ಕೊರಟಗೆರೆ:ಆರ್ಚಕರ ನೇಮಕ ವಿವಾದದ ಹಿನ್ನಲೆಯಲ್ಲಿ ಕೊರಟಗೆರ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಆರ್ಚಕ ಶ್ರೀನಿವಾಸ ಮೂರ್ತಿ ಹಾಕಿದ್ದ ಬೀಗವನ್ನು ತಾಲೂಕು ಆಡಳಿತ ತೆರವುಗೊಳಿಸಿದೆ.
ದೊಡ್ಡಕಾಯಪ್ಪ ಎಂದೇ ಪ್ರಸಿದ್ದಿ ಪಡೆದಿರುವ ಆಂಜನೇಯಸ್ವಾಮಿ ದೇವಾಲಯಕ್ಕೆ ಪ್ರತ್ಯೇಕ ಬೀಗ ಹಾಕಿದ್ದರಿಂದ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ವೈಷಮ್ಯಕ್ಕೆ ಕಾರಣವಾಗಿತ್ತು.ಮೂರು ದಿನದ ಹಿಂದೆಯೇ ಕುರಂಕೋಟೆ ಶ್ರೀಆಂಜನೇಯ ಸ್ವಾಮಿ ದೇವಸ್ಥಾನದ ಬಾಗಿಲು ಹಾಕಿಕೊಂಡು ಕಾಣೆಯಾಗಿದ್ದ ಆರ್ಚಕ ಶ್ರೀನಿವಾಸ ಮೂರ್ತಿ ಮಂಗಳವಾರ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದು ಅಧಿಕಾರಿಗಳ ಸೂಚನೆಯಂತೆ ದೇವಾಲಯದ ಬಾಗಿಲು ತೆರೆದಿದ್ದಾರೆ.
ದೇವಾಲಯದ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರ ಚರ್ಚಿಸಿ ಪಂಚಾಯತಿ ನಡೆಸಿದ್ದು ಬೆರೋಬ್ಬರನ್ನು ಆರ್ಚಕರನ್ನಾಗಿ ನೇಮಿಸಿ ದಿನನಿತ್ಯ ಪೂಜೆ ನಡೆಸುವಂತೆ ಸೂಚಿಸಿದರು.
ಗ್ರಾಮದಲ್ಲಿ ಗಲಾಟೆಗೆ ಕಾರಣವಾಗಬಾರದೆಂದು ತಹಸೀಲ್ದಾರ್ ಮುನಿಶಾಮಿರೆಡ್ಡಿ ಜೂಡ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ವಿವಾದ ಬಗೆಹರಿಸಿಕೊಳ್ಳಿವಂತೆ ಸ್ಥಳೀಯರಿಗೆ ಅವಕಾಶ ನೀಡಿ ತೆರಳಿದ್ದರು.
ಏನಿದು ದೇವಾಲಯ ವಿವಾದ?
ಪ್ರತಿ ವರ್ಷದಂತೆ ಶ್ರೀ ರಾಮನವಮಿ ಹಬ್ಬದ ನಂತರ ಆರ್ಚಕರ ಬದಲಾವಣೆ ಊರಿನಲ್ಲಿ ವಾಡಿಕೆಯಾಗಿದ್ದು ಆದರಂತೆ ಆರ್ಚಕ ಶ್ರೀನಿವಾಸ ಮೂರ್ತಿ ಅವರನ್ನು ಬದಲಾಯಿಸಿ ವೆಂಕಟೇಶ ಮೂರ್ತಿಯವರನ್ನು ನೇಮಿಸಲಾಗಿತ್ತು.ಪೂಜೆ ಉಸ್ತುವಾರಿಯನ್ನು ಬಿಟ್ಟುಕೊಡಬೇಕಿದ್ದ ಶ್ರೀನಿವಾಸ ಮೂರ್ತಿ ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಯಾರ ಸಂಪರ್ಕಕ್ಕೂ ಸಿಗದೆ ಮೂರು ದಿನಗಳಿಂದ ಕಾಣೆಯಾಗಿದ್ದರು. ಗ್ರಾಮಸ್ಥರು ತಹಸೀಲ್ದಾರ್ ದೂರು ನೀಡಿದ ಕೂಡಲೇ ಮಂಗಳವಾರ ಶ್ರೀನಿವಾಸ ಮೂರ್ತಿ ಗ್ರಾಮಕ್ಕೆ ಆಗಮಿಸಿ ದೇಗುಲದ ಬಾಗಿಲು ತೆಗೆದಿದ್ದಾರೆ.ಆರ್ಚಕ ವೆಂಕಟೇಶ ಮೂರ್ತಿ ಯವರು ಪೂಜೆ ಮುಂದುವರಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದು ವಿವಾದ ಸದ್ಯಕ್ಕೆ ಬಗೆಹರಿದಿದೆ.
