Advertisement

ಕರಾವಳಿಯಲ್ಲಿ ಪಡಿತರದೊಂದಿಗೆ ಕುಚ್ಚಲಕ್ಕಿ ಖಚಿತ: ಸಚಿವ ಕೋಟ

01:14 AM Apr 26, 2023 | Team Udayavani |

ಕಾಪು: ಕರಾವಳಿ ಜಿಲ್ಲೆಗಳಲ್ಲಿ ಪಡಿತರದ ಜತೆಗೆ ಕುಚ್ಚಲಕ್ಕಿ ನೀಡಲು ಸರಕಾರ ಬದ್ಧವಿದೆ. ಕರಾವಳಿ ಜಿಲ್ಲೆಯ ಜೀವನಾಡಿಯಾಗಿರುವ ಕುಚ್ಚಲಕ್ಕಿ ಪೂರೈಕೆ ವಿಚಾರವನ್ನು ಯಾರೂ ಹಾಸ್ಯಾಸ್ಪದ ವಿಷಯ ವನ್ನಾಗಿಸುವ ಅಗತ್ಯವಿಲ್ಲ. ಕುಚ್ಚಲಕ್ಕಿ ವಿತರಿಸುವ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದ್ದು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ತೊಡಕು ನಿವಾರಿಸಿ ವಿತರಣೆಗೆ ಸರಕಾರ ಬದ್ಧವಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಕುಚ್ಚಲಕ್ಕಿಗೆ ಪೂರಕವಾದ ಭತ್ತದ ತಳಿಗಳಾದ ಎಂಒ4, ಅಭಿಲಾಷಾ, ಜ್ಯೋತಿ, 1001 ಕೇಂದ್ರದ ಬೆಂಬಲ ಬೆಲೆ ವ್ಯಾಪ್ತಿಗೆ ಬಂದಿರಲಿಲ್ಲ. ಈ ತಳಿಗಳ ಪಟ್ಟಿ ಮಾಡಿ ಕೇಂದ್ರ ಸರಕಾರದಿಂದ ಅನುಮೋದನೆ ಪಡೆದು ಹೆಚ್ಚುವರಿಯಾಗಿ 500 ರೂ. ಸಬ್ಸಿಡಿ ನೀಡಿ ಭತ್ತ ಖರೀದಿಗೆ ಮುಂದಾಗಿದ್ದೇವೆ. ಕರಾವಳಿಯ ಮೂರು ಜಿಲ್ಲೆಗಳಲ್ಲೂ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ನಿರೀಕ್ಷೆ ಮಾಡಿದ ಪ್ರಮಾಣದಲ್ಲಿ ಭತ್ತ ಖರೀದಿಗೆ ಬಂದಿರಲಿಲ್ಲ. ಮುಂದೆ ಇದನ್ನು ಸರಿದೂಗಿಸಿಕೊಂಡು ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದರು.

ಶಾಸಕ ಲಾಲಾಜಿ ಆರ್‌. ಮೆಂಡನ್‌, ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next