Advertisement

Koratagere: ಸಿನಿಮಿಯ ಶೈಲಿಯಲ್ಲಿ ಖತರ್ನಾಕ್ ಕಳ್ಳನನ್ನು ಬಂಧಿಸಿದ ಪೊಲೀಸ್ ಪೇದೆ

09:18 PM Aug 07, 2024 | Team Udayavani |

ಕೊರಟಗೆರೆ: ಗೃಹ ಸಚಿವರ ತವರು ಕ್ಷೇತ್ರವಾದ ಕೊರಟಗೆರೆ ಪಟ್ಟಣದಲ್ಲಿ ಜು.20ರಂದು ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿ ಬೆಂಗಳೂರಿನ ಸದಾಶಿವ ನಗರದ ಟ್ರಾಫಿಕ್ ಸಿಗ್ನಲ್‍ನಲ್ಲಿ ದ್ವಿಚಕ್ರ ವಾಹನದ ಮೂಲಕ ಆಗಮಿಸಿದ ವೇಳೆ ಕೊರಟಗೆರೆ ಪೊಲೀಸ್ ಠಾಣೆಯ ಪೇದೆ ದೊಡ್ಡಲಿಂಗಯ್ಯ ಸಿನಿಮೀಯ ರೀತಿಯಲ್ಲಿ ಹಿಡಿದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Advertisement

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಮತ್ತು ತುಮಕೂರು ಜಿಲ್ಲೆಯ ಹತ್ತಾರು ಪೊಲೀಸ್ ಠಾಣೆಯಲ್ಲಿ ನಟೋರಿಯಸ್ ರೌಡಿ ಮತ್ತು ಖತರ್ನಾಕ್ ಕಳ್ಳ ಮಂಜುನಾಥ(46) ಅಲಿಯಾಸ್ ಹೊಟ್ಟೆಮಂಜನ ಮೇಲೆ 75 ಕ್ಕೂ ಹೆಚ್ಚು ಕಳ್ಳತನ ಪ್ರಕರಣ ದಾಖಲಾಗಿದೆ.

ನಟೋರಿಯಸ್ ರೌಡಿಯನ್ನು ಪೊಲೀಸ್ ಪೇದೆ ದೊಡ್ಡಲಿಂಗಯ್ಯ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸಿನಿಮೀಯ ಶೈಲಿಯಲ್ಲಿ ಹಿಡಿದು ವಶಕ್ಕೆ ಪಡೆದಿದ್ದಾರೆ.

ಪೇದೆ ಮೇಲೆ ಆರೋಪಿಯಿಂದ ಹಲ್ಲೆ..
ಸದಾಶಿವ ನಗರದ ಟ್ರಾಫಿಕ್‍ನಲ್ಲಿ ಕೊರಟಗೆರೆ ಪೇದೆ ದೊಡ್ಡಲಿಂಗಯ್ಯ ಆರೋಪಿ ಹೊಟ್ಟೆಮಂಜನನ್ನು ನಿಲ್ಲಿಸಲು ಪ್ರಯತ್ನಿಸಿದ ವೇಳೆ ಪೇದೆ ಮೇಲೆಯೇ ಬೈಕ್ ಹತ್ತಿಸಲು ಮುಂದಾಗಿದ್ದಾನೆ. ವಾಹನ ಮೇಲೆ ಬಂದ್ರು ಆರೋಪಿಯನ್ನು ಬಿಡದೇ ಆತನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡ ಮೇಲು ವಾಹನ ವೇಗವಾಗಿ ಚಲಾಯಿಸಿದ್ದಾನೆ. ನಂತರ ಸಂಚಾರಿ ಠಾಣೆಯ ಮಹಿಳಾ ಎಎಸೈ ಮೇಲೆಯು ಆರೋಪಿ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Advertisement

