Advertisement

ವನ್ಯ ಜೀವಿಗಳಿಗೆ ನೀರು ಕುಡಿಯಲು ನಿರ್ಮಿಸಿದ ತಗ್ಗು ಪ್ರದೇಶಕ್ಕೆ ಕಾರ್ಖಾನೆಯ ಕೊಳಚೆ ನೀರು

08:03 PM Jun 18, 2022 | Team Udayavani |

ಕುಳಗೇರಿ ಕ್ರಾಸ್ : ಕಲ್ಲಾಪೂರ ಎಸ್‌ಕೆ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ವನ್ಯಜೀವಿಗಳಿಗೆ ಹಾಗೂ ದನ-ಕರುಗಳ ಅನಕೂಲಕ್ಕಾಗಿ ತೋಡಲಾದ ನೀರು ಸಂಗ್ರಹ ತಗ್ಗು ಪ್ರದೇಶಕ್ಕೆ ಎಂಆರ್‌ಎನ್(ನೀರಾಣಿ) ಸಕ್ಕರೆ ಕಾರ್ಖಾನೆಯವರು ಅಕ್ರಮವಾಗಿ ಪೈಪ್‌ಲೈನ್ ಮಾಡುವ ಮೂಲಕ ತಮ್ಮ ಕಾರ್ಖಾನೆಯ ಕೊಳಚೆ ನೀರನ್ನು ಅರಣ್ಯ ಪ್ರದೇಶದಲ್ಲಿ ಹರಿಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಕಲ್ಲಾಪೂರ ಎಸ್‌ಕೆ ಗ್ರಾಮದ ಎಂಆರ್‌ಎನ್ ಸಕ್ಕರೆ ಕಾರ್ಖಾನೆ ಪಕ್ಕ ಇರುವ ಗುಡ್ಡಗಾಡು ಅರಣ್ಯ ಪ್ರದೇಶಕ್ಕೆ ಬಾಗಲಕೋಟೆ ಡಿಎಫ್‌ಒ ಸಂಕಿನಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕಾರ್ಖಾನೆಯ ಕೊಳಚೆ ನೀರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಹರಿಸುತ್ತಿರುವುದನ್ನ ಗಮನಿಸಿದ ಅವರು ಕಾರ್ಖಾನೆಯ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳಿಗೆ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು ಸಂಗ್ರಹಕ್ಕೆ ತಗ್ಗು ತೋಡಲಾಗಿದೆ. ಆದರೆ ಕಾರ್ಖಾನೆಯವರು ಅರಣ್ಯ ಪ್ರದೇಶದಲ್ಲಿ ಫೈಪ್-ಲೈನ್ ಮಾಡುವ ಮೂಲಕ ತಮ್ಮ ಕಾರ್ಖಾನೆಯ ಕೊಳಚೆ ನೀರು ಹರಿ ಬಿಟ್ಟಿರುವುದು ಅಪರಾಧ ಕಾರಣ ನಾವು ಕ್ರಮ ಕೈಗೊಳ್ಳುತ್ತೆವೆ.

ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಾರ್ಖಾನೆಯ ಕೊಳಚೆ ನೀರು ಹರಿಯಲು ಅಳವಡಿಸಿದ ಫೈಪ್-ಲೈನ್ ಒಂದು ವಾರದಲ್ಲಿ ತೆರವುಗೊಳಿಸುವಂತೆ ಕಾರ್ಖಾನೆಯ ಸಿಬ್ಬಂದಿಗೆ ತಾಕಿತ್ ಮಾಡಿದ್ದೆವೆ. ತಗ್ಗು ಪ್ರದೇಶದಲ್ಲಿರುವ ಕೊಳಚೆ ನೀರನ್ನ ಒಂದು ವಾರದಲ್ಲಿ ತೆಗೆದು ಸ್ವಚ್ಚಗೊಳಿಸದಿದ್ದರೆ ಕಾರ್ಖಾನೆಯವರ ಮೇಲೆ ಕ್ರಮ ಕೈಗೊಳ್ಳುತ್ತೆವೆ. ಮತ್ತು ಅರಣ್ಯ ಪ್ರದೇಶದಲ್ಲಿ ಫೈಪ್-ಲೈನ್ ಮಾಡಿ ನೀರು ಹರಿಸೋವರೆಗೂ ಸುಮ್ಮನಿರುವ ನಮ್ಮ ಅರಣ್ಯ ಅಧಿಕಾರಿಗಳ ಮೇಲು ನಾವು ಕ್ರಮ ಕೈಗೊಳ್ಳುತ್ತೆವೆ.

Advertisement

– ಬಾಗಲಕೋಟೆ ಡಿಎಫ್‌ಒ ಸಂಕಿನಮಠ

ನಾನು ಬಾದಾಮಿ ಅರಣ್ಯ ಅಧಿಕಾರಿಯಾಗಿ ಬಂದು ಒಂದು ವಾರವಾಗಿದೆ ಅದರ ಬಗ್ಗೆ ನನಗೂ ಅಷ್ಟೊಂದು ಗೊತ್ತಿಲ್ಲ. ಕಾರ್ಖಾನೆಯ ಕೊಳಚೆ ನೀರು ಹರಿಯಲು ನಾವು ಆಸ್ಪದ ಕೊಡೋದಿಲ್ಲ. ನಮ್ಮ ಅರಣ್ಯ ಪ್ರದೇಶದಲ್ಲಿ ಕಾರ್ಖಾನೆಯ ನೀರು ಬರದಂತೆ ನೋಡಿಕೊಳ್ಳುತ್ತೆವೆ ಎಂದು ಪತ್ರಿಕೆಗೆ ತಿಳಿಸಿದ ಬಾದಾಮಿ ಆರ್‌ಎಫ್‌ಒ ವಿರೇಶ ಅವರು ನಮ್ಮ ಅರಣ್ಯ ಪ್ರದೇಶದಲ್ಲಿ ಹರಿಬಿಟ್ಟಿದ್ದ ಕಾರ್ಖಾನೆ ಕೊಳಚೆ ನೀರನ್ನ ಸುಮಾರು ಎರೆಡು ವರ್ಷಗಳ ಹಿಂದೆ ಬಂದ್ ಮಾಡಲಾಗಿದೆ ಎಂದು ಕಾರ್ಖಾನೆಯವರ ಪರ ಬ್ಯಾಟಿಂಗ್ ಮಾಡಿದ ಅವರು ಅರಣ್ಯ ಪ್ರದೇಶದಲ್ಲಿ ಅಳವಡಿಸಲಾದ ಕೊಳಚೆ ನೀರಿನ ಫೈಪ್-ಲೈನ್ ಹಾಗೆ ಇವೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಹಾರಿಕೆ ಉತ್ತರ ಕೊಡುತ್ತಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next