Advertisement
ಕೋಟ: ಕೋಟದ ಪ್ರತಿಷ್ಠಿತ ಭೂ ಮಾಲಿಕ ಕುಟುಂಬ ಬಲರಾಮ ಹಂದೆಯವರ ಮನೆಯ ಐಗಳ ಮಠದಲ್ಲಿ ಮರಳಿನ ಮೇಲೆ “ಓಂ ಗಣಾಧಿಪತೆಯೇ ನಮಃ’ ಎಂದು ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದ ಶಿಕ್ಷಣ ಸಂಸ್ಥೆ ಕ್ರಮೇಣ ಕೋಟ ಬೋರ್ಡ್ ಶಾಲೆಯಾಗಿ ಪರಿವರ್ತನೆಯಾಗಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಡೆದಾಡುವ ವಿಶ್ವಕೋಶ ಡಾ|ಕೋಟ ಶಿವರಾಮ ಕಾರಂತರು 5ನೇ ತರಗತಿ ತನಕ ಇಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದರು. ಐಗಳ ಮಠ ಯಾವಾಗ ಆರಂಭವಾಯಿತು ಎನ್ನುವ ಸ್ಪಷ್ಟ ದಾಖಲೆ ಇಲ್ಲ. ಆದರೆ ಬೋರ್ಡ್ ಶಾಲೆಯಾಗಿ 1904ರಲ್ಲಿ ಬದಲಾಗಿತ್ತು.
ಐಗಳ ಮಠದ ಅನಂತರ ಕೋಟದ ಪ್ರಸಿದ್ಧ ಹಿರೇ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶಾಲೆ ಸ್ಥಳಾಂತರಗೊಂಡಿತ್ತು. ಆಗ ದೇಗುಲದ ಹೆಬ್ಟಾಗಿಲು, ಯಾಗಶಾಲೆಯ ನೆಲೆದ ಮೇಲೆ ಮಕ್ಕಳಿಗೆ ತರಗತಿ ನಡೆಯುತಿತ್ತು. ಅನಂತರ ಹಂದೆಯವರು ಕೊಡಮಾಡಿದ ಜಾಗಕ್ಕೆ (ಈಗಿನ ಪೆಟ್ರೋಲ್ ಬಂಕ್ ಬಳಿ) ಸ್ವಂತ ಕಟ್ಟಡಕ್ಕೆ ಶಾಲೆ ಸ್ಥಳಾಂತರಗೊಂಡಿತ್ತು.
Related Articles
Advertisement
ಸ್ಮಾರ್ಟ್ ಕ್ಲಾಸ್, ವಾಹನ ಸೌಲಭ್ಯ ಮುಂತಾದ ವ್ಯವಸ್ಥೆ ಇದೆ. ಇಲ್ಲಿನ 2015-16ನೇ ಸಾಲಿನ ವಿದ್ಯಾರ್ಥಿ ಆಕಾಶ್ ರಾಷ್ಟ್ರಮಟ್ಟದ ಇನ್ಸ್‌ಸ್ಪಾರ್ಡ್ ಪ್ರಶಸ್ತಿ ಭಾಜನನಾಗಿದ್ದ ಮತ್ತು ಸುಮುಖ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ತಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದ. ಹಿಂದಿನ ಮುಖ್ಯ ಶಿಕ್ಷಕಿ ಸಂಪಾ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಾತ್ರರಾಗಿದ್ದರು.