ಡಿಸಿಸಿ ಬ್ಯಾಂಕಿನ ಬಳಿ ವೃದ್ದೆಯ ಸರ ಕಳ್ಳತನ..
ಕೊರಟಗೆರೆ ಪಟ್ಟಣದ ಆಸ್ಪತ್ರೆಗೆ ಚಿಕ್ಕನಹಳ್ಳಿಯ ಗಿರಿಜಮ್ಮ(76) ಬಂದಾಗ ವಂಚಕ ಮಂಜುನಾಥ ನಿಮಗೆ ವೃದ್ದಾಪ್ಯವೇತನ ಮಾಡಿಕೊಡುವ ಆಮೀಷವೊಡ್ಡಿ ಡಿಸಿಸಿ ಬ್ಯಾಂಕಿನ ಬಳಿಗೆ ಕರೆದೊಯ್ದು ಬಂಗಾರ ಸರ ನೋಡಿದ್ರೇ ಕೆಲಸ ಆಗೋದಿಲ್ಲ ಅಂತಾ ಹೇಳಿ ವೃದ್ದೆಯ ಕೊರಳಿನಲ್ಲಿದ್ದ ಬಂಗಾರ ಸರಬಿಚ್ಚಿಸಿ ಬ್ಯಾಗಿನಲ್ಲಿ ಇಟ್ಟುಕೊಳ್ಳುವಂತೆ ತಾನೇ ಬ್ಯಾಗ್‍ನೀಡ್ತಾನೇ. ಬ್ಯಾಂಕಿನೊಳಗೆ ಹೋದ ಕಳ್ಳ ಮತ್ತೆ ವೃದ್ದೆಗೆ ಕಾಣದಂತೆ ಬ್ಯಾಗ್ ಕಬಳಿಸಿ ಪರಾರಿ ಆದ ಪ್ರಕರಣದ ಮೇಲೆ ಪೊಲೀಸರಿಂದ ತನಿಖೆ ನಡೆದಿದೆ.

45 ದಿನಗಳಿಂದ ಪೊಲೀಸರ ಹುಡುಕಾಟ..
ಕೊರಟಗೆರೆ ವೃದ್ದೆಯ ಕಳ್ಳತನದ ಪ್ರಕರಣದ ಬೆನ್ನತ್ತಿದ ಕೊರಟಗೆರೆ ಪೊಲೀಸರ ತಂಡ ಕೊರಟಗೆರೆ ಪಟ್ಟಣ, ತುಮಕೂರು, ಊರ್ಡಿಗೆರೆ, ಬೆಂಗಳೂರು, ದಾಬಸ್‍ಪೇಟೆ ಮತ್ತು ನೆಲಮಂಗಲದ ರಸ್ತೆಗಳಲ್ಲಿ 45 ದಿನ ಹುಡುಕಾಟ ನಡೆಸಿ ಸಿಸಿಟಿವಿ ಪರಿಶೀಲಿಸಿದ್ದಾರೆ ತುಮಕೂರಿನ ಕಮಾಂಡ್ ಸೆಂಟರ್ ಸಿಸಿ ಟಿವಿಯ ವಿಡೀಯೊ ಮತ್ತು ನೆಲಮಂಗಲದ ಟ್ರಾಪೀಕ್ ಮೇನೆಜ್‍ಮೆಂಟ್ ಸಹಾಯದಿಂದ ಆರೋಪಿಯನ್ನು ಕೊರಟಗೆರೆ ಪೊಲೀಸರ ಕಠಿಣ ಪರಿಶ್ರಮದಿಂದ ಬಂಧಿಸುವಲ್ಲಿ ಯಶಸ್ವಿ ಆಗಿರುವ ಘಟನೆ ನಡೆದಿದೆ.

ನೆಲಮಂಗಲ ತಾಲೂಕಿನ ಹುಳಿ ಚಿಕ್ಕನಹಳ್ಳಿಯ ಮಂಜುನಾಥ(46) ಅಲಿಯಾಸ್ ಹೊಟ್ಟೆಮಂಜ ಬಂಧಿತ ಆರೋಪಿ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಚಿಕ್ಕನಹಳ್ಳಿ ಗ್ರಾಮದ ವೃದ್ದೆ ಗಿರಿಜಮ್ಮನ ದೂರಿನ ಅನ್ವಯ ಜು.20ರಂದು ಪ್ರಕರಣ ದಾಖಲಾಗಿದೆ. ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ್ ನೇತೃತ್ವದಲ್ಲಿ ತನಿಖೆ ನಡೆದಿದೆ. ತನಿಖೆಯಲ್ಲಿ ಎಎಸೈ ಗಂಗಾಧರಪ್ಪ, ಪೇದೆ ದೊಡ್ಡಲಿಂಗಯ್ಯ, ಮೋಹನ್, ಸಿದ್ದರಾಮ, ಪ್ರದೀಪ ಸೇರಿದಂತೆ ಇತರರು ಭಾಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next