ಹಳೆಯ ಕಟ್ಟಡ
ಕೋಟ ಪೊಲೀಸ್ ಠಾಣೆ ಮೊದಲು ಮಣೂರಿನಲ್ಲಿ ಲಕ್ಷ್ಮೀನಾರಾಯಣ ಹೊಳ್ಳ ಎನ್ನುವವರ ಖಾಸಗಿ ಜಾಗದಲ್ಲಿತ್ತು. ಅನಂತರ ಹೊಳ್ಳರು ಮಣೂರಿನ ಜಾಗವನ್ನು ವಾಪಸು ಪಡೆಯಲು ಹಳೆ ಮನೆಯ ಸಾಮಗ್ರಿ ಬಳಸಿ ಕೋಟ ಸರಕಾರಿ ಜಾಗದಲ್ಲಿ ಠಾಣೆ ನಿರ್ಮಿಸಿದರು. 1996ರಲ್ಲಿ ಠಾಣೆಯನ್ನು ಈ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಆದರೆ ಈ ಕಟ್ಟಡ ಇದೀಗ ಶಿಥಿಲಗೊಂಡಿದ್ದು ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ.
ಮಳೆಗಾಲದಲ್ಲಿ ಸೋರುತಿಹುದು…
ಠಾಣೆ ಅತ್ಯಂತ ಕಿರಿದಾಗಿದ್ದು ಸಿಬಂದಿಗೆ ಕಾರ್ಯ ನಿರ್ವಹಿಸಲು ಇಕ್ಕಟ್ಟಾಗಿದೆ. ಹತ್ತಾರು ಮಂದಿ ಒಟ್ಟಿಗೆ ಆಗಮಿಸಿದರೆ ನಿಲ್ಲಲೂ ಜಾಗವಿಲ್ಲ. ಹೊರಗಿನ ಜಗಲಿಯಲ್ಲಿ ನಾಲ್ಕೈದು ಮಂದಿ ಮಾತ್ರ ಕುಳಿತುಕೊಳ್ಳ ಬಹುದು. ಚುನಾವಣೆ ಮುಂತಾದ ಸಂದರ್ಭ ಸಾರ್ವಜನಿಕರಿಂದ ಪಡೆಯುವ ಶಸ್ತಾÅಸ್ತ್ರಗಳನ್ನು ಇಡಲು ಸರಿಯಾದ ವ್ಯವಸ್ಥೆ ಇಲ್ಲ. ಮಹಿಳಾ ಸಿಬಂದಿಗೆ ಪ್ರತ್ಯೇಕ ಶೌಚಾಲಯವಿಲ್ಲ. ಜೋರಾಗಿ ಮಳೆ ಬಂದರೆ ಠಾಣೆಯ ಹಂಚಿನ ಮಾಡು ಸೋರಿ ಕಡತಗಳು, ಕಂಪ್ಯೂಟರ್ ಒದ್ದೆಯಾಗುತ್ತದೆ ಮತ್ತು ಠಾಣೆಯ ಒಳಗೆ ನೀರು ನಿಲ್ಲುತ್ತದೆ. ಪ್ರತಿ ವರ್ಷ ಮಳೆಗಾಲಕ್ಕೆ ಮುನ್ನ ಮಾಡಿಗೆ ಟಾರ್ಪಾಲಿನ್ ಹೊದೆಸುವ ಕಾರ್ಯವನ್ನು ಪೊಲೀಸರು ಮಾಡುತ್ತಾರೆ.
Advertisement
ವಸತಿಗೃಹದಲ್ಲಿ ಅಸಹನೀಯ ಬದುಕುಪೊಲೀಸರ ವಸತಿಗೃಹದಲ್ಲಿ ಪರಿಸ್ಥಿತಿ ಸೋಚನೀಯವಾಗಿದೆ. ಹಂಚು ಒಡೆದು ಮಳೆಯ ನೀರು ಗೋಡೆಗೆ ಬಿದ್ದು ಪಾಚಿ ಕಟ್ಟಿದೆ. ಕೋಣೆಗಳು ತುಂಬ ಇಕ್ಕಟ್ಟಾಗಿವೆ. ರಾತ್ರಿ ಜೋರಾಗಿ ಮಳೆ ಬಂದರೆ ನಿದ್ದೆ ಬಿಟ್ಟು ನೀರು ಹೊರಗಡೆ ಚೆಲ್ಲುತ್ತಿರಬೇಕು. ಶೌಚಾಲಯ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಹೀಗಾಗಿ ಹೆಚ್ಚಿನ ಸಿಬಂದಿ ವಸತಿಗೃಹವನ್ನು ಉಪಯೋಗಿಸುತ್ತಿಲ್ಲ. ಹೊಸ ವಸತಿಗೃಹದಲ್ಲಿ ಕೇವಲ 6 ಕುಟುಂಬಕ್ಕೆ ಮಾತ್ರ ಅವಕಾಶವಿದ್ದು, ಸುಮಾರು 20ಕ್ಕೂ ಹೆಚ್ಚು ಸಿಬಂದಿಗೆ ಸರಿಯಾದ ವಸತಿ ಗೃಹದ ಸೌಲಭ್ಯವಿಲ್ಲ.