ಕಾರಂತರು, ಕೋಟ ವೈಕುಂಠ ಹಳೆವಿದ್ಯಾರ್ಥಿಗಳುಡಾ| ಕೆ.ಶಿವರಾಮ ಕಾರಂತ ಹಾಗೂ ಯಕ್ಷಗಾನ ಕ್ಷೇತದ ದಿಗ್ಗಜ ಕೋಟ ವೈಕುಂಠ, ಮದ್ರಾಸ್ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಹಂದೆಯವರು, ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಶ್ರೀಧರ ಹಂದೆ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿ, ಸಾಹಿತಿ ಬೆಳಗೋಡು ರಮೇಶ ಭಟ್ ಮತ್ತು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಹಲವಾರು ಮಂದಿ ವೈದ್ಯರು,ಸೈನಿಕರು, ಉದ್ಯಮಿಗಳು ಇಲ್ಲಿನ ಹಳೆ ವಿದ್ಯಾರ್ಥಿಗಳು. ಕಾರಂತರ ಜೀವನ ಚರಿತ್ರೆಯಲ್ಲಿ ಶಾಲೆ
ಡಾ| ಶಿವರಾಮ ಕಾರಂತರು ತನ್ನ ಜೀವನ ಚರಿತ್ರೆಯಲ್ಲಿ ಶಾಲೆಯ ಬಗ್ಗೆ ಈ ರೀತಿ ಉಲ್ಲೇಖೀಸಿದ್ದಾರೆ. ನಮ್ಮ ಮನೆ ಸಮೀಪದ ಶಿವಾಲಯದ ಯಾಗ ಶಾಲೆಯಲ್ಲಿ ನೆಲೆದ ಮೇಲೆ ಕುಳಿತು ನಾನು ಓದಿದ್ದೆ. ಶಿಕ್ಷಕ ರಂಗ ರಾಯರು ನನ್ನ ಮೊದಲ ಗುರು ಹಾಗೂ ಕಶಪ್ಪಯ್ಯ ನನ್ನ ಮೆಚ್ಚಿನ ಗುರುಗಳಾಗಿದ್ದರು. ಎರಡು ವರ್ಷ ಕಲಿತ ಅನಂತರ ಶಾಲೆ ದೇಗುಲದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿತ್ತು. ಇಲ್ಲಿ 5ನೇ ತರಗತಿ ಮುಗಿಯುವುದರೊಳಗೆ ನಾನು ಪತ್ರ ಬರೆಯಲು, ಡಿಮಾಂಡ್ ನೋಟು, ಅಡವು ದಸ್ತಾವೇಜು ಬರಹ, ಕ್ರಯಚೀಟಿ ಮತ್ತು ಮೋಡಿ ಬರಹ ಬರೆಯಲು ಕಲಿತಿದ್ದೆ ಎಂದು ಉಲ್ಲೇಖೀಸಿದ್ದಾರೆ. ಕಾರಂತರು ಕಲಿತ ಶಾಲೆಯಲ್ಲಿ ಸೇವೆ ಸಲ್ಲಿಸಲು ಹೆಮ್ಮೆ ಇದೆ. ಶಾಲೆಯ ಪ್ರಸ್ತುತ ಅಭಿವೃದ್ಧಿಗೆ ಹಳೆವಿದ್ಯಾರ್ಥಿಗಳು, ಊರಿನವರು, ಶಾಲಾಭಿವೃದ್ಧಿ ಸಮಿತಿ ಪಾತ್ರ ಮಹತ್ವದ್ದು. ನಮ್ಮಲ್ಲಿ ಶಿಕ್ಷಕರು-ಮುಖ್ಯಶಿಕ್ಷಕರು ಭೇದವಿಲ್ಲದೆ ಒಟ್ಟಾಗಿ ಒಂದಾಗಿ ದುಡಿಯುತ್ತೇವೆ.
-ಪುಷ್ಪಾವತಿ, ಮುಖ್ಯ ಶಿಕ್ಷಕಿ ಅಂದು ಶಿಕ್ಷೆಯ ಮೂಲಕ ಶಿಕ್ಷಣ ಇತ್ತು. ಪಠ್ಯದ ಜತೆಗೆ ಸಾಹಿತ್ಯ ಮುಂತಾದ ಜೀವನಾನುಭವದ ಪಾಠವಿತ್ತು. ಅಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸ ಇದೆ..
-ಉಪೇಂದ್ರ ಸೋಮಯಾಜಿ,
ಶಾಲೆಯ ಹಳೆ ವಿದ್ಯಾರ್ಥಿ -ರಾಜೇಶ್ ಗಾಣಿಗ ಅಚ್ಲಾಡಿ