ಕೋಟ : ಕೊರೊನಾ ಕಾರಣದಿಂದ ಈ ಹಿಂದೆ ಸಪ್ತಪದಿ ಸಾಮೂಹಿಕ ವಿವಾಹ ಸ್ಥಗಿತಗೊಂಡಿತ್ತು. ಆದರೆ ಇದೀಗ ರಾಜ್ಯದ ಎಲ್ಲ ಕಡೆಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗುತ್ತಿದ್ದು ಸರಕಾರ ಹಾಗೂ ಅಧಿಕಾರಿಗಳು, ದೇಗುಲದ ವ್ಯವಸ್ಥಾಪನ ಮಂಡಳಿ ಜತೆಯಾಗಿ ತಮ್ಮ ಮನೆ ಮಕ್ಕಳ ಮದುವೆಯಂತೆ ಈ ಕಾರ್ಯಕ್ರಮ ವನ್ನು ಸಂಭ್ರಮಿಸುತ್ತಿದ್ದಾರೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕೋಟ ಶ್ರೀ ಅಮೃತೇಶ್ವರೀ ದೇಗುಲದಲ್ಲಿ ಬುಧವಾರ ಹಿಂದೂ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ವತಿಯಿಂದ ಆಯೋಜಿಸಿದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇನ್ನು ಪ್ರತಿ ತಿಂಗಳು ಎರಡು-ಮೂರು ಮುಹೂರ್ತಗಳನ್ನು ನಿಗಡಿಪಡಿಸಿ ವಿವಾಹ ನೆರವೇರಿಸಲಾಗುತ್ತದೆ. ಈ ಮೂಲಕ ಸಪ್ತಪದಿ ಮತ್ತೂಮ್ಮೆ ಯಶಸ್ವಿಯಾಗಲಿದೆ ಎಂದರು.
ಈ ಸಂದರ್ಭ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್ ನವದಂಪತಿಗಳಿಗೆ ತಾಳಿ, ಉಡುಗೊರೆಯನ್ನು ನೀಡಿ ಶುಭಾಶಯ ಸಲ್ಲಿಸಿದರು.
ವೇ|ಮೂ| ಮಣೂರು ಮಧುಸೂದನ ಬಾಯರಿ ಅವರ ಪೂರೋಹಿತ್ಯದಲ್ಲಿ ಕಾರ್ಕಡ ಬಡಾಹೋಳಿಯ ಚಂದ್ರ ಮತ್ತು ಮೂಡುಗಿಳಿಯಾರಿನ ಸುಗಂಧಿ, ತಲ್ಲೂರಿನ ನವೀನ್ ಮತ್ತು ಬೈಂದೂರು ಯಡ್ತರೆಯ ನಿರ್ಮಲ, ತಲ್ಲೂರಿನ ನಿತೀನ್ ಹಾಗೂ ಗಂಗೊಳ್ಳಿಯ ಅರ್ಪಿತ, ಕದ್ರಿಕಟ್ಟು ಕೋಟದ ವಿಘ್ನೇಶ್ ಪೂಜಾರಿ ಮತ್ತು ಕಾರ್ಕಡದ ಅನುಸೂಯ, ಅಸೋಡಿನ ಸತೀಶ್ ಹಾಗೂ ಚಿಕ್ಕಮಗಳೂರಿನ ವಿನುತಾ, ಮಣೂರು ಪಡುಕರೆಯ ಲೋಕೇಶ್ ಮತ್ತು ಕೋಡಿ ಕನ್ಯಾಣದ ಯಶೋದಾ, ಜಡ್ಕಲ್‌ನ ಪ್ರಶಂತ್ ಮತ್ತು ಮೂಡುಮುಂದದ ದಿವ್ಯಾ, ಕುಂದಾಪುರದ ದಿನೇಶ್ ಮತ್ತು ಬೆಳಗಾವಿಯ ಸೀಮಾ ಲಕ್ಷ್ಮಣ್, ಬೀಜಾಡಿಯ ಪ್ರಕಾಶ್ ಮತ್ತು ಮಣೂರಿನ ಭಾಗ್ಯಾ, ಹಾಡಿಕೆರೆಯ ಪ್ರಸನ್ನ ಮತ್ತು ಉಪ್ಪುಂದದ ಸುಮಿತ್ರಾ ಸತಿಪತಿಗಳಾಗಿ ಹಸೆಮಣೆ ಏರಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸುಬ್ರಾಯ ಜೋಗಿ, ಜ್ಯೋತಿ ಬಿ.ಶೆಟ್ಟಿ, ಸುಶೀಲಾ ಸೋಮಶೇಖರ್, ಸುಂದರ ಕೆ., ರಾಮದೇವ ಐತಾಳ, ಸತೀಶ್ ಹೆಗ್ಡೆ, ಸುಬ್ರಾಯ ಆಚಾರ್ಯ, ಚಂದ್ರ ಪೂಜಾರಿ, ಬ್ರಹ್ಮಾವರ ತಾ.ಪಂ. ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ಸದಸ್ಯೆ ಲಲಿತಾ ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇಗುಲದ ವ್ಯವಸ್ಥಾಪನ ಸಮಿತಿಯ ಸದಸ್ಯ ಕೆ.ಪಿ ಶೇಖರ್, ಕೋಟ ಗ್ರಾ.ಪಂ. ಸದಸ್ಯರಾದ ಭುಜಂಗ ಗುರಿಕಾರ, ಸಂತೋಷ ಪ್ರಭು, ದೇಗುಲದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಪತ್ನಿ ಶಾಂತಾ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಶಾಲಿನಿ ಸುರೇಶ್ ಮತ್ತು ಸ್ಥಳೀಯರಾದ ದಿನೇಶ್ ಗಾಣಿಗ, ದಿವ್ಯಲಕ್ಷ್ಮೀ ಕುಂದರ್, ವೈಷ್ಣವಿ ಕುಂದರ್ ಮೊದ ಲಾದವರು ಉಪಸ್ಥಿತರಿದ್ದರು.