ಕೊರಟಗೆರೆ: ಪಟ್ಟಣದಲ್ಲಿ ಎತ್ತಿನ ಹೊಳೆಯ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮ್ಯಾನೇಜರ್ ಅವಿನಾಶ್ ರವರ ಬಾಡಿಗೆ ಮನೆಯಲ್ಲಿ ಕಳೆದ ಶನಿವಾರ 35 ಲಕ್ಷ 20 ಸಾವಿರ ಹಣ ದರೋಡೆ ಪ್ರಕರಣ ಭೇದಿಸುವಲ್ಲಿ ಕೊರಟಗೆರೆ ಪೋಲೀಸರು ಯಶಸ್ವಿಯಾಗಿದ್ದು, ಮೂರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಹಣ ಕಳವು ಮಾಡಿದ್ದ ಬಂಧಿತ ಆರೋಪಿಗಳಾದ ಕೊರಟಗೆರೆ ನಿವಾಸಿ ಮಂಜುನಾಥ್(38) ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿ ಸಿದ್ದರಾಜು(32)ಮತ್ತು ಮಧುಗಿರಿ ತಾಲೂಕಿನ ಪುರವರ ಹೋಬಳಿಯ ವಡ್ಡರಹಟ್ಟಿ ಲಕ್ಷ್ಮೀ ನಾರಾಯಣ್ ಅಲಿಯಾಸ್ ನಾರಾಯಣ್(34) ಬಂಧಿತ ಆರೋಪಿಗಳಾಗಿದ್ದಾರೆ.
ಮೊದಲನೆ ಆರೋಪಿ ಮಂಜುನಾಥ್ ದೂರುದಾರ ಅವಿನಾಶ್ ರವರ ಕಾರು ಚಾಲಕನಾಗಿ ಮೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದನು.ಎರಡನೇ ಆರೋಪಿ ಸಿದ್ದರಾಜುವಿನ ಜತೆಗೆ ಸೇರಿಕೊಂಡು ಅವಿನಾಶ್ ಮನೆಯ ಕೀಗಳನ್ನು ಕಳುಹಿಸಿ ಅದೇ ತರಹದ ನಕಲೀ ಕೀಗಳನ್ನು ಕೊರಟಗೆರೆಯಲ್ಲಿ ತಯಾರು ಮಾಡಿಸಿದ್ದನು.
ಎರಡನೇ ಆರೋಪಿ ಸಿದ್ದರಾಜು ಕಡೆಯಿಂದ 35,20,000 ಹಣವನ್ನು ಕಳವು ಮಾಡಿ ಕೊರಟಗೆರೆ ಪಟ್ಟಣದ ಹೊರವಲಯದ ಲ್ಲಿ ನಾಲ್ಕನೇ ಆರೋಪಿ ಕೃತ್ಯಕ್ಕೆ ತಂದಿದ್ದ ವಾಹನದಲ್ಲಿ ಕುಳಿತುಕೊಂಡು ಎಲ್ಲರೂ ಹಂಚಿ ಕೊಂಡಿದ್ದಾರೆ ಎನ್ನಲಾಗಿದೆ.
ತುಮಕೂರು ಜಿಲ್ಲಾ ಪೋಲೀಸ್ ಅಧೀಕ್ಷಕರಾ ರಾಹುಲ್ ಕುಮಾರ್ ಶಹಾಪುರ್ ವಾಡ್ ನಿರ್ದೇಶನದಂತೆ ಮಧುಗಿರಿ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಹಾಗೂ ಕೊರಟಗೆರೆ ಸಿಪಿಐ ಸುರೇಶ್ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗುತ್ತು.ಈ ತಂಡವು ಬಹಳಷ್ಟು ಶ್ರಮವಹಿಸಿ ಆರೋಪಿಗಳನ್ನು ಕೇವಲ 5 ದಿನದಲ್ಲಿ ಪತ್ತೆ ಮಾಡಿ ಬಂಧಿತ ಆರೋಪಿಗಳಿಂದ 30ಲಕ್ಷ 20 ಸಾವಿರ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತುಮಕೂರು ಅಡಿಶನಲ್ಲ ಎಸ್ಪಿ ಉದೇಶ್ ಮಾರ್ಗದರ್ಶನದಂತೆ ಮಧುಗಿರಿ ಡಿವೈಎಸ್ಪಿ ವೇಂಕಟೇಶ್ ನಾಯ್ಡು ರವರ ತಂಡದ ನೇತೃತ್ವದಲ್ಲಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿಯಾಗಿದ್ದಾರೆ. ತಂಡಡದಲ್ಲಿ ಮೋಹನ್, ನರಸಿಂಹರಾಜು, ಸೈಯದ್ ರಿಪತ್ ಅಲಿ ಟೆಕ್ನಿಕಲ್ ಸೆಲ್ ನಟರಾಜು, ಜಗನ್ನಾಥ್ ಗಂಗಾಧರ್, ರಂಗನಾಥ್, ಶಶಿಕುಮಾರ್ ರಾಜ್ ಕುಮಾರ್ ರವರಿದ್ದರು. ತಂಡಕ್ಕೆ ಜಿಲ್ಲಾ ಪೋಲೀಸ್ ಅಧೀಕ್ಷಕಾರಾದ ರಾಹುಲ್ ಕುಮಾರ್ ಶಹಾಪುರ್ ವಾಡ್ ಅಭಿನಂಧಿಸಿದ್ದಾರೆ.