Advertisement

ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ : ಕೆಂಟೊ ಮೊಮೊಟ ಚಾಂಪಿಯನ್‌

09:53 AM Oct 01, 2019 | sudhir |

ಇಂಚಿಯಾನ್‌ (ಕೊರಿಯಾ): “ಕೊರಿಯಾ ಓಪನ್‌ ವರ್ಲ್ಡ್ ಟೂರ್‌ ಸೂಪರ್‌ 500′ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ, ಜಪಾನಿನ ಕೆಂಟೊ ಮೊಮೊಟ ತೈವಾನ್‌ನ ಚೌ ತಿಯಾನ್‌-ಚೆನ್‌ ಅವರನ್ನು 21-19, 21-17 ಗೇಮ್‌ಗಳಿಂದ ಮಣಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

Advertisement

53 ನಿಮಿಷಗಳ ಈ ಕಾದಾಟದಲ್ಲಿ ಮೊಮೊಟ ಅವರಿಗೆ ಸಾಟಿಯಾಗಲು ತಿಯಾನ್‌-ಚೆನ್‌ಗೆ ಸಾಧ್ಯವಾಗಲಿಲ್ಲ.ಇಷ್ಟರವರೆಗೆ 300 ಪಂದ್ಯಗಳಲ್ಲಿ ಜಯ ಸಾಧಿಸಿರುವ ಮೊಮೊಟ 2016ರಲ್ಲಿ ಅನಧಿಕೃತ ಕ್ಯಾಸಿನೊಗೆ ಭೇಟಿ ನೀಡಿ ಅಮಾನತುಗೊಂಡಿದ್ದರು.

ಶನಿವಾರ ನಡೆದ ಸೆಮಿಫೈನಲ್‌ವುುಖಾಮುಖೀಯಲ್ಲಿ ಕೆಂಟೊ ಮೊಮೊಟ ಭಾರತದ ಪಿ ಕಶ್ಯಪ್‌ ಅವರನ್ನು ಸೋಲಿಸಿ ಫೈನಲ್‌ ಪ್ರವೇಶಿಸಿದ್ದರು.
ವನಿತೆಯರ ಡಬಲ್ಸ್‌ ಕೊರಿಯ ಆಟಗಾರ್ತಿಯರ ನಡುವೆ ನಡೆಯಿತು. ಕೊರಿಯದ ಕಿಮ್‌ ಸೋ ಯಿಂಗ್‌ ಮತ್ತು ಕಾಂಗ್‌ ಸೀ ಯಂಗ್‌ ಅವರು ತಮ್ಮ ದೇಶದವರೇ ಆದ ಲೀ ಸೋ ಹೀ ಮತ್ತು ಶಿನ್‌ ಸಿಯುಂಗ್‌ ಚಾನ್‌ ಅವರನ್ನು 13-21, 21-19, 21-17 ಗೇಮ್‌ಗಳಿಂದ ಉರುಳಿಸಿದರು. ಪುರುಷರ ಡಬಲ್ಸ್‌ ನಲ್ಲಿ ಇಂಡೋನೇಶ್ಯದ ಫ‌ಜರ್‌ ಅಲ್ಫಿಯಾನ್‌ ಮತ್ತು ಮುಹಮ್ಮದ್‌ ರಿಯಾನ್‌ ಆರ್ದಿಯಾಂತೊ ಅವರು ಜಪಾನಿನ ತಕೇಶಿ ಕಮುರ ಮತ್ತು ಕೈಗೊ ಸೊನೋಡ ಅವರನ್ನು 21-16, 21-17 ಗೇಮ್‌ಗಳಿಂದ ಕೆಡಹಿ ಪ್ರಶಸ್ತಿ ಜಯಿಸಿದರು.

ಮಹಿಳಾ ಸಿಂಗಲ್ಸ್‌
ಮಹಿಳಾ ಸಿಂಗಲ್ಸ್‌ನಲ್ಲಿ ಚೀನದ ಹೀ ಬಿಂಗ್‌ಜಿಯೋ ಅವರು ಥಾçಲೆಂಡಿನ ರಚನಾಕ್‌ ಇಂತನಾನ್‌ ಅವರನ್ನು 18-21, 24-22, 21-17 ಗೇಮ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ ಬಿಂಗ್‌ಜಿಯೋ ಅನಂತರದ ಎರಡು ಗೇಮ್‌ಗಳಲ್ಲಿ ಎಚ್ಚರಿಕೆಯ ಆಟವಾಡಿ ಪಂದ್ಯವನ್ನು ತನ್ನದಾಗಿಸಿಕೊಂಡರು. ಎದುರಾಳಿ ಇಂತನಾನ್‌ ಸೋತರೂ ತೀವ್ರ ಪೈಪೋಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next