ಕೊರಟಗೆರೆ: ತಾಲೂಕಿನ ಕೋಳಾಲ ಹೋಬಳಿ ನೀಲಗೊಂಡನಹಳ್ಳಿಯಲ್ಲಿ ಶವ ಸಂಸ್ಕಾರ ಮಾಡಲು ಸೂಕ್ತ ಜಾಗವಿಲ್ಲದ ಕಾರಣ ಕುಟುಂಬಸ್ಥರು ಗ್ರಾಮ ಪಂಚಾಯತ್ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಪಂಚಾಯತ್ ವ್ಯಾಪ್ತಿಯ ಇರಕಸಂದ್ರ ಕಾಲೋನಿಯಲ್ಲಿ ಶ್ಮಶಾನ ಇಲ್ಲದ ಕಾರಣ ಪ್ರತಿಭಟನೆ ಮಾಡಲಾಯಿತು.ಎಸ್ ಸಿ ,ಎಸ್ ಟಿ ಹಾಗೂ ಸಾರ್ವಜನಿಕ ಶ್ಮಶಾನ ಸಹಿತ ಇಲ್ಲದಂತಾಗಿದೆ.24 ಗಂಟೆ ಕಳೆದರೂ ಕೂಡ ಅಧಿಕಾರಿಗಳ ಯಾರೂ ಭೇಟಿ ಕೊಡದ ಕಾರಣ ವೆಂಕಟಮ್ಮರವರ ಶವ ಇಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಇಷ್ಟೆಲ್ಲಾ ಆದರೂ ಸಹಿತ ಯಾವೊಬ್ಬ ಅಧಿಕಾರಿಯೂ ಈವರೆಗೂ ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 70 ವರ್ಷಗಳಿಂದ ವಾಸವಿದ್ದರೂ ವಾಸಮಾಡಲು ಮನೆ ಇರುವುದಿಲ್ಲ ಮೃತಪಟ್ಟವರಿಗೆ ಅಂತ್ಯಸಂಸ್ಕಾರ ಮಾಡಲು ಗೇಣುದ್ದ ಜಾಗವೂ ಇಲ್ಲ.ಸ್ಮಶಾನಕ್ಕೆ ಭೂಮಿ ಕೊಡು ಗುರುತಿಸಿ ಕೊಡುವಂತೆ ಕೊಟ್ಟ ಅರ್ಜಿಗಳೆಲ್ಲ ಅಧಿಕಾರಿಗಳ ಕಸದ ಬುಟ್ಟಿ ಸೇರಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮೀನು ಹಸ್ತಾಂತರ ಮಾಡಲಾಗಿದೆ
ಸರ್ವೆ ನಂಬರ್57 ರಲ್ಲಿ1ಎಕರೆ ಸರ್ಕಾರಿ ಜಮೀನಿನನ ಸಾರ್ವಜನಿಕರು ಮೃತ ಪಟ್ಟ ಶವ ಸಂಸ್ಕಾರಕ್ಕೆ ಅನುಕೂಲವಾಗಲೇಂದು ಈಗಾಗಲೇ ಜಿಲ್ಲಾಧಿಕಾರಿಗಳಿಂದ 2014-2015 ನೇ ಸಾಲಿನಲ್ಲಿ ಮಂಜೂರಾಗಿದ್ದು, ಈ ಜಮೀನನ್ನು ಗ್ರಾಪಂಗೆ ಹಸ್ತಾಂತರ ಮಾಡಲಾಗಿದೆ.
ಸಾರ್ವಜನಿಕರು ಈ ಜಾಗದಲ್ಲಿ ಶವ ಸಂಸ್ಕಾರ ಮಾಡಲುಈ ಜಮೀನು ಸುಮಾರು 1ಕಿಲೋಮೀಟರ್ ದೂರವಿರುವ ಕಾರಣ ಶವ ಸಂಸ್ಕಾರಕ್ಕೆ ಮೃತ ಪಟ್ಟ ವಾರಸುದಾರರು ಬಳಸುತ್ತಿಲ್ಲ. ಹಾಗೂ ಈ ಜಾಗವು ಬಂಡೆ ಹಾಗೂ ಬೇಲಿಗಳಿಂದ ಕೂಡಿದ್ದು ಗ್ರಾಪಂ ನವರು ಈ ಜಮೀನನ್ನು ಶುಚಿಗೊಳಿಸಿಲ್ಲ ಮತ್ತು ಜಾಗವು ದೂರವಿರುವ ಕಾರಣ ಅಲ್ಲಿ ಹೋಗಿ ಶವ ಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಅದರೆ ಮೃತಪಟ್ಟ ವೆಂಕಟಮ್ಮನವರ ಶವವನ್ನು ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮಖದಲ್ಲಿ ಶವ ಸಂಸ್ಕಾರ ನಡೆಸಲಾಯಿತು.
ಸರ್ವೆ ನಂಬರ್ 27 ರಲ್ಲಿ 1 ಎಕರೆ ಜಮೀನಿದ್ದು ಇದು ಗ್ರಾಮಕ್ಕೆ ಹತ್ತಿರವಿದೆ.ತಕ್ಷಣವೇ ಸರ್ವೆ ಇಳಾಖೆಗೆ ದೂರವಾಣಿ ಮುಖಾಂತರ ಸರ್ವೆ ಮಾಡಿಕೊಡಲು ಸರ್ವೆ ಇಲಾಖೆಗೆ ಆದೇಶಿಸಿದ್ದೇನೆ ಎಂದು ಕೋಳಾಲ ಹೋಬಳಿಯ ಉಪ ತಹಶಿಲ್ದಾರ್ ಮಧುಚಂದ್ರ ಉದಯವಾಣಿಗೆ ತಿಳಿಸಿದರು.