Advertisement

ಕೋಶಿಕಾ ಇಪ್ಪತ್ತರ ಸಂಭ್ರಮದ ನಾಟಕೋತ್ಸವ

06:00 AM Apr 27, 2018 | |

ಕೋಟ ಶಿವರಾಮ ಕಾರಂತರ ಹೆಸರಿನ ಕೋಶಿಕಾ(ರಿ.) ಸಾಂಸ್ಕೃತಿಕ ಸಂಘಟನೆ, ಚೇರ್ಕಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಸಂಸ್ಕೃತಿ ಇಲಾಖೆ, ಹೊಸದಿಲ್ಲಿ ಸಹಯೋಗದೊಂದಿಗೆ ನಾಟಕೋತ್ಸವವನ್ನು ಚೇರ್ಕಾಡಿಯ ಶಾರದಾ ಪ್ರೌಢ ಶಾಲೆಯ ಬಯಲು ರಂಗ ಮಂದಿರದಲ್ಲಿ ಆಚರಿಸಿತು. ಮೊದಲ ದಿನ ಜಂಗಮದ ಬದುಕು ನಾಟಕ ಪ್ರದರ್ಶಿಸಲ್ಪಟ್ಟಿತು. ಕೂಡು ಕುಟುಂಬಗಳು ಒಡೆದು ಹೋಳಾಗಿರುವ ಇಂದಿನ ಕಾಲಘಟ್ಟದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಮುಂತಾದ ಸಂಬಂಧಗಳ ಸರಪಳಿ ಕಳಚಿ ಹೋಗುತ್ತಿರುವ ವಿಷಾದದ ಛಾಯೆ ಈ ನಾಟಕದಲ್ಲಿದೆ. ಪತಿ, ಪತ್ನಿ ಮತ್ತು ಆತ(ಗೆಳೆಯ)ಇವರಷ್ಟೇ ಪಾತ್ರಗಳು. ವ್ಯಾವಹಾರಿಕ ಜಂಜಾಟಗಳ ನಡುವೆ ಈರ್ವರೊಳಗೆ ಪ್ರೀತಿಯ ಸಂಬಂಧ ಅಸಾಧ್ಯವಾದಾಗ ಆಕೆ ಅದನ್ನು ಗೆಳೆೆಯನಲ್ಲಿ ಕಾಣುವ ಪ್ರಯತ್ನ ಮಾಡುತ್ತಾಳೆ. ಇದು ತನ್ನ ದಾರಿಯಲ್ಲ ಎಂದು ಅರಿವಾಗಿ ವಿದೇಶದಲ್ಲಿ ಎರಡು ವರ್ಷಗಳ ಕಲಿಕೆಗಾಗಿ ಹೊರಟು ನಿಲ್ಲುತ್ತಾಳೆ. ಪತ್ನಿಯ ಈ ನಿಲುವು ಪತಿಯನ್ನು ಕೀಳರಿಮೆಯಿಂದ ತೊಳಲಾಡುವಂತೆ ಮಾಡುತ್ತದೆ. ಇಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿ ಮೂರೂ ಪಾತ್ರಗಳು ನರಳಿ, ಬಿಡುಗಡೆಗಾಗಿ ಹಂಬಲಿಸಿ, ಕೊನೆಯಲ್ಲಿ ಜಂಗಮದ ಬದುಕನ್ನೇ ಆರಿಸುವ ಸ್ಥಿತಿಗೆ ತಲುಪುತ್ತಾರೆ. ಪತ್ನಿ ಸುಕುಮಾರಿಯಾಗಿ ಅಭಿಲಾಷಾ ಎಸ್‌. ಆಕೆಯ ಇನ್ನೊಂದು ಮುಖವಾಗಿ ಕು| ಸಚಿತಾರ ಪಾತ್ರ ನಿರ್ವಹಣೆ ಉತ್ತಮವಾಗಿತ್ತು. ಪತಿ ಶಿವಕುಮಾರನ ಮಾನಸಿಕ ತೊಳಲಾಟವನ್ನು ಸದಾನಂದ ಬೈಂದೂರ್‌ ಸಹಜವಾಗಿ ಅನಾವರಣಗೊಳಿಸಿದರು. ಆತನಾಗಿ ರಾಮಕೃಷ್ಣ ಹೊಳ್ಳ ಮತ್ತು ಶ್ರೀಧರ್‌ ನೇರ ಮಾತಿನ ಶೈಲಿಯಲ್ಲಿಯೇ ಪಾತ್ರವನ್ನು ಪೋಷಿಸಿದ ರೀತಿ ಉತ್ತಮವಾಗಿತ್ತು. ನಾಟಕಕಾರ ಮತ್ತು ನಿರ್ದೇಶಕ ಪ್ರಸನ್ನ ಅವರ ರಚನೆ ಇದಾಗಿದ್ದು, ನಿರ್ದೇಶನ ಮತ್ತು ಸಂಗೀತ ಭಗವತೀ ಎಮ್‌. ಬೆಳಕು ರಾಜು ಮಣಿಪಾಲ ಅವರದ್ದಾಗಿತ್ತು. 

