Advertisement

ಕೋಡಿ ಗ್ರಾ.ಪಂ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭೆ; ಅಭಿವೃದ್ಧಿ ಕುರಿತು ಚರ್ಚೆ

03:14 PM Jun 29, 2021 | Team Udayavani |

ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಕೋಡಿ ಗ್ರಾ.ಪಂ.ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಸಭೆ ನಡೆಸಿದರು.

Advertisement

ಗ್ರಾಮ ಪಂಚಾಯತ್  ವ್ಯಾಪ್ತಿಯ 471 ಮನೆಗಳಿಗೆ ಹಕ್ಕುಪತ್ರ ಸಮಸ್ಯೆ ಇದ್ದು, ಇದರಲ್ಲಿ 350 ಕುಟುಂಬಗಳಿಗೆ ಸಿ.ಆರ್.ಝಡ್. ಅನುಮತಿಯೊಂದಿಗೆ ಹಕ್ಕುಪತ್ರ ಮಂಜೂರು ಮಾಡಲು ಅವಕಾಶವಿದೆ. ಈ ಕುರಿತು ಅಂತಿಮ ಪ್ರಕ್ರೀಯೆ ಚಾಲ್ತಿಯಲ್ಲಿದೆ ಎಂದರು.

ಹಕ್ಕುಪತ್ರಕ್ಕಾಗಿ ಪಾವತಿಸಬೇಕಾದ ಸರಕಾರಿ ಹಣ ದುಬಾರಿಯಾಗಿದ್ದು ಇದನ್ನು ಶೇಕಡಾ 10 ರಷ್ಟು ಇಳಿಕೆ ಮಾಡಬೇಕು ಎನ್ನುವ ಬೇಡಿಕೆ ಇದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.

ಕೋಡಿಬೆಂಗ್ರೆ-ಹಂಗಾರಕಟ್ಟೆ ನಡುವಿನ ಬಾರ್ಜ್ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಕೋಡಿಬೆಂಗ್ರೆ ನಿವಾಸಿಗಳು ಮನವಿ ಮಾಡಿದರು. ತತ್‍ಕ್ಷಣ ಬಂದರು ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದ ಸಚಿವರು, ದುರಸ್ತಿಗೆ ಕ್ರಮಕೈಗೊಳ್ಳುವಂತೆ ತಿಳಿಸಿದರು. ಕೋಟ-ಕೋಡಿ ನಡುವೆ ಸರಕಾರಿ ಬಸ್ಸು ಓಡಾಟಕ್ಕೆ ಕ್ರಮಕೈಗೊಳ್ಳಬೇಕು ಎಂದು ಮನವಿ ವ್ಯಕ್ತವಾಯಿತು. ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಕರೆ ಮಾಡಿ ಬಸ್ಸು ವ್ಯವಸ್ಥೆಗೆ ಪೂರಕ ಕ್ರಮಕೈಗೊಳ್ಳುವಂತೆ ತಿಳಿಸಿದರು.

ಇದನ್ನೂ ಓದಿ: ಹಂತ-ಹಂತವಾಗಿ ದೇಗುಲಗಳನ್ನು ತೆರೆಯಲು ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Advertisement

ತಾಲೂಕು ಪಂಚಾಯತ್ ಅನುದಾನದಲ್ಲಿ ನಡೆದ ಲಕ್ಷಾಂತರ ಮೊತ್ತದ ಹಲವು ಕಾಮಗಾರಿಗಳನ್ನು ಮುಂಗಡವಾಗಿ ಬಿಲ್ ಮಾಡಿಕೊಂಡು  ಅಸಮರ್ಪಕವಾಗಿ ಕೆಲಸ ಮಾಡಲಾಗಿದೆ. ಈ ಬಗ್ಗೆ ಗ್ರಾ.ಪಂ. ಯಾವುದೇ ಚಕಾರವೆತ್ತುತ್ತಿಲ್ಲ. ಮಾಹಿತಿ ಹಕ್ಕಿನಡಿ ಮಾಹಿತಿ ಕೋರಿದರೆ ಸರಿಯಾಗಿ ನೀಡುತ್ತಿಲ್ಲ ಎನ್ನುವ ವಿಚಾರದಲ್ಲಿ ಗ್ರಾಮಸ್ಥರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಒ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಸಚಿವರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಮೆಂಡನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಗ್ರಾಮಸ್ಥರಾದ ಮನೋಹರ್ ಕುಂದರ್, ನಾಗರಾಜ್ ಬಿ. ಕುಂದರ್, ಉದಯ ಕೋಡಿ, ಸುಜಾತ, ಗ್ರಾ.ಪಂ. ಸದಸ್ಯ ಕೃಷ್ಣ ಪೂಜಾರಿ, ಅಂತೋನಿ ಡಿ’ಸೋಜ ಮುಂತಾದವರು  ವಿವಿಧ ವಿಚಾರದ ಕುರಿತು ಚರ್ಚೆ ನಡೆಸಿದರು.

ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ, ತಾ.ಪಂ. ಕಾರ್ಯನಿರ್ವಹಣಾಽಕಾರಿ ಎಚ್.ವಿ.  ಇಬ್ರಾಹಿಂಪುರ್, ಹಿರಿಯ ಸದಸ್ಯೆ ಗೀತಾ ಖಾರ್ವಿ, ಕೋಡಿಬೆಂಗ್ರೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಚ್ಚಿದಾನಂದ ಉಪಸ್ಥಿತರಿದ್ದರು. ಗ್ರಾ.ಪಂ. ಪಿಡಿಒ ಬೆನ್ನಿ ಕ್ವಾಡ್ರಸ್ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next