ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಅರ್ಜಿಗಳನ್ನು ತಿರಸ್ಕರಿಸುವಂತೆ ಸುತ್ತೋಲೆ ಹೊರಡಿಸುವ ಮೂಲಕ ಬಡವರ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.
Advertisement
ಡೀಮ್ಡ್ ಅರಣ್ಯದಿಂದ ಹೊರಗಿರುವ ಪ್ರದೇಶಗಳ ಬಗ್ಗೆ ಜಿಲ್ಲಾಧಿಕಾರಿಗಳು ಸರಕಾರಕ್ಕೆ ವರದಿ ಸಲ್ಲಿಸಿದ್ದರೂ ಈವರೆಗೆ ಇದನ್ನು ಅನುಮೋದಿಸಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 34,850 ಹೆಕ್ಟೇರ್, ಉಡುಪಿಯಲ್ಲಿ 34,000 ಹೆಕ್ಟೇರ್, ಶಿವಮೊಗ್ಗದಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶ ಡೀಮ್ಡ್ ಅರಣ್ಯ ಗುಣಲಕ್ಷಣಗಳನ್ನು ಹೊಂದಿಲ್ಲ ಎಂದು ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿದ್ದರು. ಆದರೆ ಸರಕಾರ ಇದರ ಬಗ್ಗೆ ಪೂರಕ ಕ್ರಮಗಳನ್ನು ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದರಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಮಂದಿ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದರು.ಕೇಂದ್ರ ಸರಕಾರದ ನಗರ ವಸತಿ ಯೋಜನೆ ಅನುಷ್ಠಾನದಲ್ಲೂ ರಾಜ್ಯ ಸರಕಾರ ನಿರ್ಲಕ್ಷ ವಹಿಸಿದೆ. ಮಂಗಳೂರು ನಗರದಲ್ಲಿ 2016-17 ರಲ್ಲಿ 1,285 ಗುರಿಯಲ್ಲಿ ಇದರಲ್ಲಿ ಕೇವಲ 273 ಮನೆಗಳನ್ನು ಮಂಜೂರು ಮಾಡಿದ್ದು 173 ಮನೆಗಳು ಮಾತ್ರ ಪೂರ್ಣಗೊಂಡಿವೆ. 2017-18ನೇ ಸಾಲಿನಲ್ಲಿ 1,407 ಗುರಿಯಲ್ಲಿ 573 ಮನೆಗಳನ್ನು ಮಾತ್ರ ಮಂಜೂರು ಮಾಡಿದೆ ಎಂದವರು ವಿವರಿಸಿದರು.
ರಾಜ್ಯದಲ್ಲಿ ಮಂಗಳೂರು ಸಹಿತ 7 ನಗರಗಳಿಗೆ ಕೇಂದ್ರ ಸರ ಕಾರದ ಸ್ಮಾರ್ಟ್‌ಸಿಟಿ ಯೋಜನೆ ಮಂಜೂ ರಾಗಿದ್ದು ಈವರೆಗೆ ಇದರಲ್ಲಿ ಹೇಳಿಕೊಳ್ಳುವಂತಹ ಪ್ರಗತಿ ಆಗಿಲ್ಲ. ಮಂಗಳೂರು ನಗರಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲು 220 ಕೋ.ರೂ. ಬಿಡುಗಡೆಯಾಗಿದ್ದರೂ ಇದರಲ್ಲಿ ಈವರೆಗೆ ಯಾವುದೇ ಯೋಜನೆಗಳಿಗೆ ಟೆಂಡರ್ ಆಗಿಲ್ಲ. ಸ್ಮಾರ್ಟ್‌ಸಿಟಿ ಅನುಷ್ಠಾನಕ್ಕೆ ಪೂರ್ಣ ಕಾಲಿಕ ವ್ಯವಸ್ಥಾಪಕ ನಿರ್ದೇಶಕರ ನೇಮಕವಾಗಿಲ್ಲ ಎಂದು ಹೇಳಿದರು.