Advertisement

ಎರಡನೆಯ ದಿನ‌ “ಸುಧನ್ವಾರ್ಜುನ’ ಯಕ್ಷಗಾನ ಪ್ರದರ್ಶನಗೊಂಡಿತು. ಪಾಂಡವರ ಅಶ್ವಮೇಧ ಯಾಗದ ಕುದುರೆಯನ್ನು ಬಂಧಿಸಿದ ಚಂಪಕಾವತಿಯ ಅರಸ ಹಂಸಧ್ವಜನು ಯುದ್ಧಕ್ಕೆ ಅಣಿಯಾಗಿ ಮಗನಾದ ಸುಧನ್ವನನ್ನು ಸೇನಾ ನಾಯಕನನ್ನಾಗಿ ನೇಮಿಸುತ್ತಾನೆ. ಆದರೆ ಪತ್ನಿ ಪ್ರಭಾವತಿಯ ಕೋರಿಕೆಯನ್ನು ಈಡೇರಿಸುವ ಸಲುವಾಗಿ ಒಂದು ರಾತ್ರಿ ಆಕೆಯ ಅಂತಪುರದಲ್ಲಿಯೇ ಕಳೆದಾಗ ತಂದೆಯಿಂದ ಕಠಿಣ ಶಿಕ್ಷೆಗೆ ಒಳಗಾದರೂ ಶ್ರೀಕ್ರಷ್ಣನ ದಯೆಯಿಂದ ಪಾರಾಗುತ್ತಾನೆ. ಯುದ್ಧದಲ್ಲಿ ಅರ್ಜುನ‌ನ್ನು ಸೋಲಿಸುತ್ತಾನೆ. ಪಾರ್ಥಸಾರಥಿಯ ದರುಶನದಿಂದ ಸುಧನ್ವನು ಮೋಕ್ಷ ಹೊಂದುತ್ತಾನೆ. ತಂದೆ ಮತ್ತು ಮಗನ ಪೂರ್ವ ಯೋಜನೆಯಂತೆ ಚಂಪಕಾವತಿಯ ಜನತೆಗೆ ಕೃಷ್ಣನ ¨ಶ‌ìನ ಭಾಗ್ಯದೊರಕುತ್ತದೆ.ಸುಗಭೆìಯಾಗಿ ಗಾಯತ್ರಿ ಶಾಸಿŒಯವರು ಉತ್ತಮ ನಿರ್ವಹಣೆ ತೋರಿದರೆ, ಸುಧನ್ವನಾಗಿ ಬಾಗೀರಥಿ ಎಮ್‌.ರಾವ್‌ ಅವರ ಮಾತಿನ ಓಘ ಮತ್ತು ಕುಣಿತ ಹಿಡಿಸಿತು. ಪ್ರಭಾವತಿ ಮತ್ತು ಕೃಷ್ಣನಾಗಿ ಕು| ಅಶ್ವಿ‌ನಿ, ಅರ್ಜುನನಾಗಿ ನಾಗರತ್ನ ಹೇಳೆìಯವರ ಲವಲವಿಕೆಯ ಅಭಿನಯ ಖುಷಿ ನೀಡಿತು.  ಭಾಗವತರಾಗಿ ಉದಯ್‌ ಕುಮಾರ್‌ ಹೊಸಾಳ, ಮದ್ದಲೆಯಲ್ಲಿ ದೇವದಾಸ ರಾವ್‌ ಕೂಡ್ಲಿ, ಚಂಡೆಯಲ್ಲಿ ಕೃಷ್ಣಾನಂದ ಶೆಣೈ ಸಹಕರಿಸಿದರು. ವೇಷಭೂಷಣ ಬಾಲಕೃಷ್ಣ ನಾಯಕ್‌ ಹಂದಾಡಿ ಇವರದ್ದಾಗಿತ್ತು. 

