Advertisement

ಈಡಿಗ, ಬಿಲ್ಲವ ಅಭಿವೃದ್ಧಿ ನಿಗಮ ಶೀಘ್ರ ಘೋಷಣೆ: ಸಚಿವ ಕೋಟ

08:44 PM Dec 11, 2022 | Team Udayavani |

ಕೋಟ : ಬಿಲ್ಲವ, ಈಡಿಗ ಸಮಾಜದ ಅಭಿವೃದ್ಧಿಯ ನಿಟ್ಟಿನಲ್ಲಿ ಈಗಾಗಲೇ ನಾರಾಯಣಗುರು ಅಭಿವೃದ್ಧಿ ಕೋಶ ಸ್ಥಾಪಿಸಲಾಗಿದೆ. ಆದರೆ ಹೆಚ್ಚಿನ ಅನುದಾನ ಹಾಗೂ ಸಮಾಜ‌ ಬಾಂಧವರಿಗೆ ನಿಗಮದ ನಿರ್ದೇಶಕರಾಗಿ ಪ್ರಾತಿನಿಧ್ಯ ಸಿಗುವಂತಾಗಲು ನಾರಾಯಣಗುರು ಬಿಲ್ಲವ ನಿಗಮ‌ ಸ್ಥಾಪಿಸಬೇಕು ಎನ್ನುವ ಬೇಡಿಕೆ ಇದೆ. ನಾನು ಹಾಗೂ‌‌ ಸುನೀಲ್ ಕುಮಾರ್ ಸೇರಿದಂತೆ ಬಿಜೆಪಿ ಪ್ರತಿನಿಧಿಸುವ ಬಿಲ್ಲವ ಸಮಾಜದ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಬಿಲ್ಲವ ಅಭಿವೃದ್ಧಿ ನಿಗಮದ ಅಗತ್ಯತೆ ಕುರಿತು ಮನವರಿಕೆ ಮಾಡಿದ್ದು ಮುಖ್ಯಮಂತ್ರಿಗಳು ಶೀಘ್ರದಲ್ಲಿ ಬಿಲ್ಲವ ಅಭಿವೃದ್ಧಿ ‌ನಿಗಮ‌ವನ್ನು‌ ಘೋಷಣೆ ಮಾಡಲಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಅವರು‌ ರವಿವಾರ ಸಾಸ್ತಾನದಲ್ಲಿ ಜರಗಿದ ಬಿಲ್ಲವ ಸಮಾವೇಶದಲ್ಲಿ ಈ‌ ಕುರಿತು ಮಾಹಿತಿ ನೀಡಿದರು.

ನಾರಾಯಣ ಗುರುಗಳ ಹೆಸರಲ್ಲಿ ವಸತಿ ಶಾಲೆ, ಕೋಟಿ ಚೆನ್ನಯ್ಯ ಹೆಸರಲ್ಲಿ ಸೈನಿಕ ತರಬೇತಿ ಶಾಲೆ ಸ್ಥಾಪಿಸುವ ಮೂಲಕ ಬಿಲ್ಲವ ಸಮಾಜಕ್ಕೆ ಸಾಕಷ್ಟು ಗೌರವವನ್ನು ನೀಡಲಾಗಿದೆ. ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಅವಧಿಗೆ ಮೊದಲೇ ಚುನಾವಣೆ ನಡೆಯಲ್ಲ: ಸಚಿವ ಅಶ್ವತ್ಥ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next