.65 ಬಡ್ಡಿದರದಲ್ಲಿ ಗೃಹ ಸಾಲ ನೀಡಲಾಗುವುದು ಮತ್ತು ಒಟ್ಟು ಮಾಸಿಕ ಗಳಿಕೆಗೆ ಅನುಗುಣವಾಗಿ ಬ್ಯಾಂಕ್ ಸಾಲವನ್ನು ಮೌಲ್ಯಮಾಪನ ಮಾಡುತ್ತದೆ ಎಂದು ಕೊಟಕ್ ಮಹೀಂದ್ರಾ ಬ್ಯಾಂಕ್  ಸ್ಪಷ್ಟಪಡಿಸಿದೆ.

Advertisement

ಈ ಬಗ್ಗೆ ಆಸಕ್ತಿ ಇರುವವರು ಹೆಚ್ಚಿನ ಸ್ಪಷ್ಟತೆಗೆ ಮತ್ತು ಮಾಹಿತಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಗಮನಿಸಬಹುದಾಗಿದೆ.

ಓದಿ : ನಟಿಯರು ಹೀರೋಯಿನ್‌ ಪಾತ್ರದಿಂದ ಹೊರಬರಲೇ ಬೇಕು…: ಸೋನು ಗೌಡ ನೇರ ಮಾತು

Advertisement

Udayavani is now on Telegram. Click here to join our channel and stay updated with the latest news.

Next