ಪೊಲೀಸ್ ಹೌಸಿಂಗ್ ಬೋರ್ಡ್ ಜವಾಬ್ದಾರಿ
ಪೊಲೀಸ್ ಇಲಾಖೆಗೆ ಸಂಬಂಧಿಸಿದ ಠಾಣೆ, ವಸತಿಗೃಹ ಇನ್ನಿತರ ಕಟ್ಟಡಗಳ ರಚನೆ, ನಿರ್ವಹಣೆ ಪೊಲೀಸ್ ಹೌಸಿಂಗ್ ಬೋರ್ಡ್ ಮೂಲಕ ನಡೆಯುತ್ತದೆ. ಪೊಲೀಸ್ ಉನ್ನತ ಅಧಿಕಾರಿಗಳು ಈ ಸಂಸ್ಥೆಗೆ ಸಮಸ್ಯೆ ಕುರಿತಷ್ಟೇ ವಿವರಿಸಬಹುದು. ಹೀಗಾಗಿ ಇಲ್ಲಿನ ಪೊಲೀಸ್ ಸಿಬಂದಿ ಉನ್ನತ ಅಧಿಕಾರಿಗಳಲ್ಲಿ ಸಮಸ್ಯೆ ಹೇಳಿಕೊಂಡರು ಏನೂ ಮಾಡಲಾಗದ ಪರಿಸ್ಥಿತಿ ಇದೆ.
ಠಾಣೆಗೆ ಹೊಸ ಕಟ್ಟಡ ನಿರ್ಮಿಸುವಂತೆ ಸ್ಥಳೀಯರು ಸಾಕಷ್ಟು ಹೋರಾಟ ನಡೆಸಿದ್ದಾರೆ. 07-02-2015ರಲ್ಲಿ ಬೆಂಗಳೂರಿನ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಂತೆ ಪೊಲೀಸ್ ಹೌಸಿಂಗ್ ಬೋರ್ಡ್ ಮೂಲಕ ಠಾಣೆಯ ಕಟ್ಟಡ ಹಾಗೂ ವಸತಿಗೃಹ ನಿರ್ಮಾಣಕ್ಕೆ ಸುಮಾರು 75 ಲ.ರೂ. ಅಂದಾಜು ವೆಚ್ಚದಲ್ಲಿ ನೀಲಿನಕಾಶೆ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ರವಾನಿಸಲಾಗಿತ್ತು ಹಾಗೂ ಅನಂತರ ಪೊಲೀಸ್ ಮಹಾ ನಿರ್ದೇಶನಾಲಯ 12-05-2017ರಲ್ಲಿ ರಾಜ್ಯದಲ್ಲಿ ಒಟ್ಟು 16 ಪೊಲೀಸ್ ಠಾಣೆ, 1 ವೃತ್ತ ನಿರೀಕ್ಷಕರ ಕಚೇರಿ, 1 ಉಪವಿಭಾಗ ಕಚೇರಿ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಇದರಲ್ಲಿ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆ ಹಾಗೂ ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ಕೂಡ ಒಳಗೊಂಡಿತ್ತು. ಈಗ ಒಂದು ವರ್ಷ ಕಳೆದರೂ ಕಾಮಗಾರಿ ಸುಳಿವೇ ಇಲ್ಲದಾಗಿದೆ. ಶೀಘ್ರ ಕ್ರಮ ಕೈಗೊಳ್ಳಿ
ಕೋಟ ಠಾಣೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ವಸತಿಗೃಹದಲ್ಲಿ ಯಾರೂ ಕೂಡ ವಾಸವಿರಲು ಸಾಧ್ಯವಿಲ್ಲ. 2016ರಲ್ಲಿ ಪೊಲೀಸ್ ಹೌಸಿಂಗ್ ಬೋರ್ಡ್ 75ಲಕ್ಷದ ನೀಲಿನಕಾಶೆ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ರವಾನಿಸಿತ್ತು ಹಾಗೂ 2017ರಲ್ಲಿ ಕಾಮಗಾರಿಗೆ ಅನುಮೋದನೆ ದೊರಕಿತ್ತು. ಆದರೆ ಇದುವರೆಗೆ ಮುಂದಿನ ಪ್ರಕ್ರಿಯೆ ನಡೆದಿಲ್ಲ. ಆದಷ್ಟು ಶೀಘ್ರ ಈ ಕುರಿತು ಕ್ರಮ ಕೈಗೊಳ್ಳಬೇಕು.
– ಕೋಟ ಗಿರೀಶ್ ನಾಯಕ್ (ಕೋಗಿನಾ) ಸಾಮಾಜಿಕ ಹೋರಾಟಗಾರರು
Related Articles
Advertisement