Related Articles
ಇದನ್ನೂ ಓದಿ: ಜೈನ ಮಠದಲ್ಲಿ 2622ನೇ ಮಹಾವೀರ ಜಯಂತಿ
ದೇವಸ್ಥಾನಕ್ಕೆಆರ್ಚಕ ಬೀಗ ಹಾಕಿದ್ದರಿಂದ ಭಕ್ತರು ಬಾಗಿಲಿನಲ್ಲಿಯೇ ಪೂಜೆ ಸಲ್ಲಿಸುತ್ತಿದ್ದರು.ವಿವಾದದ ಬಗ್ಗೆ ಮೇಲಾಧಿಕಾರಿಗಳ ಸೂಚನೆಯಂತೆ ಸ್ಥಳೀಯರೇ ತೀರ್ಮಾನ ತೆಗೆದು ಮಾಡಿಕೊಂಡು ಬಗೆಹರಿಸಿಕೊಳ್ಳಲಾಗಿದೆ. ನೂತನ ಅರ್ಚಕ ವೆಂಕಟೇಶ್ ಮೂರ್ತಿ ದೇವಾಲಯದ ಪೂಜೆಯನ್ನು ಮುಂದುವರಿಸಿಕೊಂಡು ಹೋಗಲು ಸೂಚಿಸಲಾಗಿದೆ.
ಎ.ಜೆ.ರಾಜು, ಉಪ ತಹಸೀಲ್ದಾರ್ ಚನ್ನರಾಯನದುರ್ಗ ಹೋಬಳಿ ಕೊರಟಗೆರೆ.
ದೇವಸ್ಥಾನಕ್ಕೆ ಬೀಗ ಹಾಕಿ ಕಾಣೆಯಾಗಿದ್ದಆರ್ಚಕ ಶ್ರೀನಿವಾಸ ಮೂರ್ತಿಯ ಮೇಲೆ ಶಿಸ್ತು ಕ್ರಮಕ್ಕಾಗಿ ಎ.ಸಿಯವರಿಗೆ ಲಿಖಿತವಾಗಿ ಪತ್ರ ಬರೆದಿದ್ದೇನೆ.ಅಲ್ಲಿಂದ ಏನೂ ಬರುತ್ತೂ ಅದರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸರದಿ ಪ್ರಕಾರ ಯಾರಿಗಿತ್ತೂ ಅವರಿಗೆ ಹಸ್ತಾಂತರ ಮಾಡಲಾಗಿದೆ.ಆರ್ಚಕ ವೆಂಕಟೇಶ ಮೂರ್ತಿ ಯನ್ನು ನೆಮಿಸಲಾಗಿದ್ದು ಎಂದಿನಂತೆ ಪೂಜಾ ಕಾರ್ಯಗಳು ನಡೆಯುತ್ತಿವೆ.
ಮುನಿಶಾಮಿರೆಡ್ಡಿ, ತಹಸೀಲ್ದಾರ್ .ಕೊರಟಗೆರೆ