Advertisement

ಪಿಂಚಣಿ ಅದಾಲತ್: ಗ್ರಾಮೀಣ ಜನರ ನೋವಿಗೆ ಸ್ಪಂದಿಸಿದ ಕೊರಟಗೆರೆ ತಹಸೀಲ್ದಾರ್ ನಹಿದಾ

07:30 PM Jan 14, 2022 | Team Udayavani |

ಕೊರಟಗೆರೆ :ತಾಲ್ಲೂಕಿನ ಹುಲಿಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವರಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಸೀಲ್ದಾರ್ ನಹಿದಾ ಜಮ್ ಜಮ್ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನದ ಮಂಜೂರಾತಿ ಪತ್ರವನ್ನು ನೀಡಿದರು.

Advertisement

ನಹಿದಾ ಜಮ್ ಜಮ್ ಮಾತನಾಡಿ, 60 ವರ್ಷ ಮೇಲ್ಪಟ್ಟವರಿಗೆ ನಿಮ್ಮ ಮನೆಯ ಬಾಗಿಲಿಗೆ ವೃದ್ಧಾಪ್ಯ ವೇತನದ ಮಂಜೂರು ಪತ್ರ ತಲುಪಿಸುತ್ತಿದ್ದೇವೆ ಹಾಗೆಯೇ ಗ್ರಾಮದಲ್ಲಿನ ಸಮಸ್ಯೆಗಳನ್ನು ಸ್ಥಳೀಯ ಅಧಿಕಾರಿಗಳನ್ನು ಕಳಿಸಿ ತಕ್ಷಣ ಪರಿಹಾರ ಒದಗಿಸಿದರೆ ಯಾವುದೇ ಗ್ರಾಮದ ಜನರು ತಾಲ್ಲೂಕು ಕಚೇರಿಯ ಕಡೆ ಬರುವುದು ಕಡಿಮೆಯಾಗುತ್ತದೆ. ಆದ್ದರಿಂದ ಸ್ಥಳೀಯ ಅಧಿಕಾರಿಗಳು ತಮ್ಮ ತಮ್ಮ ಕೆಲಸಗಳ ಕಡೆ ಗಮನ ಕೊಡಿ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಇತ್ತೀಚೆಗೆ ಕೋವಿಡ್ ಸಂಖ್ಯೆಗಳು ಹೆಚ್ಚಾಗುತ್ತಿವೆ .ಮೊದಲನೇ ಹಾಗೂ ಎರಡನೇ ಅಲೆಗಿಂತ ಮೂರನೇ ಅಲೆ ತುಂಬಾ ವೇಗವಾಗಿ ಹರಡುತ್ತಿದೆ.ದಯವಿಟ್ಟು ಎಲ್ಲಾ ಗ್ರಾಮದಲ್ಲಿ ಶಾಲೆಗಳಲ್ಲಿ ಪ್ರತೀ ಕಡೆ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕೈಗಳನ್ನು ಶುಚಿಯಾಗಿಟ್ಟುಕೊಳ್ಳಿ ಆರೋಗ್ಯದ ಕಡೆ ಎಲ್ಲರೂ ಗಮನ ಹರಿಸಿ ಎಂದು ತಿಳಿಸಿದರು.

ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಶಿಕ್ಷಕರಂತೆ ಪಾಠವನ್ನು ಮಾಡುತ್ತಾ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿ ಮಕ್ಕಳ ಜೊತೆ ಕೆಲ ಸಮಯವನ್ನು ಕಳೆದರು.ತದನಂತರ ಅಂಗನವಾಡಿಗೆ ಭೇಟಿ ನೀಡಿ ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ ಯಾವ ಆಹಾರವನ್ನು ಕೊಡುತ್ತೀರಾ? ಎಂದು ಪರಿಶೀಲಿಸಿದರು .

ಫ್ರೆಂಡ್ಸ್ ಗ್ರೂಪ್ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯ ಮಲ್ಲಣ್ಣ ಮಾತನಾಡಿ, ಇಂತಹ ಜನಸ್ನೇಹಿ ತಹಶಿಲ್ದಾರ್ ನಮ್ಮ ತಾಲ್ಲೂಕಿಗೆ ಬಂದಾಗಿನಿಂದಲೂ ಒಂದಲ್ಲ ಒಂದು ನೂತನ ಕಾರ್ಯಕ್ರಮದಡಿ ಜನರ ನೋವಿಗೆ ಸ್ಪಂದಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ತಾಲ್ಲೂಕಿನ ಗ್ರಾಮೀಣ ಭಾಗದ ಯಾವುದೇ ಗ್ರಾಮದ ಜನರ ಬಾಯಲ್ಲಿ ಕೇಳಿದರೂ ಕೂಡ ಇಂತಹ ಒಳ್ಳೆಯ ತಹಶಿಲ್ದಾರರನ್ನು ನಾವು ಹಿಂದೆಂದೂ ಕಂಡಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ .ಮನೆ ಇಲ್ಲದವರಿಗೆ ಮನೆ, ವೃದ್ಧಾಪ್ಯ ವೇತನ ಸಿಗದೆ ವಂಚಿತರಾಗಿರುವವರಿಗೆ ಕೂಡಲೇ ವೃದ್ಧಾಪ್ಯ ವೇತನ ಸಿಗುವಂತೆ ಸ್ಥಳದಲ್ಲಿಯೇ ಮಂಜೂರು ಪತ್ರ ನೀಡುವ, ತಾಲ್ಲೂಕು ದಂಡಾಧಿಕಾರಿಗಳಾದ ನಹಿದಾ ಜಮ್ ಜಮ್ ರವರು ನಮ್ಮ ತಾಲ್ಲೂಕಿನ ಜನತೆಯ ಪುಣ್ಯವೇ ಸರಿ ಎಂದರು.

Advertisement

ಯಾವುದೇ ಒಂದು ಕಾರ್ಯಕ್ರಮದಡಿಯಲ್ಲಿ ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಆ ಗ್ರಾಮದಲ್ಲಿನ ಹತ್ತಾರು ಕಾರ್ಯಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸುವಲ್ಲಿ ಯಶಸ್ವಿಯನ್ನು ಕಂಡ ದಿಟ್ಟ ಮಹಿಳೆ ಕೊರಟಗೆರೆಯ ತಹಸಿಲ್ದಾರ್ ನಹಿದಾ ಜಮ್ ಜಮ್ ಎಂದರೆ ತಪ್ಪಾಗಲಾರದು ಎಂದರು.

ಈ ಸಂದರ್ಭದಲ್ಲಿ ಶಿರಸ್ತೆದಾರರಾದ ಚಂದ್ರಪ್ಪ ,ಕಸಬಾ ಆರ್ ಐ ಪ್ರತಾಪ್,ವಿ ಎ ಬಸವರಾಜು ,ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಕಾಂತ್ ಸದಸ್ಯರಾದ ಮಲ್ಲಣ್ಣ, ಪಿಂಚಣಿ ಪಡೆಯುವ ಫಲಾನುಭವಿಗಳು ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next