Advertisement

ಬಡವರ ಪರ ಕೆಲಸಕ್ಕೆ ಇನ್ನಷ್ಟು  ಅವಕಾಶ: ಸಚಿವ ಕೋಟ 

09:43 PM Aug 07, 2021 | Team Udayavani |

ಮಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು  ಸಮಾಜಕಲ್ಯಾಣ ಇಲಾಖೆಗಳೆರಡೂ ಮಹತ್ವದ ಖಾತೆಗಳಾಗಿದ್ದು ನನಗೆ ದೊರಕಿರುವುದು ತೃಪ್ತಿ ಹಾಗೂ ಹೆಮ್ಮೆ ತಂದಿದೆ. ಈ ಖಾತೆಗಳ ಮೂಲಕ  ಬಡವರು, ಸಮಾಜದ ಕಟ್ಟಕಡೆಯಲ್ಲಿರುವವರ ಶ್ರೇಯೋಭಿವೃದ್ಧಿಗೆ ಇನ್ನಷ್ಟು ಕೆಲಸ ಮಾಡುವ ಅವಕಾಶ ಲಭಿಸಿದೆ ಎಂದು  ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಸಚಿವರಾದ ಬಳಿಕ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದ ಅವರು ನಗರದ ಸಕೀìಟ್‌ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಿಂದಿನ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವನಾಗಿದ್ದೆ. ಈ ಬಾರಿ ಅದರ ಜತೆಗೆ ಸಮಾಜಕಲ್ಯಾಣ ಖಾತೆಯನ್ನೂ ವಹಿಸಲಾಗಿದೆ. ಹಿಂದುಳಿದ ವರ್ಗಗಳ ಇಲಾಖೆಯಲ್ಲಿರುವ ಹಾಸ್ಟೆಲ್‌ಗ‌ಳು, ನಿಗಮಗಳಿಗೆ ಸಂಬಂಧಪಟ್ಟಂತೆ ಸಮಸ್ಯೆಗಳು, ಅಭಿವೃದ್ಧಿಗೆ ಅವಕಾಶಗಳು, ಸೌಲಭ್ಯಗಳು, ಸಮಾಜಕಲ್ಯಾಣ ಇಲಾಖೆಯಲ್ಲಿರುವ ಹಾಸ್ಟೆಲ್‌ಗ‌ಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಯೋಜನೆಗಳು, ಮೂಲಸೌಕರ್ಯಗಳ ಬಗ್ಗೆ  ಒಂದು ವಾರದೊಳಗೆ ಸಭೆ ನಡೆಸಿ ಸಮಗ್ರ ಮಾಹಿತಿ ಕ್ರೋಡೀಕರಿಸಿಕೊಂಡು ಕಾರ್ಯೋನ್ಮುಖನಾಗುತ್ತೇನೆ ಎಂದರು.

ಉಸ್ತುವಾರಿ ಸಚಿವರ ನಿಯುಕ್ತಿ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸದ್ಯಕ್ಕೆ ಮುಖ್ಯಮಂತ್ರಿಯವರು ನೆರೆ ಹಾಗೂ ಕೊರೊನಾ ಸೋಂಕು  ನಿಯಂತ್ರಣಕ್ಕೆ  ಸಂಬಂಧಪಟ್ಟಂತೆ ಕೊಡಗು ಜಿಲ್ಲೆಗೆ ಉಸ್ತುವಾರಿಯಾಗಿ ನಿಯುಕ್ತಿಗೊಳಿಸಿದ್ದಾರೆ. ಶುಕ್ರವಾರ ಅಲ್ಲಿಗೆ ತೆರಳಿ ಶಾಸಕರು, ಅಧಿಕಾರಿಗಳ ಸಭೆ ನಡೆಸಿದ್ದೇನೆ. ನೆರೆ, ಭೂಕುಸಿತಕ್ಕೆ ಸಂಬಂಧಪಟ್ಟು ಪರಿಹಾರ ಕಾರ್ಯವನ್ನು  ತ್ವರಿತಗೊಳಿಸುವಂತೆ ಅಧಿಕಾರಿಗಳಿ ಸೂಚಿಸಿದ್ದೇನೆ. ಉಸ್ತುವಾರಿ ಸಚಿವರ ನಿಯುಕ್ತಿ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟಿದ್ದು. ದ.ಕ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಂತೃಪ್ತಿ ಇದೆ. ಮುಂದಕ್ಕೆ ಯಾವ ಜಿಲ್ಲೆಯ ಜವಾಬ್ದಾರಿ ನೀಡಿದರೂ ಸ್ವೀಕರಿಸುವೆ ಎಂದರು.  ಬಿಜೆಪಿ ಮುಖಂಡ ಸತೀಶ್‌ ಕುಂಪಲ ಉಪಸ್ಥಿತರಿದ್ದರು.

