Advertisement

“ಆರ್ಥಿಕ ಸಂಪನ್ಮೂಲವನ್ನು ದೇಗುಲಗಳ ಅಭಿವೃದ್ಧಿಗೇ ಬಳಕೆ’: ಕೋಟ ಶ್ರೀನಿವಾಸ ಪೂಜಾರಿ

09:59 AM Feb 03, 2020 | sudhir |

ಮೈಸೂರು: ಹಿಂದೂ ದೇವಾಲಯಗಳಲ್ಲಿ ಸಂಗ್ರಹವಾಗುವ ಆರ್ಥಿಕ ಸಂಪನ್ಮೂಲವನ್ನು ಹಿಂದೂ ದೇವಾಲಯಗಳ ಅಭಿವೃದ್ಧಿಗೇ ಬಳಕೆ ಮಾಡಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಹೇಗಿತ್ತೋ ಗೊತ್ತಿಲ್ಲ. ನಮ್ಮ ಸರಕಾರದಲ್ಲಿ ಹಿಂದೂ ದೇವಾಲಯಗಳಿಂದ ಬರುವ ಆದಾಯವನ್ನು ಹಿಂದೂ ದೇವಾಲಯಗಳ ಅಭಿವೃದ್ಧಿಗೇ ಬಳಸುತ್ತೇವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಬರುವ ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸಿ ಅದೇ ದೇವಾಲಯಗಳ ಅಭಿವೃದ್ಧಿಗೆ ಮುಂದಾಗಿದ್ದೇವೆ. ಇತರ ಯಾವುದೇ ಧರ್ಮದ ದೇವಾಲಯಗಳ ಅಭಿವೃದ್ಧಿ ಅಥವಾ ಕಾರ್ಯಕ್ರಮಗಳಿಗೆ ಹಿಂದೂ ದೇವಾಲಯಗಳ ಹಣ ಬಳಕೆ ಮಾಡುವುದಿಲ್ಲ ಎಂದರು.

ಅನ್ಯ ಧರ್ಮದವರ ಯಾವುದೇ ಕಾರ್ಯಕ್ರಮಗಳಿಗೆ ಹಿಂದೂ ದೇವಾಲಯದಲ್ಲಿನ ಆದಾಯದ ಒಂದು ಪೈಸೆಯನ್ನೂ ಬಳಸುವುದಿಲ್ಲ. ಅಲ್ಪಸಂಖ್ಯಾಕರ ಪ್ರಾರ್ಥನಾಲಯಗಳ ಅಭಿವೃದ್ಧಿಗೆ ಸರಕಾರದಿಂದ ಹಣ ಬಿಡುಗಡೆಗೊಳಿಸಲಾಗುತ್ತದೆ. ಈ ಬಗ್ಗೆ ಸಾರ್ವಜನಿಕರಿಗೆ ಗೊಂದಲ ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next