Advertisement

ಕೋಟ: ಕಾರು ಢಿಕ್ಕಿ; ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

07:30 AM Sep 19, 2017 | |

ಕೋಟ: ಕಾರು ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಕೋಟ ಸಮೀಪದ ಮೂಕೈìಯಲ್ಲಿ ಸಂಭವಿಸಿದೆ.

Advertisement

ಕುಂದಾಪುರ ಗುಲ್ವಾಡಿಯ ನಿವಾಸಿ ಇಸ್ಮಾಯಿಲ್‌ (55) ಮೃತಪಟ್ಟವರು.  ಈತ  ವೃತ್ತಿಯಲ್ಲಿ ಬಸ್‌ ಕಂಡೆಕ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಸೋಮವಾರ ಮಧುವನದಲ್ಲಿರುವ ತನ್ನ ಅಕ್ಕನ ಮನೆಗೆ ತೆರಳಿದ್ದರು. ಅಪರಾಹ್ನ  ವಾಪಸು ಕುಂದಾಪುರಕ್ಕೆ ತೆರಳಲು ಕೋಟ ಮೂಕೈìಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ಉಡುಪಿಯಿಂದ ಕುಂದಾಪುರ ಕಡೆಗೆ ಚಲಿಸುತ್ತಿದ ಕಾರು ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.

ಮೃತರು  ಪತ್ನಿ ಹಾಗೂ ಪುತ್ರಿಯನ್ನ ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಕೋಟ ಪೊಲೀಸ್‌ ಠಾಣೆ ಉಪನೀರಿಕ್ಷಕ ಸಂತೋಷ್‌ ಎ. ಕಾಯ್ಕಿಣಿ ಹಾಗೂ ಸಿಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯರು ಹಾಗೂ ಜೀವನ್‌ ಮಿತ್ರಆ್ಯಂಬುಲೆನ್ಸ್‌  ಚಾಲಕ ನಾಗೇಶ ಪುತ್ರನ್‌ ಮೃತ ಶರೀರವನ್ನು ಸಾಗಿಸುವಲ್ಲಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next