ಶಿವಮೊಗ್ಗ: ಮುಂದಿನ 15 ದಿನದೊಳಗೆ ರಾಜ್ಯ ಧಾರ್ಮಿಕ ಪರಿಷತ್ ರಚನೆ ಮಾಡಲಾಗುತ್ತದೆ. ರಾಜ್ಯದ 30 ಜಿಲ್ಲೆಯಲ್ಲೂ ಜಿಲ್ಲಾ ಧಾರ್ಮಿಕ ಪರಿಷತ್ ಇರಲಿದೆ ಎಂದು ರಾಜ್ಯ ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನಿಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜಿಲ್ಲಾ ಧಾರ್ಮಿಕ ಪರಿಷತ್ ಮೂಲಕ ದೇವಾಲಯಗಳಿಗೆ ಆಡಳಿತಾತ್ಮಕ ವ್ಯವಸ್ಥಾಪನಾ ಸಮಿತಿ ರಚಿಸಲಾಗುವುದು. ರಾಜ್ಯದಲ್ಲಿ ಹಲವೆಡೆ ದೇವಾಲಯಗಳ ಜಾಗ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಲು ಸರ್ವೇ ಪ್ರಕ್ರಿಯೆ ಸಹ ಪ್ರಾರಂಭ ಮಾಡಲಾಗುತ್ತಿದೆ ಎಂದರು.
ಮೀನುಗಾರಿಕಾ ಇಲಾಖೆಯಲ್ಲಿ 28 ಸಾವಿರ ಫಲಾನುಭವಿಗಳಿಗೆ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ. ಸಾಂಕೇತಿಕವಾಗಿ 3 ಮೀನುಗಾರರಿಗೆ ಪ್ರಧಾನಿಗಳು ಕ್ರೆಡಿಟ್ ಕಾರ್ಡ್ ವಿತರಿಸಿದ್ದಾರೆ. ರೈತರು ಹೇಗೆ ಕ್ರೆಡಿಟ್ ಕಾರ್ಡ್ ಬಳಸಿ ವ್ಯವಹಾರ ಮಾಡುತ್ತಾರೆ ಅದೇ ರೀತಿ ಮೀನುಗಾರರಿಗೆ ಮಾಡಬಹುದು. ಎಂದರು.
23 ಸಾವಿರ ಮಹಿಳೆಯರು ಸ್ವಸಹಾಯ ಹಾಗೂ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಮಾಡಿದ 50 ಸಾವಿರ ರೂ ಸಾಲ ಮನ್ನ ಮಾಡಲಾಗಿದೆ. ಒಟ್ಟು 60 ಕೋಟಿ ರೂ ಮೀನುಗಾರಿಕೆ ಮಹಿಳೆಯರ ಸಾಲಮನ್ನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಗಳೂರು ಗಲಭೆಗೆ ಸಂಬಂಧಿಸಿದ ಸಿಡಿ ಬಿಡುಗಡೆ ವಿಚಾರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಸಂಪೂರ್ಣ ಸಿಡಿ ಯಾಕೇ ಬಿಡುಗಡೆ ಮಾಡಿಲ್ಲ ಎಂದು ಆತಂಕವಾಗುತ್ತಿದೆ. ಅವರು ಸಿಎಂ ಅಗಿದ್ದಾಗ ನಾನು ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಆಡಳಿತ ಹಾಗೂ ವಿಪಕ್ಷದ ಜವಾಬ್ದಾರಿ ಎಂದು ಅವರೇ ಹೇಳಿದ್ದರು ಎಂದರು.
ಕುಮಾರಸ್ವಾಮಿ ಅವರ ಪ್ರಕಾರ ಮುಗ್ಧರು, ಅಮಾಯಕರಲ್ಲಿ ಕಲ್ಲು ಹೊಡೆದೋರು ಬರುತ್ತಾರಾ? ಶಸ್ತ್ರಾಗಾರದ ಬೀಗ ಒಡೆದು, ಪೊಲೀಸರ ಮೇಲೆ ಕಲ್ಲು ತೂರೋರು ಅಮಾಯಕರೇ? ಮಾಜಿ ಸಿಎಂ ಅಗಿ ಆಡಳಿತ ನಡೆಸಿದವರು ಹೀಗೆ ಹೇಳುವುದು ಸರಿಯಲ್ಲ ಎಂದ ಸಚಿವರು, ಅವರ ಗೊಂದಲ ಬಗೆಹರಿಸಲು ನ್ಯಾಯಾಂಗ ತನಿಖೆ ಮಾಡ ಲಾಗುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.