ಬೆಂಗಳೂರು: ಎಂಜಿನಿಯರಿಂಗ್ ಮತ್ತು ದ್ರವ ನಿರ್ವಹಣಾ ವ್ಯವಸ್ಥೆಗಳ ಉತ್ಪಾದನೆಯಲ್ಲಿ ಅಗ್ರಗಣ್ಯ ಎನಿಸಿರುವ ಕಿರ್ಲೋಸ್ಕರ್ ಬ್ರದರ್ ಲಿಮಿಟೆಡ್ (ಕೆಬಿಎಲ್) ಇತ್ತೀಚೆಗೆ ಗೃಹಬಳಕೆಯ ಮತ್ತು ಕೃಷಿ ವಿಭಾಗದ ತೆರೆದಬಾವಿಗಾಗಿ “ಕೆಒಎಸ್‌ಐ’ (ಕೋಸಿ) ಸಬ್‌ಮರ್ಸಿಬಲ್ ಪಂಪ್‌ಗ್ಳನ್ನು ಬಿಡುಗಡೆ ಮಾಡಿದೆ.
ನಗರದಲ್ಲಿ ನಡೆದ ಅನಾವರಣ ಕಾರ್ಯಕ್ರಮದಲ್ಲಿ ಕೆಬಿಎಲ್ ಇಂಡಿಯಾ ವಹಿವಾಟು ಮುಖ್ಯಸ್ಥ ಆನುರಾಗ್ ವೋರ ಮಾತನಾಡಿ, ಭಾರತೀಯ ಗ್ರಾಹಕರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವ ಸಲುವಾಗಿ ಕೋಸಿ ಪಂಪ್‌ಗ್ಳನ್ನು ವಿನ್ಯಾಸಗೊಳಿಸಲಾಗಿದೆ.
ಕೋಸಿ ಪಂಪ್‌ಗ್ಳು ಹಗುರ ಹಾಗೂ ಕಾಂಪ್ಯಾಕ್ಟ್ ಡಿಸೈನ್‌ನಲ್ಲಿದ್ದು, ವಿದ್ಯುತ್ ಬಳಕೆಯನ್ನು ಗಮನಾರ್ಹವಾಗಿ ಕಡಿಮೆಗೊಳಿಸುತ್ತವೆ. ವಿದ್ಯುತ್ ಪೂರೈಕೆಯಲ್ಲಿ ಉಂಟಾಗುವ ಏರಿಳಿತ, ಓವರ್‌ಲೋಡ್ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ತಡೆಕೊಳ್ಳುವ ಶಕ್ತಿ ಇದಕ್ಕಿದೆ ಎಂದು ಅವರು ತಿಳಿಸಿದರು.
ಕೆಬಿಎಲ್ ಗ್ರಾಹಕರ ಜೀವನವನ್ನು ಹೆಚ್ಚು ಸಮರ್ಥ ಹಾಗೂ ವಿಶ್ವಾಸಾರ್ಹತೆಯೊಂದಿಗೆ ಪರಿಣಾಮಕಾರಿಯಾಗಿ ವೃದ್ಧಿಸುವ ನಿರಂತರ ಪ್ರಯತ್ನ ಮಾಡುತ್ತದೆ. ಗುಣಮಟ್ಟದ ಉತ್ಪನ್ನಗಳನ್ನು ಎಲ್ಲ ವರ್ಗದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ರಿಟೇಲ್ ಬ್ಯುಸಿನೆಸ್ ಮುಖ್ಯಸ್ಥ ಆಶಿಶ್ ತ್ರಿಪಾಠಿ ಮತ್ತು ಪ್ಲಾಂಟ್ ಕಾರ್ಯಾಚರಣೆ ಮುಖ್ಯಸ್ಥ ನಿರ್ಮಲ್ ತಿವಾರಿ ಅವರು ಕೋಸಿ ಪಂಪ್‌ನ ವಾಣಿಜ್ಯ ಹಾಗೂ ತಾಂತ್ರಿಕ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿದರು.