Advertisement
ನಿಟ್ಟೆ ಎಂಆರ್‌ಎಫ್ ಘಟಕ, ಶಬರಿ ಆಶ್ರಮದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಬಳಿಕ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಪತ್ರಕರ್ತರ ಜತೆ ಅವರು ಮಾತನಾಡಿದರು.ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ರಾಷ್ಟ್ರಪ್ರೇಮ, ರಾಷ್ಟ್ರೀಯತೆ ಸೇವಾ ಭಾವನೆಯುಳ್ಳವರು, ಅವರೆಲ್ಲ ರಾಷ್ಟ್ರಕ್ಕಾಗಿ ಬದುಕು ಅರ್ಪಿಸಿದವರು. ಅಂಥ ದೇಶಪ್ರೇಮಿಗಳು ಧರಿಸುವ ಸಮವಸ್ತ್ರದ ಚಡ್ಡಿಗಳನ್ನು ಸುಡುವುದೆಂದರೆ ಸಿದ್ದರಾಮಯ್ಯರ ವಿಕೃತ ಮನಸ್ಸಿನ ಪರಾಕಾಷ್ಠೆಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಎಸ್‌ಡಿಪಿಐ ನಿಷೇಧಿಸುವ ಬಗ್ಗೆ ಸರಕಾರವು ಚಿಂತಿಸುತ್ತಿದೆ. ಕಾಲಾವಕಾಶ ಬೇಕಾಗುತ್ತದೆ. ಕೇಂದ್ರ ಸರಕಾರವು ಅದರ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತದೆ ಎಂದು ಸಚಿವರು ಹೇಳಿದರು.
Related Articles
Advertisement
ಗೋಡ್ಸೆ ಹೆಸರು, ತನಿಖೆ ನಡೆಯುತ್ತಿದೆಬೋಳ ಗ್ರಾ.ಪಂ. ರಸ್ತೆಗೆ ಗೋಡ್ಸೆ ನಾಮಫಲಕ ಹಾಕಿದ ವಿಚಾರದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಘಟನೆಗೆ ಸಂಬಂಧಿಸಿ ಸರಕಾರ, ಗ್ರಾ.ಪಂ. ಕಡೆಯಿಂದ ಹಾಕಿದ್ದಲ್ಲ ಎಂದು ಶಾಸಕರೇ ಸ್ಪಷ್ಟಪಡಿಸಿದ್ದಾರೆ. ನಾಮಪಲಕವನ್ನು ಗ್ರಾ.ಪಂ. ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಿದೆ. ನಮ್ಮ ವ್ಯವಸ್ಥೆ ಜಿಲ್ಲಾಡಳಿತ, ಸರಕಾರದ ಮಟ್ಟಿಗೆ ಅದು ಮುಗಿದ ವಿಚಾರ. ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ ಎಂದರು.