Advertisement

Udupi: ನಿಗಮಕ್ಕೆ ಅನುದಾನ ಘೋಷಿಸಿ: ಶ್ರೀನಿವಾಸ ಪೂಜಾರಿ ಆಗ್ರಹ

01:09 PM Sep 01, 2023 | Team Udayavani |

ಉಡುಪಿ: ಬ್ರಹ್ಮಶ್ರೀ ನಾರಾಯಣಗುರು ನಿಗಮಕ್ಕೆ ಅನುದಾನ ಘೋಷಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಸರಕಾರ ಶಕ್ತಿ ತುಂಬಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಉಡುಪಿ ಬಿಲ್ಲವರ ಸೇವಾ ಸಂಘದ ಆಶ್ರಯದಲ್ಲಿ ಗುರುವಾರ ಬನ್ನಂಜೆ ಶ್ರೀ ನಾರಾಯಣಗುರು ಆಡಿಟೋರಿಯಂನಲ್ಲಿ ಜರಗಿದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಸರಕಾರಗಳು ನಾರಾಯಣಗುರುಗಳ ತಣ್ತೀಗಳಿಗೆ ಒತ್ತು ನೀಡಿ ಕೆಲಸ ಮಾಡಿವೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ನಿಗಮ ಘೋಷಿಸಿದ್ದು, ಅನಂತರ ಬಂದ ಸರಕಾರ ಅನುದಾನ ಮೀಸಲಿಡುವ ಕಾರ್ಯ ಮಾಡಬೇಕಿದೆ ಎಂದರು.

ಸಮಾನ ನ್ಯಾಯದ ಕಲ್ಪನೆ ಇಲ್ಲದ ಸಂದರ್ಭ ಎಲ್ಲರೂ ಒಂದಾಗಿ ಬದುಕಬೇಕು ಎಂದು ಅಂದಿನ ಸಮಾಜದಲ್ಲಿ ವೈಚಾರಿಕತೆಯನ್ನು ಮೂಡಿಸಿ ಸಮಾನತೆಯ ಕ್ರಾಂತಿಯನ್ನು ನಾರಾಯಣಗುರುಗಳು ಹುಟ್ಟು ಹಾಕಿದ್ದರು. ಗುರುಗಳು ಮನುಕುಲದ ಮೌಲ್ಯಗಳನ್ನು ತಿಳಿಸಿಕೊಟ್ಟವರು. ಅವರ ಹಾದಿಯಲ್ಲಿ ಈ ಸಮಾಜ ಸಾಗಬೇಕಿದೆ ಎಂದರು.

ಮಂಗಳೂರು ವಿ.ವಿ. ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಡಾ| ಗಣೇಶ್‌ ಅಮೀನ್‌ ಸಂಕಮಾರ್‌ ಉಪನ್ಯಾಸ ನೀಡಿ, ನಾರಾಯಣ ಗುರುಗಳು ಒಂದು ಸಮುದಾಯದ ಗುರುಗಳಲ್ಲ, ಅವರು ಅದ್ಭುತ ದಾರ್ಶನಿಕ, ವಿಶ್ವಗುರು ಎಂದು ಬಣ್ಣಿಸಿದರು. ಸಮಾಜದಲ್ಲಿ ಅಸ್ಪೃಶ್ಯತೆ, ಅಸಮಾನತೆಯನ್ನು ದೂರವಾಗಿಸಲು ತಮ್ಮನ್ನು ಸಮಾಜಕ್ಕೆ ಸಮರ್ಪಿಸಿಕೊಂಡವರು. ನಮ್ಮ ಜೀವನದಲ್ಲಿ ಅವರನ್ನು ಅನುಸರಿಸಬೇಕು ಎಂದರು.

Advertisement

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಬಿಲ್ಲವರ ಸೇವಾ ಸಂಘ ಉಡುಪಿ ಅಧ್ಯಕ್ಷ ಬಿ. ಮಾಧವ ಪೂಜಾರಿ ಬನ್ನಂಜೆ, ನಗರಸಭೆ ಸದಸ್ಯರಾದ ಸವಿತಾ ಹರೀಶ್‌ರಾಮ್‌, ವಿಜಯ ಕೊಡವೂರು, ಸಂತೋಷ್‌ ಜತ್ತನ್ನ, ಎಡ್ಲಿನ್‌ ಕರ್ಕಡ, ಗಿರೀಶ್‌ ಅಂಚನ್‌, ಡಿಡಿಪಿಐ ಗಣಪತಿ, ನಗರಸಭೆ ಮಾಜಿ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಕಿರಣ್‌ ಕುಮಾರ್‌ ಬೈಲೂರು ಉಪಸ್ಥಿತರಿದ್ದರು.

ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ದಯಾನಂದ್‌ ಉಗ್ಗೆಲ್‌ಬೆಟ್ಟು ವಂದಿಸಿ, ನಿರೂಪಿಸಿದರು.

ನಿಗಮಕ್ಕೆ ಗರಿಷ್ಠ ಅನುದಾನ
ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ಗುರುಗಳ ವಿಚಾರ, ಚಿಂತನೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದ್ದು, ಗುರುಗಳ ಹಾದಿಯಲ್ಲಿ ಎಲ್ಲರೂ ಒಂದಾಗಿ ಸಾಗಬೇಕಿದೆ. ನಾರಾಯಣಗುರುಗಳ ನಿಗಮಕ್ಕೆ ಗರಿಷ್ಠ ಅನುದಾನ ಮೀಸಲಿಡುವ ಬಗ್ಗೆ ಸರಕಾರದ ಬಳಿ ಚರ್ಚಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next