ಒಂದೇ ಖಾತೆಗೆ ಸೀಮಿತವಾಗಬಾರದು:

Advertisement

ಮುಜರಾಯಿ ಖಾತೆ ದೊರೆಯದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೋಟ ಶ್ರೀನಿವಾಸ ಪೂಜಾರಿ, ಈಗಾಗಲೇ ಎರಡು ಅವಧಿಯಲ್ಲಿ ಮುಜರಾಯಿ ಖಾತೆ ಸಚಿವನಾಗಿದ್ದೆ. ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ. ಆದರೆ ಯಾವುದೇ ಒಂದು ಖಾತೆಗೆ  ಸೀಮಿತವಾಗಬಾರದು. ಮುಜರಾಯಿ ಸಚಿವನಾಗಿ ಸಪ್ತಪದಿ ಯೋಜನೆ ಆರಂಭಿಸಿ 1,000 ಸಾಮೂಹಿಕ ವಿವಾಹಗಳನ್ನು ಮಾಡಲಾಗಿದೆ. ಕೊರೊನಾದಿಂದಾಗಿ ಇದು ಸ್ಥಗಿತಗೊಳ್ಳುವಂತಾಯಿತು. ಖಾತೆಯ ನೂತನ ಸಚಿವೆ ಶಶಿಕಲಾ ಜೊಲ್ಲೆ ಇದನ್ನು ಮುಂದುವ ರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಲಸಿಕೆ ಪಡೆದರೂ  ಪರೀಕ್ಷೆ ಕಡ್ಡಾಯ :

ಯಾರು ಕೊರೊನಾದ ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದಾರೋ ಅಂಥವರಿಗೆ ಪ್ರಯಾಣದ ವೇಳೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರವು ರಾಜ್ಯಗಳಿಗೆ ಸೂಚಿಸಿದ್ದರೂ ಕೇರಳದಿಂದ ಜಿಲ್ಲೆಗೆ ಆಗಮಿಸುವ ಮಂದಿಗೆ ನೆಗೆಟಿವ್‌ ವರದಿ ಕಡ್ಡಾಯ ಮಾಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೋಟ ಅವರು, ಆರೋಗ್ಯ ಇಲಾಖೆಯ ಸಲಹೆಯಂತೆ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ. ಲಸಿಕೆ ಸೋಂಕು ಪ್ರತಿಬಂಧಕ ಶಕ್ತಿಯನ್ನು ಹೆಚ್ಚಿಸಿ ಕೊರೊನಾ ತೀವ್ರತೆಯನ್ನು ಕನಿಷ್ಠಗೊಳಿಸುತ್ತದೆ. ಆದರೆ ಅವರಲ್ಲಿ ಸೋಂಕು ಇದ್ದರೆ ಇತರರಿಗೆ ಹರಡುವ ಸಂಭವ ಇರುವುದರಿಂದ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಇಂತಹ ಕ್ರಮ ಅನಿವಾರ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next