Advertisement

ಕೊರಟಗೆರೆ: ಟಾರ್ ಆಯಿಲ್ ಸಿಡಿದು ತಾಯಿ, ಮಗಳ ಕಣ್ಣಿಗೆ ಹಾನಿ

06:46 PM Jun 06, 2022 | Team Udayavani |

ಕೊರಟಗೆರೆ: ತಾಲ್ಲೂಕಿನ ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕರಣದ ಉದ್ದೇಶಕ್ಕಾಗಿ ತಂದಿದ್ದ ಟಾರ್ ಟ್ರಾಕ್ಟರ್ ನಲ್ಲಿದ್ದ ಟಾರ್ ಆಯಿಲ್ ಸಿಡಿದು ತಾಯಿ ಮತ್ತು ಮಗಳ ಕಣ್ಣಿನ ದೃಷ್ಟಿಗೆ ಸಮಸ್ಯೆ ಎದುರಾಗಿರುವ ಘಟನೆ ಜರುಗಿದೆ.

Advertisement

ಗೊರವನಹಳ್ಳಿ ಗ್ರಾಮದ ಲಕ್ಷ್ಮಮ್ಮ ಮತ್ತು ಲಕ್ಷ್ಮೀ ಎಂಬುವರ ಕಣ್ಣಿಗೆ ಡ್ರಮ್ಮಿನಲ್ಲಿದ್ದ ಟಾರ್ ಆಯಿಲ್ ಸಿಡಿದಿದೆ. ಪಟ್ಟಣದ ಎಸ್ ಬಿಐ ಬ್ಯಾಂಕಿನ ಮುಂಭಾಗದ ಮುಖ್ಯರಸ್ತೆಯಲ್ಲಿ ದುರ್ಘಟನೆ ನಡೆದಿದೆ. ಟ್ರಾಕ್ಟರ್ ನಲ್ಲಿದ್ದ ಟಾರ್ ಆಯಿಲ್ ಬಿಸಿಮಾಡಲು ಕೆಳಗೆ ಇಳಿಸುವ ವೇಳೆ ಗುತ್ತಿಗೆದಾರ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಪರಿಣಾಮ ಅನಾಹುತ ಉಂಟಾಗಿದೆ.

ಪಟ್ಟಣದ ಸಜ್ಜನರ ಬೀದಿಯಲ್ಲಿ ಡಾಂಬರೀಕರಣ ಕೆಲಸಕ್ಕಾಗಿ ತಂದಿದ್ದ ಟಾರ್ ಆಯಿಲ್ ಬ್ಯಾರಲ್ ಗಳು,ಟ್ರಾಕ್ಟರ್ ನಿಂದ ಆಯಿಲ್ ಕೆಳಗೆ ಇಳಿಸುವಾಗ ಆಟೋದಲ್ಲಿದ್ದ ಐದು ಜನರ ಮೇಲೆ  ಬಿದ್ದು ಅನಾಹುತ ನಡೆದಿದೆ.ಇಬ್ಬರು ಪ್ರಯಾಣಿಕರ ಕಣ್ಣಿಗೆ ಗಂಭೀರ ಗಾಯವಾಗಿ ಕೊರಟಗೆರೆ ಪಟ್ಟಣದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ತಹಶೀಲ್ದಾರ್ ನಾಹೀದಾ ಜಮ್ ಜಮ್ ಬೇಟಿ ನೀಡಿ ಪರಿಶೀಲಿಸಿ ಗುತ್ತಿಗೆದಾರನಿಂದ ಮಾಹಿತಿ ಪಡೆದು ಗಾಯಾಳುಗಳಿಗೆ ಚಿಕಿತ್ಸೆ ವೆಚ್ಚ ಭರಿಸುವಂತೆ ಗುತ್ತಿಗೆದಾರನಿಗೆ ಸ್ಥಳದಲ್ಲಿಯೇ ಸೂಚಿಸಿದರು . ಗುತ್ತಿಗೆದಾರನ ನಿರ್ಲಕ್ಷದಿಂದ ಅನಾಹುತ ನಡೆದಿದೆ. ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next