Advertisement

ಕನಕಪುರದ ಬಂಡೆ ಕಲ್ಲು, ರಾಮನಗರದ ಶಕ್ತಿ ಕಲ್ಲು ಪುಡಿ ಪುಡಿ : ಕೋಟ ಶ್ರೀನಿವಾಸ ಪೂಜಾರಿ

06:51 PM Nov 10, 2020 | sudhir |

ಕಾಪು: ಶಿರಾ ಮತ್ತು ಆರ್.ಆರ್. ನಗರದಲ್ಲಿ ಬಿಜೆಪಿ ಜಯಬೇರಿ ಬಾರಿಸುವತ್ತ ಮುಗ್ಗುಗುತ್ತಿದ್ದು, ಇದು ಪಕ್ಷದ ಸಾಂಘಿಕ ಬಲಕ್ಕೆ ಸಿಕ್ಕಿದ ದೊಡ್ಡ ಜಯವಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಕಟಪಾಡಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯ ಫಲಿತಾಂಶ ಕನಕಪುರದ ಬಂಡೆ ಮತ್ತು ರಾಮ ನಗರದ ಶಕ್ತಿಯನ್ನು ಪುಡಿ ಮಾಡಿದೆ. ಅವರ ಅಹಂಕಾರಕ್ಕೆ ಮತದಾರರೇ ಸೂಕ್ತ ಉತ್ತರ ನೀಡಿದ್ದಾರೆ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದ ನಾಯಕತ್ವದಲ್ಲಿ ಎಲ್ಲರೂ ಒಗ್ಗೂಡಿ ಹೋರಾಡಿದ ಪರಿಣಾಮ ಜಯ ದೊರಕಿದೆ ಎಂದರು.

ಪಕ್ಷದ ರಾಜ್ಯಾಧ್ಯಕ್ಷರ ಬಗ್ಗೆ ಕಾಡಿನಲ್ಲಿರಬೇಕಾದವರು ಎಂದು ಅವಹೇಳನಕಾರಿಯಾಗಿ ಮಾತನಾಡಿ ಅವಮಾನ ಮಾಡಲೆತ್ನಿಸಿದ ಸಿದ್ದರಾಮಯ್ಯ ಅವರು ಮೊದಲೇ ಕಾಡಿಗೆ ಹೋಗುವ ಸಿದ್ದತೆಯಲ್ಲಿ್ದಾರೆ. ಅವರ ಜೊತೆಗೆ ಬಂಡೆ ಕೂಡಾ ನಾಡು ಬಿಟ್ಟು ಕಾಡಿಗೆ ಹೋಗುವಂತಾಗಿದೆ ಎಂದರು.

ಇದನ್ನೂ ಓದಿ:ಗುತ್ತಿಗೆದಾರರ ಲೈಸೆನ್ಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಂಜಿನಿಯರ್ ಎಸಿಬಿ ಬಲೆಗೆ!

Advertisement

ಉಡುಪು ಜಿ. ಪಂ. ಸದಸ್ಯರಾದ ಶಿಲ್ಪಾ‌ ಜಿ. ಸುವರ್ಣ, ಗೀತಾಂಜಲಿ ಎಂ. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next