ಕೊನೆಯ ದಿನ “ಅಗ್ನಿಲೋಕ’ ನಾಟಕ ಪ್ರದರ್ಶಿಸಲ್ಪಟ್ಟಿತು. ಮಹಾಗರ್ವಿ, ದುರಹಂಕಾರಿ ರಾಜ ಅಗ್ನಿ ರಕ್ತದ ಹೊಳೆ ಹರಿಸುತ್ತಾ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾನೆ. ವಯಸ್ಸಾಗುತ್ತಿದ್ದಂತೆ ತನ್ನ ಮೂವರು ಮಕ್ಕಳಾದ ಶೌರಿ, ಚತುರ ಮತ್ತು ವೀರನಿಗೆ ಸಾಮ್ರಾಜ್ಯವನ್ನು ಹಂಚಲು ನಿರ್ಧರಿಸುತ್ತಾನೆ. ಮೊದಲ ಇಬ್ಬರು ಕೃತಕ ಪ್ರೀತಿಯ ಭಾವನೆಗಳನ್ನು ವ್ಯಕ್ತ ಪಡಿಸಿದರೆ, ಕೊನೆಯವನು ನಿಷ್ಕಲ್ಮಶ ಮನಸಿಗನಾಗಿ ತನ್ನ ಅನಿಸಿಕೆಗಳನ್ನು ಭಿನ್ನವಿಸಿಕೊಂಡದ್ದರಿಂದ ದೇಶದಿಂದ ಬಹಿಷ್ಕರಿಸಲ್ಪಡುತ್ತಾನೆ. ತದನಂತರದಲ್ಲಿ ಮೊದಲಿಬ್ಬರು ತಂದೆಯನ್ನು ಕೇವಲವಾಗಿ ಕಂಡು ಮುಂದೆ ಅಧಿಕಾರಕ್ಕಾಗಿ ತಮ್ಮೊಳಗೇ ಕಾದಾಡಿಕೊಂಡು ಸಾಯುತ್ತಾರೆ. ಬೆಟ್ಟದ ಮೇಲಿನ ಹಳೇ ಕೋಟೆಯಲ್ಲಿರುವ ತಂದೆಯ ಹೀನ ಸ್ಥಿತಿ ತಿಳಿದು ಕಿರಿಯ ಮಗ ಬಂದು ಎಲ್ಲವೂ ಸುಖಾಂತ್ಯ ಎನ್ನುವಷ್ಟರಲ್ಲಿ ಈರ್ವರೂ ಹಿರಿಯ ಸೊಸೆ ಜ್ವಾಲಾಳ ಸೇಡಿಗೆ ಬಲಿಯಾಗುತ್ತಾರೆ. ಅಗ್ನಿಯಾಗಿ ವೈಶಾಕ್‌ ಅವರ ನಟನೆ ಉತ್ತಮವಾಗಿತ್ತು. ಶೌರಿಯಾಗಿ ಗುರುದತ್ತೇಶ್ವರ, ಚತುರನಾಗಿ ದುಗೇìಶ, ವೀರನಾಗಿ ಪ್ರಜ್ವಲ್‌ ಪಾತ್ರಗಳಿಗೆ‌ ನ್ಯಾಯ ಒದಗಿಸಿದರು. ಜ್ವಾಲಾಳಾಗಿ ರಾಘವೇಂದ್ರ ಮೆಚ್ಚುಗೆ ಪಡೆದರು. ವಿದೂಷಕನಾಗಿ ವಿಶ್ವ, ಶೃತ, ನಿಹಿಲೆ ಮತ್ತು ನಿಶಾರನಾಗಿ ಶಿವಾಜಿ, ದೃತನಾಗಿ ಹರ್ಷ, ಮಿತ್ರನಾಗಿ ಅನುರಾಗ್‌, ತೇಜನಾಗಿ ದತ್ತೇಶ್‌, ಸೈನಿಕನಾಗಿ ಚಂದನ್‌ ಸೊಗಸಾಗಿ ನಿರ್ವಹಿಸಿದರು. ಶೇಕ್ಸ್‌ಪಿಯರ್‌ನ ಕಿಂಗ್‌ ಲಿಯರ್‌ ನಾಟಕವನ್ನು ರೂಪಾಂತರಗೊಳಿಸಿ ನಿರ್ದೇಶಿಸಿದವರು ವಸಂತ್‌ ಬನ್ನಾಡಿಯವರು. ಬೆಳಕು ಬನ್ನಾಡಿಯವರದ್ದಾಗಿದ್ದು, ಸಂಗೀತ ಕುಮಾರ್‌ ನೀಡಿದ್ದರು. 

ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next