Advertisement

ಗದ್ದೆಗಿಳಿದು ಭತ್ತ ನಾಟಿ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

06:12 PM Jun 15, 2021 | Team Udayavani |

ಬ್ರಹ್ಮಾವರ: ಕೃಷಿ ಇಲಾಖೆ ಸಹಯೋಗದಲ್ಲಿ ಜೂ.15ರಂದು ಕೋಟ ಗಿಳಿಯಾರಿನ ಭರತ್ ಕುಮಾರ್ ಶೆಟ್ಟಿಯವರ ಜಮೀನಿನಲ್ಲಿ ಭತ್ತದ ಬೆಳೆ ಯಾಂತ್ರೀಕೃತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜರಗಿತು.

Advertisement

ಹಿಂದೂ ಧಾರ್ಮಿಕ ದತ್ತಿ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗದ್ದೆಗಿಳಿದು ಭತ್ತದ ನಾಟಿಗೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ಉಡುಪಿ, ದ.ಕ. ಜಿಲ್ಲೆಗಳಲ್ಲಿ ಕೃಷಿ ಆಸಕ್ತಿ ಹೆಚ್ಚುತ್ತಿದೆ ಹಾಗೂ ನಾವೆಲ್ಲ ಜನಪ್ರತಿನಿಧಿಗಳು ಜತೆಯಾಗಿ ಹಡಿಲುಭೂಮಿ ಬೇಸಾಯಕ್ಕೆ ಯೋಜನೆ ರೂಪಿಸಿದ್ದು  ಸಾವಿರಾರು ಎಕ್ರೆ ಹಡಿಲುಭೂಮಿ ಹಸನಾಗುತ್ತಿದೆ ಎಂದರು.

ಕೋಟ ಗ್ರಾ.ಪಂ. ಅಧ್ಯಕ್ಷ ಅಜಿತ್ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ: ಈಗಾಗಲೇ ಸೋಂಕಿಗೆ ಒಳಗಾದವರಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ಅಗತ್ಯವಿಲ್ಲ : ಅಧ್ಯಯನ ವರದಿ

ವಲಯ ಕೃಷಿ ತೋಟಗಾರಿಕೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಮಹಾಲಿಂಗೇಶ್ವರ, ನಂದಿಕೇಶ್ವರ ಸ್ವಸಹಾಯ ಸಂಘ ಗಿಳಿಯಾರು, ಗ್ರಾ.ಪಂ. ಕೋಟ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.

Advertisement

ಉಡುಪಿ ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್, ಕೃಷಿಕೇಂದ್ರದ ಸಹ ಸಂಶೋಧನ ನಿರ್ದೇಶಕ ಡಾ| ಲಕ್ಷ್ಮಣ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ  ಡಾ| ಧನಂಜಯ್, ಸಹಾಯಕ ಪ್ರಾಧ್ಯಪಕ           ಡಾ| ಶಂಕರ್, ಕೋಟ ಕೃಷಿ ಕೇಂದ್ರದ ಕೃಷಿ ಅಧಿಕಾರಿ ಸುಪ್ರಭಾ, ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ಶೆಟ್ಟಿ, ರೈತಧ್ವನಿ ಸಂಘಟನೆಯ ಅಧ್ಯಕ್ಷ ಜಯರಾಮ್ ಶೆಟ್ಟಿ, ಕೋಟ ಗ್ರಾ.ಪಂ. ಸದಸ್ಯೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಸದಸ್ಯ ಸಂತೋಷ್ ಪ್ರಭು, ಪಾಂಡು ಪೂಜಾರಿ, ಯೋಗೇಂದ್ರ ಪೂಜಾರಿ, ತಾ.ಪಂ. ಮಾಜಿ ಸದಸ್ಯ ಭರತ್ ಶೆಟ್ಟಿ, ಮೂಡುಗಿಳಿಯಾರು ಹಾ.ಉ. ಸಂಘದ ಅಧ್ಯಕ್ಷ ರಮೇಶ್ ಹೇರ್ಳೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next