Advertisement

ಕೊರಟಗೆರೆ: ಸಂಚಾರ ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ಅರಿವು

08:32 PM Apr 18, 2022 | Team Udayavani |

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಪೋಲಿಸ್ ಉಪ ಠಾಣೆಯ ವ್ಯಾಪ್ತಿಯ ರಸ್ತೆಯಲ್ಲಿ ಅಡ್ಡಾದಿಡ್ಡಿ ದ್ವಿಚಕ್ರ ವಾಹನ ನಿಲ್ಲಿಸಬಾರದು ಹಾಗೂ ವಾಹನ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಉಪಠಾಣೆಯ ಎಎಸ್ಐ ಮಂಜುನಾಥ್ ಸಾರ್ವಜನಿಕರಿಗೆ ಅರಿವು ಮೂಡಿಸಿದರು,

Advertisement

ಎಎಸ್ಐ ಮಂಜುನಾಥ್ ಮಾತನಾಡಿ ಸಾರ್ವಜನಿಕರನ್ನು ಹೊಳವನಹಳ್ಳಿ ಬಸ್ ಸ್ಟಾಂಡ್ ಸರ್ಕಲ್ ನಲ್ಲಿ ಸಾರ್ವಜಿನಿಕರ ಸಭೆಯನ್ನು ಏರ್ಪಡಿಸಿ, ದ್ವಿಚಕ್ರ ವಾಹನ ಮತ್ತು ಆಟೋ ಚಾಲಕರಿಗೆ ನೀವುಗಳು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತೀರಿ, ಇದರಿಂದ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಆದಕಾರಣ ನೀವುಗಳು ಸರಿಯಾದ ಜಾಗದಲ್ಲಿ ನಿಲ್ಲಿಸಬೇಕು ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ವಾಹನದಲ್ಲಿ ಹತ್ತಿಸಿಕೊಂಡು ಸುರಕ್ಷಿತವಾಗಿ ಅವರ ಊರುಗಳಿಗೆ ತಲುಪಿಸಬೇಕು. ಆಟೋ ಚಾಲಕರು ಆಟೋ ಸ್ಟ್ಯಾಂಡ್ ನಲ್ಲಿ ಪಾರ್ಕಿಂಗ್ ಮಾಡಬೇಕು ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಓವರ್ ಸ್ವೀಡ್, ರೇಸಿಂಗ್ ಮಾಡುವುದು ನಿಯಮ ಉಲ್ಲಂಘನೆಯಾಗಿದೆ. ಮೊದಲ ಬಾರಿ 500 ರೂಪಾಯಿ ದಂಡ ಎರಡನೇ ಬಾರಿ ನಿಯಮ ಉಲ್ಲಂಘನೆ ಮಾಡಿದರೆ 10,000 ರೂಪಾಯಿ ದಂಡ, ವಿಮೆ ರಹಿತ ವಾಹನಕ್ಕೆ ಮೊದಲ ಬಾರಿ 2,000 ರೂಪಾಯಿ ಅಥವಾ ಎರಡನೇ ಬಾರಿ ನಿಯಮ ಉಲ್ಲಂಘನೆಗೆ 4,000 ರೂಪಾಯಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅನರ್ಹಗೊಂಡಿದ್ದರೂ ವಾಹನ ಚಾಲನೆ ಮಾಡಿದರೆ ದುಬಾರಿ ಮೊತ್ತ ದಂಡ ಪಾವತಿಸಬೇಕು. ಈ ನಿಯಮ ಉಲ್ಲಂಘನೆಗೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ವಾಹನ ಸವಾರರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಹೊಳವನಹಳ್ಳಿ ಉಪ ಠಾಣೆಯ ಮುಖ್ಯಪೇದೆ ಬಾಲಾ ನಾಯ್ಕ್, ಸಿಬ್ಬಂದಿಗಳಾದ ಶಿವಕುಮಾರ್, ದೊಡ್ಡ ಲಿಂಗಯ್ಯ ಎಎಸ್ಐ ರಾಮಚಂದ್ರಯ್ಯ ಹಾಗೂ ಸಾರ್ವಜನಿಕರು, ವಾಹನ ಚಾಲಕರು , ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next