Advertisement
ಕೊಪ್ಪಳದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು ಹಿಂದೆ ನಾವೇ ಜೆಡಿಎಸ್ ವಿರುದ್ಧವಾಗಿ ಮಾತನಾಡಿದ್ದೇವೆ ಆದರೆ ಈಗ ಪರಿಸ್ಥಿತಿ ತಿಳಿಯಾಗಿದೆ. ರಾಜಕಾರಣದಲ್ಲಿಯೂ ಕೆಲವು ಸಂದರ್ಭದಲ್ಲಿ ಹೊಂದಾಣಿಕೆಯೂ ಅನಿವಾರ್ಯವಾಗಲಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಸ್ಥಾನದಷ್ಟೇ ನಾವು ಈ ಬಾರಿಯೂ ಗೆಲ್ಲಲಿದ್ದೇವೆ ಎಂದರು.
Related Articles
Advertisement
ರಾಜ್ಯದಲ್ಲಿ 195 ತಾಲೂಕು ಬರಪೀಡಿತವಾಗಿವೆ. ಒಂದು ರೀತಿ ಬರಕ್ಕೆ ಬಿಜೆಪಿಯೇ ಕಾರಣ ಎನ್ನುವಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಬರದ ವಿಚಾರದಲ್ಲಿ ಪರಿಹಾರ ಕಾರ್ಯ ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ವ್ಯವಸ್ಥೆ ಮಾಡಬೇಕು. ಆದರೆ ಸುಮ್ಮನೆ ಸಿಎಂ, ಸಚಿವದ್ವಯರು ಕೇಂದ್ರ ಸರ್ಕಾರದತ್ತ ತೋರಿಸುತ್ತಿದ್ದಾರೆ. ಬರದ ವಿಚಾರದಲ್ಲಿಯೂ ರಾಜಕಾರಣ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಏಷ್ಟಾದರೂ ಡಿಸಿಎಂ ಸ್ಥಾನ ಸೃಷ್ಟಿ ಮಾಡಲಿ. ಬೇಕಿದ್ದರೆ ಜಿಲ್ಲೆಗೊಂದರಂತೆ ಡಿಸಿಎಂ ಸ್ಥಾನ ಸೃಷ್ಟಿ ಮಾಡಲಿ. ಆದರೆ ರೈತರ ಪರಿಸ್ಥಿತಿಯನ್ನು ಮೊದಲು ನೋಡಲಿ. ಬರದ ಪರಿಸ್ಥಿತಿ ತಿಳಿಯಲಿ. ರಾಜ್ಯದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಡಿಸಿಎಂ ಸ್ಥಾನದ ಬಗ್ಗೆ ಕಾಂಗ್ರೆಸ್‌ನ ರಾಯರಡ್ಡಿ, ರಾಜಣ್ಣ ಸೇರಿ ಇತರೆ ನಾಯಕರೇ ಹೇಳುತ್ತಿದ್ದಾರೆ ಎಂದು ಕುಟುಕಿದರು.
ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ವಿಚಾರ, ಸ್ವಲ್ಪ ವಿಳಂಬವಾಗಿರುವುದು ನಿಜ. ಹಾಗಂತ ನಾವು ಸುಮ್ಮನೆ ಕುಳಿತಿಲ್ಲ. ನಮ್ಮ ಪಕ್ಷ ಸೂಕ್ತ ಹಾಗೂ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡುತ್ತದೆ. ನಮ್ಮ ಹಿರಿಯರು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ಒಂದು ಹೆಜ್ಜೆ ಹಿಂದೆ ಸರಿದಾಗ ವೇಗವಾಗಿ ಮುಂದೆ ಹೋಗುತ್ತೇವೆ ಎಂದರ್ಥ ಎಂದರು.
ಇದನ್ನೂ ಓದಿ: Karnataka Congress ; ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು 28 ವೀಕ್ಷಕರ ನೇಮಕ